ಜುಲೈ 4, 1997 ರಂದು ಅಲ್ಲೂರಿ ವೆಂಕಟ ರಾಮರಾಜು ಮತ್ತು ಸತ್ಯನಾರಾಯಣಮ್ಮ ದಂಪತಿಗಳಿಗೆ ಜನಿಸಿದ ಅಲ್ಲೂರಿ ಸೀತಾರಾಮರು, ಬುಡಕಟ್ಟು ಪ್ರದೇಶಗಳಲ್ಲಿ, ಬ್ರಿಟಿಷರ ಶೋಷಣೆಗೆ ತುತ್ತಾಗಿದ್ದ ಮುಗ್ಧ, ದುರ್ಬಲ ಜನರ ಧ್ವನಿಯಾಗಿ, ಶಕ್ತಿಯಾಗಿ ನಿಂತಂತಹ ಮಹಾನ್ ಹೋರಾಟಗಾರ. ಆ ದಿನಗಳಲ್ಲಿ,ಆದಿವಾಸಿಗಳನ್ನೆಲ್ಲಾ ಒಂದುಗೂಡಿಸಿ, ಅವರಿಗೆ ಗೆರಿಲ್ಲಾ ಯುದ್ಧವನ್ನು ಕಲಿಸಿದರು ಮತ್ತು ವಸಾಹತುಶಾಹಿ ಶಕ್ತಿಯೊಂದಿಗೆ ಹೋರಾಡಲು ತರಬೇತಿ ನೀಡಿದರು. ಅವರು ಸಾಹಸಿ ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಸೀತಾರಾಮರು, ಧೈರ್ಯಶಾಲಿ ಕ್ರಾಂತಿಕಾರಿಯಾಗಿ ಬದುಕಿದ್ದು, ಇಂದಿಗೂ ಆಂಧ್ರಪ್ರದೇಶದ ಬುಡಕಟ್ಟು ಜನಾಂಗದವರಿಗೆ ಆರಾಧ್ಯ ದೈವವಾಗಿ ಉಳಿದಿದ್ದಾರೆ.
ಬ್ರಿಟಿಷ್ ಸರ್ಕಾರವು ಅರಣ್ಯ ಕಾಯಿದೆ, 1882 ಅನ್ನು ಅಂಗೀಕರಿಸಿದಾಗ (ಇದು ಅಲ್ಲಿನ ಜನರ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು, ವರ್ಗಾವಣೆಯ ಕೃಷಿ ಅಭ್ಯಾಸ ಮಾಡುವುದನ್ನು ನಿಷೇಧಿಸಿತು. ಒಂದು ರೀತಿಯ ಬೆಳೆಗಳನ್ನು ಬೆಳೆಸಲು ಒತ್ತಾಯಿಸಿತು) ಆ ವೇಳೆಯಲ್ಲಿ ಅಲ್ಲೂರಿ ಸೀತಾರಾಮರು “ರಾಂಪ ದಂಗೆ” / ಮಾನ್ಯಂ ದಂಗೆಯನ್ನು ಪ್ರಾರಂಭಿಸಿದರು (1922-1924). ಸತತವಾಗಿ ಎರಡು ವರ್ಷಗಳ ಕಾಲ, ಬ್ರಿಟಿಷ್ ಪಡೆಗಳೊಂದಿಗೆ ಅನೇಕ ಬಾರಿ ಹೋರಾಡಿ ಜಯಿಸಿದರು. ಇದರಿಂದ ಅವರಿಗೆ “ಮಾನ್ಯಂ ವೀರುಡು” ಅಥವಾ “ಜಂಗಲ್ ಹೀರೋ” ಎಂಬ ಬಿರುದು ಸಿಕ್ಕಿತು. ಬ್ರಿಟಿಷರು ಸೀತಾರಾಮರನ್ನು ಸೆರೆಹಿಡಿಯಲು ತುಂಬಾ ಶ್ರಮಿಸಿದರು. ಕೊನೆಗೆ ಬ್ರಿಟಿಷ್ ನಿಯೋಜಿತ ಅಸ್ಸಾಂ ರೈಫಲ್ ಬೆಟಾಲಿಯನ್ ಗೆ ಸೆರೆಯಾಗಬೇಕಾಯಿತು.
1986 ರಲ್ಲಿ, ಭಾರತೀಯ ಅಂಚೆ ಇಲಾಖೆಯು ಅವರ ಸ್ವಾತಂತ್ರಯ ಹೋರಾಟದ ಪ್ರತೀಕ ಒಂದು ಅಂಚೆಚೀಟಿಯನ್ನು ಬಿಡುಗಡೆ ಮಾಡಿತು.
