ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ನಡುವೆ ಯುದ್ಧ ನಡೆಯದಂತೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದು, ಇದೊಂದು ಹೃದಯಸ್ಪರ್ಶಿ ಬೆಳವಣಿಗೆ ಎಂದು ಅಮೇರಿಕಾ ಮತ್ತೊಮ್ಮೆ ಪುನರುಚ್ಚರಿಸಿದೆ. ಈ ಬಗ್ಗೆ ಭಾರತ ಎಷ್ಟೇ ಬಾರಿ ಅಲ್ಲಗಳೆದರೂ ಅಮೇರಿಕಾ ಮತ್ತೆ ಮತ್ತೆ ತನ್ನ ಮಧ್ಯಸ್ಥಿಕೆ ಬಗ್ಗೆ ಹೇಳಿಕೆ ನೀಡುತ್ತಿದೆ.
ಅಮೇರಿಕಾದ ವಿದೇಶಾಂಗ ಇಲಾಖೆ ವಕ್ತಾರೆ ಟ್ಯಾಮಿ ಬ್ರೂಸ್ ಅವರು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, “ಭಾರತ-ಪಾಕ್ ನಡುವೆ ಕದನ ವಿರಾಮ ಏರ್ಪಟ್ಟಿದೆ. ನಮ್ಮ ಮಧ್ಯಸ್ಥಿಕೆಯಿಂದ ಬಿಕ್ಕಟ್ಟು ಶಮನ ಆಗಿದ್ದಕ್ಕೆ ಸಂತಸವಿದೆ’ ಎಂದಿದ್ದಾರೆ.
ಯುದ್ಧದ ನಡುವೆ ಅಮೇರಿಕಾದ ಭಾಗಿದಾರಿಕೆ ಮತ್ತು ನೆರವು, ಭಾರತ ಪಾಕಿಸ್ತಾನದ ನಡುವೆ ಯುದ್ಧ ನಡೆಯುವುದನ್ನು ತಡೆಯಲು ಸಾಧ್ಯವಾಗಿದೆ. ಇದು ಅಮೇರಿಕಾದ ಹೆಗ್ಗಳಿಕೆ ಎಂದು ಅಮೇರಿಕಾ ಹೇಳಿಕೊಂಡಿದೆ.