14 ದಲಿತ ಮಹಿಳಾ ಕಾರ್ಮಿಕರನ್ನು ಕೂಡಿಟ್ಟು ಹಿಂಸೆ ಕೊಟ್ಟ ಎಸ್ಟೇಟ್ ಮಾಲೀಕ

ಚಿಕ್ಕಮಗಳೂರು: 14 ಮಂದಿ ದಲಿತ ಮಹಿಳಾ ಕಾರ್ಮಿಕರನ್ನು ಕೂಡಿ ಹಾಕಿದಲ್ಲದೆ ಅವರ ಮೇಲೆ ಮೇಲ್ಜಾತಿಯ ಎಸ್ಟೇಟ್ ಮಾಲೀಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ತಾಲೂಕಿನ ಜೇನುಗುಡ್ಡೆಯಲ್ಲಿ ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತ ಇಮ್ರಾನ್ ಖಾನ್ ಟ್ವಿಟರ್‌ನಲ್ಲಿ ವೀಡಿಯೋಗಳನ್ನು ಪೋಸ್ಟ್ ಮಾಡಿದ್ದು, ಬೀಗ ಹಾಕಿದ ಮನೆಯೊಂದರೊಳಗೆ ಕಾರ್ಮಿಕರು ಇರುವ ದೃಶ್ಯಗಳು ಕಂಡುಬAದಿದೆ. ಅಲ್ಲದೆ ಗರ್ಭಿಣಿ ಮಹಿಳೆಯೊಬ್ಬರ ಮೇಲೆ ಹಲ್ಲೆಮಾಡುವ ದೃಶ್ಯವು ಕಂಡುಬಂದಿದೆ.

ದೌರ್ಜನ್ಯ ಎಸಗಿರುವ ಎಸ್ಟೇಟ್ ಮಾಲೀಕ ಜಗದೀಶ್ ಗೌಡ ಭಾರತೀಯ ಜನತಾ ಪಕ್ಷದ ಸ್ಥಳೀಯ ಮುಖಂಡ ಎಂದು ಹೇಳಲಾಗಿದೆ.

ದೌರ್ಜನ್ಯಕ್ಕೆ ಒಳಗಾದ ಎಲ್ಲಾ ದಲಿತ ಕಾರ್ಮಿಕರನ್ನು ರಕ್ಷಿಸಲಾಗಿದ್ದು ಎಲ್ಲರನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೋಲೀಸರು ಈಗ ಪ್ರಕರಣವನ್ನು ದಾಖಲಿಸಿಕೊಳ್ಳುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು