ಚಿಕ್ಕಮಗಳೂರು: ಜಿಲ್ಲೆಯ ಕಾಡಿನಲ್ಲಿ ತಂಡದಿಂದ ಬೇರ್ಪಟ್ಟು ತಪ್ಪಿಸಿಕೊಂಡಿದ್ದ ಮತ್ತೋರ್ವ ನಕ್ಸಲ್ ಶರಣಾಗತಿಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಆತ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರನ್ನು ಆತ ಸಂಪರ್ಕಿಸಿದ್ದಾನೆ ಎಂದು ಅರ್ಹ ಮೂಲಗಳು ತಿಳಿಸಿವೆ.
ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ನಕ್ಸಲ್ ರವೀಂದ್ರ ಶರಣಾಗತಿಗೆ ಮುಂದಾಗಿರುವ ನಕ್ಸಲ್ ಆರೋಪಿ. ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರನ್ನು ರವೀಂದ್ರ ಸಂಪರ್ಕಿಸಿದ್ದು, ಇನ್ನೊಂದು ವಾರದಲ್ಲಿ ಶರಣಾಗತಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜನವರಿ 8ರಂದು ಆರು ಮಂದಿ ನಕ್ಸಲರು ಮುಖ್ಯಮಂತ್ರಿ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಶರಣಾಗಿದ್ದರು. ಈ ಮಧ್ಯೆ ನಕ್ಸಲ್ ರವೀಂದ್ರ ಕೇರಳ ಅಥವಾ ತಮಿಳುನಾಡಿಗೆ ಪರಾರಿಯಾಗಿರುವ ವದಂತಿ ಹಬ್ಬಿತ್ತು. ಈಗ ಸುಳ್ಳಾಗಿದ್ದು, ಮುಂದಿನ ವಾರ ಸರ್ಕಾರದ ಮುಂದೆ ಶರಣಾಗುವ ಸಂಭವವಿದೆ.