Saturday, October 26, 2024

ಸತ್ಯ | ನ್ಯಾಯ |ಧರ್ಮ

ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಪ್ರಯತ್ನಿಸಿದ 90 ಸಾವಿರ ಭಾರತೀಯರ ಬಂಧನ, ಅವರಲ್ಲಿ ಅರ್ಧದಷ್ಟು ಜನರು ಗುಜರಾತಿಗಳು!

ಅಹಮದಾಬಾದ್, ಅಕ್ಟೋಬರ್ 25: ಭಾರತ ಬಿಟ್ಟು ಅಮೆರಿಕದಲ್ಲಿ ನೆಲೆಸುವ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಕೆಲವರು ಅಕ್ರಮ ಮಾರ್ಗಗಳನ್ನು ಆರಿಸಿಕೊಳ್ಳುತ್ತಿದ್ದಾರೆ.

ಅನೇಕ ಜನರು ಅಪಾಯಕಾರಿ ರೀತಿಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಲ್ಲಿ ಸಾವಿರಾರು ಜನರು ಬಂಧನಕ್ಕೆ ಒಳಗಾಗಿ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಿಂದ ಬಂದವರು.

US ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (US-CBP) ದತ್ತಾಂಶದ ಪ್ರಕಾರ, ಕಳೆದ US ಆರ್ಥಿಕ ವರ್ಷದ (ಅಕ್ಟೋಬರ್ 1, 2023ರಿಂದ ಸೆಪ್ಟೆಂಬರ್ 30, 2024) ನಡುವೆ, ಭದ್ರತಾ ಸಿಬ್ಬಂದಿಯು ಅಮೇರಿಕವನ್ನು ಅಕ್ರಮವಾಗಿ ಪ್ರವೇಶಿಸುತ್ತಿದ್ದ 29 ಲಕ್ಷ ಜನರನ್ನು ಬಂಧಿಸಿದ್ದಾರೆ. ಅವರಲ್ಲಿ 90,415 ಮಂದಿ ಭಾರತೀಯರು. ಅಂದರೆ ಪ್ರತಿ ಗಂಟೆಗೆ 10 ಭಾರತೀಯರು ಅಕ್ರಮವಾಗಿ ಅಮೆರಿಕಕ್ಕೆ ಹೋಗಲು ಯತ್ನಿಸಿ ಸಿಕ್ಕಿ ಬೀಳುತ್ತಿದ್ದಾರೆ. ಬಂಧಿತ ಭಾರತೀಯರಲ್ಲಿ ಶೇಕಡ 50ರಷ್ಟು ಮಂದಿ ಗುಜರಾತ್ ಮೂಲದವರು ಎಂದು ತಿಳಿದುಬಂದಿದೆ.

ಮೆಕ್ಸಿಕೋ ಮತ್ತು ಕೆನಡಾದಿಂದ

ಅಮೆರಿಕ ಪ್ರವೇಶಿಸುತ್ತಿರುವ ಅಕ್ರಮ ವ್ಯಕ್ತಿಗಳು ಮೆಕ್ಸಿಕೊ ಮತ್ತು ಕೆನಡಾದಿಂದ ಪ್ರವೇಶಿಸುತ್ತಿದ್ದಾರೆ. ಮೆಕ್ಸಿಕೋದಿಂದ ಬರುವ ಮಾರ್ಗವನ್ನು ಡಾಂಕಿ ರೂಟ್ ಎಂದು ಕರೆಯಲಾಗುತ್ತದೆ. ಆದರೆ, ಅಕ್ರಮ ವಲಸಿಗರನ್ನು ಏಜೆಂಟರು ಮೆಕ್ಸಿಕೋಗೆ ತೆರಳುವ ಮುನ್ನ ಕೆಲ ದಿನಗಳ ಕಾಲ ದುಬೈ ಅಥವಾ ಟರ್ಕಿಯಲ್ಲಿ ಇರಿಸಿದ್ದು, ಈ ವೇಳೆ ಅಮೆರಿಕ ಅಡ್ಡಗಟ್ಟಿದೆ ಎಂದು ತಿಳಿದುಬಂದಿದೆ. ಈಗ ಹೆಚ್ಚಿನವರು ಕೆನಡಾದಿಂದ ಅಮೆರಿಕ ಪ್ರವೇಶಿಸುತ್ತಿದ್ದಾರೆ ಎನ್ನಲಾಗಿದೆ. ಹಲವರು ಪ್ರವಾಸಿ ವೀಸಾದಲ್ಲಿ ಕೆನಡಾಕ್ಕೆ ಹೋಗಿ ಅಲ್ಲಿಂದ ಅಮೆರಿಕದ ಗಡಿ ದಾಟುತ್ತಾರೆ. ಅಂಥವರು ಸಿಕ್ಕರೆ ಅಮೆರಿಕದ ಭದ್ರತಾ ಸಂಸ್ಥೆಗಳು ಅವರನ್ನು ಮತ್ತೆ ಕೆನಡಾದಲ್ಲಿ ಬಿಡುಗಡೆ ಮಾಡುತ್ತವೆ ಎನ್ನಲಾಗಿದೆ. ಆದರೆ, ಬಂಧಿತರಿಗಿಂತ ತಂಡೋಪತಂಡವಾಗಿ ಗಡಿ ದಾಟುವವರ ಸಂಖ್ಯೆಯೇ ಹೆಚ್ಚು ಎಂದು ವರದಿ ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page