Wednesday, July 30, 2025

ಸತ್ಯ | ನ್ಯಾಯ |ಧರ್ಮ

ನ್ಯೂಸ್‌ಕ್ಲಿಕ್ ಪತ್ರಕರ್ತರ ಮನೆಗಳ ಮೇಲೆ ದಾಳಿ: ಮಾಧ್ಯಮಗಳ ಬಾಯಿ ಮುಚ್ಚಿಸುವ ಯತ್ನ – ಎಡಿಟರ್ಸ್‌ ಗಿಲ್ಡ್‌

ನವದೆಹಲಿ, ಅಕ್ಟೋಬರ್ 3: ಆನ್‌ಲೈನ್ ಪೋರ್ಟಲ್ ನ್ಯೂಸ್‌ಕ್ಲಿಕ್‌ಗೆ ಸಂಬಂಧಪಟ್ಟ ಪತ್ರಕರ್ತರ ನಿವಾಸಗಳ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿರುವ ಬಗ್ಗೆ  ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಕಳವಳ ವ್ಯಕ್ತಪಡಿಸಿದೆ. ಮಂಗಳವಾರ ನಡೆದಿರುವ ಮೂವತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆದಿರುವ ದಾಳಿಗಳನ್ನು  “ಮಾಧ್ಯಮಗಳ ಬಾಯಿ ಮುಚ್ಚಿಸುವ ಮತ್ತೊಂದು ಪ್ರಯತ್ನ” ಎಂದು ಟೀಕಸಿದೆ.

ಆಗಸ್ಟ್ 17 ರಂದು ಯುಎಪಿಎ ಮತ್ತು 153A (ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ಮತ್ತು 120B (ಕ್ರಿಮಿನಲ್ ಪಿತೂರಿ) ಸೇರಿದಂತೆ ಐಪಿಸಿಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾಗಿರುವ  ದೂರಿಗೆ ಸಂಬಂಧಿಸಿದಂತೆ ಈ ದಾಳಿಗಳು ನಡೆದಿವೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಎಡಿಟರ್ಸ್ ಗಿಲ್ಡ್ ಇಂದು ಮುಂಜಾನೆ ಹಿರಿಯ ಪತ್ರಕರ್ತರ ಮನೆಗಳ ಮೇಲೆ ನಡೆದ  ಈ ದಾಳಿಯ ಬಗ್ಗೆ “ಅತೀವ ಕಳವಳಕಾರಿ” ಎಂದು ಹೇಳಿಕೆ ನೀಡಿದೆ. ಈ ಸಂದರ್ಭದಲ್ಲಿ ಅವರ ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಇತರ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಿರಿಯ ಪತ್ರಕರ್ತರನ್ನು ದೆಹಲಿ ಪೊಲೀಸರು ‘ತನಿಖೆ’ಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.  

ಪತ್ರಕರ್ತರ ಮನೆಗಳ ಮೇಲೆ ದೆಹಲಿ ಪೊಲೀಸ್‌ ದಾಳಿ: ನ್ಯೂಸ್‌ಕ್ಲಿಕ್‌ ಮೇಲೆ UAPA ಅಡಿಯಲ್ಲಿ ಕೇಸ್

ಈ ದಾಳಿ ಮಾಧ್ಯಮಗಳನ್ನು ಮೌನವಾಗಿಸುವ ಮತ್ತೊಂದು ಪ್ರಯತ್ನ ಎಂದು ಕಳವಳ ವ್ಯಕ್ತಪಡಿಸಿರುವ EGI “ನಿಜವಾದ ಅಪರಾಧಗಳು ನಡೆದಿದ್ದರೆ ಕಾನೂನು ತನ್ನ ಮಾರ್ಗವನ್ನು ತೆಗೆದುಕೊಳ್ಳಬೇಕು. ಕಠೋರ ಕಾನೂನುಗಳ ಅಡಿಯಲ್ಲಿ ಬೆದರಿಸುವುದು, ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ, ಭಿನ್ನ ಮತ್ತು ವಿಮರ್ಶಾತ್ಮಕ ಧ್ವನಿಗಳನ್ನು ನಿಯಂತ್ರಿಸುವುದು ಸರಿಯಲ್ಲ, ”ಎಂದು ಹೇಳಿಕೆ ನೀಡಿದೆ.

“ಪ್ರಜಾಪ್ರಭುತ್ವದಲ್ಲಿ ಸ್ವತಂತ್ರ ಮಾಧ್ಯಮಗಳ ಪ್ರಾಮುಖ್ಯತೆಯನ್ನು ನಾವು ಸರ್ಕಾರಕ್ಕೆ ನೆನಪಿಸುತ್ತೇವೆ. ಅವುಗಳನ್ನು ನಾಲ್ಕನೇ ಸ್ತಂಭವೆಂದು ಗೌರವಿಸಿ, ರಕ್ಷಿಸಲು ಒತ್ತಾಯಿಸುತ್ತೇವೆ” ಎಂದು ಆಗ್ರಹಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page