Home ವಿಶೇಷ ಗಾಂಧೀಜಿಯವರ ನೈಜ ಅನುಯಾಯಿ ಮೃದುಲಾ ಸಾರಾಭಾಯಿ

ಗಾಂಧೀಜಿಯವರ ನೈಜ ಅನುಯಾಯಿ ಮೃದುಲಾ ಸಾರಾಭಾಯಿ

0

ಮೃದುಲಾ ಸಾರಾಭಾಯಿ ಅವರು ಅಹಮದಾಬಾದ್ನಲ್ಲಿ ಅತ್ಯಂತ  ದೊಡ್ಡ ಕುಟುಂಬವೊಂದರಲ್ಲಿ ಜನಿಸಿದರು. ಈಕೆ ಪರಮಾಣು ವಿಜ್ಞಾನಿ ವಿಕ್ರಮ್ ಸಾರಾಭಾಯ್ ಅವರ ಸಹೋದರಿ. ಆ ದಿನಗಳಲ್ಲಿ, ಮಹಿಳಾ ಸತ್ಯಾಗ್ರಹಿಗಳಿಗೆ ತರಬೇತಿ ನೀಡಲು ಸಬರಮತಿ ಆಶ್ರಮದಲ್ಲಿ ವಿಶೇಷ ತರಗತಿಗಳನ್ನು ಕೈಗೊಳ್ಳಲಾಗುತ್ತಿತು. ಮೃದುಲಾ, ವಿದೇಶ್ ಕಪಾಡಾ ಬಹಿಷ್ಕರ್ ಸಮಿತಿಯ (ವಿದೇಶಿ ಬಟ್ಟೆ ಬಹಿಷ್ಕಾರ ಸಂಘ) ಕಾರ್ಯದರ್ಶಿಯಾಗಿದ್ದರು. ಈ ಸಂಘವನ್ನು ಸರಳಾದೇವೆ ಸಾರಾಭಾಯಿಯವರ ಅಧ್ಯಕ್ಷತೆಯಲ್ಲಿ ಅಹಮದಾಬಾದ್‌ ನಲ್ಲಿ ಸ್ಥಾಪಿಸಲಾಯಿತು. ದಿನನಿತ್ಯ ಮಹಿಳೆಯರು ಸ್ವಯಂಸೇವಕರ ಬ್ಯಾಡ್ಜ್‌ ಗಳೊಂದಿಗೆ ಕೇಸರಿ ಸೀರೆಗಳನ್ನು ಧರಿಸಿ ಮೆರವಣಿಗೆ ನಡೆಸುತ್ತಿದ್ದರು,  ಸಭೆಗಳನ್ನು ನಡೆಸುತ್ತಿದ್ದರು ಮತ್ತು ನಗರದಾದ್ಯಂತ ಕರಪತ್ರಗಳನ್ನು ಹಂಚುತ್ತಿದ್ದರು. ಮಹಿಳಾ ಸ್ವಯಂಸೇವಕರು ವಿದೇಶಿ ಬಟ್ಟೆ ಮತ್ತು ಮದ್ಯ ಮಾರಾಟ ಮಾಡುವ ಅಂಗಡಿಗಳ ಮುಂದೆ ನಿಂತು ಈ ಉತ್ಪನ್ನಗಳನ್ನು ಖರೀದಿಸದಂತೆ ಜನರಿಗೆ ಮನವರಿಕೆ ಮಾಡುತ್ತಿದ್ದರು.

ಮೃದುಲಾ ಸಾರಾಭಾಯ್ ಅವರ ಧೈರ್ಯ, ಕೆಚ್ಚೆದೆ, ಕಂಡುಬಂದಿದ್ದು ಅಹಮದಾಬಾದ್ (1941) ಮತ್ತು ಮೀರತ್ ನಲ್ಲಿ ನಡೆದ (1946) ಕೋಮು ಗಲಭೆಗಳಲ್ಲಿ ಭಾಗವಹಿಸಿದ ಸಂದರ್ಭದಲ್ಲಿ. ಈಕೆ,  ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಹೋಗಿ, ಗಲಭೆಕೋರರಿಂದ ಜನರನ್ನು ರಕ್ಷಿಸಿದರು. ಆ ಪ್ರದೇಶಗಳ ಶಾಂತಿಯನ್ನು ಪುನಃಸ್ಥಾಪಿಸಲು ಶ್ರಮಿಸುವುದರ  ಮೂಲಕ ಜನರಲ್ಲಿನ ಭಯವನ್ನು ಹೋಗಲಾಡಿಸಿದರು. ಇವರ ಧೈರ್ಯವನ್ನು ಮಹಾತ್ಮ ಗಾಂಧಿಯವರು ಸ್ವತಃ ಶ್ಲಾಘಿಸಿದ್ದಾರೆ. ಮೃದುಲಾ, ಹೊಸದಾಗಿ ರಚಿಸಲಾದ ಶಾಂತಿ ಸೇವಕ ಸಂಘದ (ಶಾಂತಿ ಕಾರ್ಯಕರ್ತರ ಒಕ್ಕೂಟ) ಸದಸ್ಯರಾಗಿದ್ದರು. ಗಾಂಧೀಜಿಯವರು ಮೃದುಲಾರನ್ನು,  ಕಸ್ತೂರ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ (ಕೆಜಿಎನ್ಎಂಟಿ) ಟ್ರಸ್ಟಿಯಾಗಿ ಕೂಡ ನೇಮಿಸಿದ್ದರು. ಅವರು ಟ್ರಸ್ಟ್ ನ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಸೇವಾಗ್ರಾಮ್ ನಲ್ಲಿ ನಡೆದ ಹತ್ತನೇ ಕೆಜಿಎನ್ಎಂಟಿ ಸಭೆಯಲ್ಲಿ,  ಮೇಡಮ್ ಆಂಗ್ ಸಾನ್ (ಸ್ವತಂತ್ರ ಬರ್ಮಾದ  ಮೊದಲ ಪ್ರಧಾನ ಮಂತ್ರಿಯ ವಿಧವಾ ಪತ್ನಿ) ಅವರನ್ನು ಆಹ್ವಾನಿಸಿದರು. ದೇಶವಿಭಜನೆಯ ನಂತರ, ಅಪಹರಣಕ್ಕೊಳಗಾದ ಮಹಿಳೆಯರನ್ನು ಕಾಪಾಡುವ ಕಾರ್ಯಾಚರಣೆಯು ಮೃದುಲಾ ಸಾರಾಬಾಯಿಯವರ ನೇತೃತ್ವದಲ್ಲಿ ಜರುಗಿತ್ತು.

You cannot copy content of this page

Exit mobile version