ಧಾರವಾಡ : ಅಲೆಮಾರಿ ಗಂಟಿಚೋರ ಸಮುದಾಯದಿಂದ ಸಚಿವ ಸಂತೋಷ್ ಲಾಡ್ ಅವರಿಗೆ ನಿವೇಶನದ ಹಕ್ಕುಪತ್ರ ಒದಗಿಸಲು ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜಶೇಖರ್ ಡೊಕ್ಕಣ್ಣನವರ್ ಅವರ ನೇತೃತ್ವದಲ್ಲಿ ಮನವಿ ಮಾಡಲಾಯಿತು.
ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧ್ಯಕ್ಷತೆಯಲ್ಲಿ ನಡೆದ ಜನತಾ ದರ್ಶನದಲ್ಲಿ ಹುಬ್ಬಳ್ಳಿಯಲ್ಲಿ ಸೆಂಟ್ಲಿಮಿಂಟ್ ಏರಿಯಾದಲ್ಲಿ ಅಲೆಮಾರಿ ಗಂಟಿಚೋರ್ ಸಮುದಾಯದವರು ಅರವತ್ತು ವರ್ಷಗಳಿಂದ ವಾಸವಾಗಿದ್ದರೂ, ಸರ್ಕಾರದಿಂದ ಇಲ್ಲಿಯವರೆಗೂ ಮನೆ ಹಕ್ಕುಪತ್ರ ಕೊಟ್ಟಿರುವುದಿಲ್ಲ. ಹಾಗೆಯೇ ಸರ್ಕಾರದಿಂದಲೂ ಯಾವುದೇ ಮನೆಗಳನ್ನು ಮಂಜೂರು ಮಾಡಿರುವುದಿಲ್ಲ..
ಮತ್ತಿತ್ತರ ಯಾವುದೇ ಸೌಲಭ್ಯಗಳನ್ನು ಪಡೆಯದೇ ನಾವೇ ಸ್ವಂತ ಮನೆಗಳನ್ನು ಕಟ್ಟಿಕೊಂಡಿದ್ದೇವೆ ಆದ್ದರಿಂದ ಇಲ್ಲಿಯವರೆಗೂ ಯಾರೂ ಬಂದರೂ ಕೂಡ ನಮಗೆ ಮನೆ ಹಕ್ಕುಪತ್ರ ಕೊಟ್ಟಿಲ್ಲ ಎಂಬುದಾಗಿ ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜಶೇಖರ್ ಡೊಕ್ಕಣ್ಣನವರ್ ಇಂದು ಸಚಿವರ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಇಲ್ಲಿ 30 ರಿಂದ 40 ಮನೆಗಳಿಗೆ ಹಕ್ಕುಪತ್ರ ಕೊಡುವಂತೆ ಸಚಿವರಿಗೆ ಧಾರವಾಡ ಜಿಲ್ಲಾ ಅಲೆಮಾರಿ ಬುಡಕಟ್ಟು ಮಹಾಸಭಾ ವತಿಯಿಂದ ಮುರಳಿ ದತ್ತವಾಡ್ ಅವರೊಂದಿಗೆ ಮನವಿ ಸಲ್ಲಿಸಿದ್ದೇವೆ ಎಂದು ರಾಜಶೇಖರ ಡೊಕ್ಕಣ್ಣವರ ತಿಳಿಸಿದರು. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದಂತಹ ಸಂತೋಷ ಲಾಡ್ ಅವರು ಇನ್ನೂ ಕೆಲವೇ ದಿನಗಳಲ್ಲಿ ನಿಮಗೆ ಹಕ್ಕುಪತ್ರಗಳನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹನುಮಂತಪ್ಪ ಉಳ್ಳಿ, ಕಲ್ಪನಾ ಜಾಧವ್, ಸಂಜೀವಿನಿ ಮತ್ತು ಗಂಟಿಚೋರ್ ಸಮುದಾಯದ ಹಿರಿಯರು ಸೇರಿದಂತೆ ಅನೇಕರು ಇದ್ದರು.