Wednesday, March 26, 2025

ಸತ್ಯ | ನ್ಯಾಯ |ಧರ್ಮ

ಪಕ್ಷ ವಿರೋಧಿ ಚಟುವಟಿಕೆ: ಹೆಬ್ಬಾರ್‌, ಸೋಮಶೇಖರ ಮತ್ತು ರೇಣುಕಾಚಾರ್ಯ ಸೇರಿ 5 ಬಿಜೆಪಿ ನಾಯಕರಿಗೆ ನೋಟಿಸ್ ಜಾರಿ

ದೆಹಲಿ: ಬಿಜೆಪಿ ಕೇಂದ್ರ ನಾಯಕತ್ವ ಮಂಗಳವಾರ ಮೂವರು ಶಾಸಕರು ಸೇರಿದಂತೆ ರಾಜ್ಯದ ಐದು ನಾಯಕರಿಗೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಡಿ ಶೋ-ಕಾಸ್ ನೋಟಿಸ್ ಜಾರಿ ಮಾಡಿದೆ.

ಪಕ್ಷವು ಶಾಸಕರಾದ ಶಿವರಾಮ್ ಹೆಬ್ಬಾರ್, ಎಸ್ ಟಿ ಸೋಮಶೇಖರ್, ಬಿ ಪಿ ಹರೀಶ್ ಮತ್ತು ಮಾಜಿ ಸಚಿವರಾದ ಎಂ ಪಿ ರೇಣುಕಾಚಾರ್ಯ ಮತ್ತು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಂದ‌ ಬಿಜೆಪಿ ಹೈಕಮಾಂಡ್ ವಿವರಣೆ ಕೇಳಿದೆ.

ಕೇಂದ್ರ ಶಿಸ್ತು ಸಮಿತಿ ಕಾರ್ಯದರ್ಶಿ ಓಂ ಪ್ರಕಾಶ್ ಅವರು ನೀಡಿದ ನೋಟಿಸಿನಲ್ಲಿ, 72 ಗಂಟೆಗಳ ಒಳಗೆ ಉತ್ತರಿಸುವಂತೆ ತಿಳಿಸಲಾಗಿದೆ. ಈ ಅವಧಿಯೊಳಗೆ ಉತ್ತರ ಸಲ್ಲಿಸಲು ವಿಫಲವಾದರೆ ಪಕ್ಷವು ಸದರಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳುತ್ತದೆ.

ಹೆಬ್ಬಾರ್ ಮತ್ತು ಸೋಮಶೇಖರ್ ತಮ್ಮನ್ನು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ, ಆದರೆ ಹರೀಶ್ ಬಿಜೆಪಿಯ ಬಂಡಾಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗಿದ್ದಾರೆ. ರೇಣುಕಾಚಾರ್ಯ ಮತ್ತು ನಾಯ್ಡು ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಪಾಳಯದಲ್ಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page