Home ಬೆಂಗಳೂರು ಅಪರಾಧಿ ಪ್ರಕರಣಗಳಲ್ಲಿ ವಶಕ್ಕೆ ಪಡೆದ ವಾಹನಗಳನ್ನು ಬಿಡುಗಡೆ ಮಾಡಬೇಕು: ಹೈಕೋರ್ಟ್

ಅಪರಾಧಿ ಪ್ರಕರಣಗಳಲ್ಲಿ ವಶಕ್ಕೆ ಪಡೆದ ವಾಹನಗಳನ್ನು ಬಿಡುಗಡೆ ಮಾಡಬೇಕು: ಹೈಕೋರ್ಟ್

0

ಬೆಂಗಳೂರು : ಪೊಲೀಸರು ಅಪರಾಧಿ ಪ್ರಕರಣಗಳಲ್ಲಿ ವಶಕ್ಕೆ ಪಡೆದುಕೊಂಡ ವಾಹನಗಳನ್ನು ಠಾಣೆಯ ಮುಂದೆ ಅನವಶ್ಯಕವಾಗಿ ನಿಲ್ಲಿಸಿಕೊಳ್ಳುವ ಬದಲು ಶ್ಯೂರಿಟಿ ಪಡೆದು ವಾಹನಗಳನ್ನು ಹಿಂದಿರಿಗಿಸುವಂತೆ ಹೈಕೋರ್ಟ್‌ ಸೂಚನೆ ನೀಡಿದೆ.

ಈ ಹಿಂದೆ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಂಡಾ ಸಿಟಿ ಕಾರು, ಬೈಕ್‌ ಹಾಗೂ ಆಟೋವನ್ನು ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದರು. ಈ ವಾಹನಗಳ ಬಿಡುಗಡೆ ಮಾಡುವಂತೆ ಕೋರಿ ವಾಹನದ ಮಾಲಿಕರು ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಅದನ್ನು ಪರಿಗಣಿಸಿದ ಕಾರಣ ಈ ಕುರಿತು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಹಿನ್ನಲೆಯಲ್ಲಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಈ ಪ್ರಕರಣದಲ್ಲಿ ವಾಹನಗಳ ಮಾಲೀಕರು ಅಪರಾಧಿಗಳಲ್ಲ. ಕೇವಲ ವಾಹನಗಳನ್ನು ಮಾತ್ರ ಅಪರಾಧದ ಕೆಲಸದಲ್ಲಿ ಬಳಸಿದ್ದಾರೆ ಎಂಬ ಆರೋಪ ಇದೆ. ಹೀಗಾಗಿ ವಾಹನಗಳ ಬಿಡುಗಡೆಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸದೇ ಇರುವುದು ಸರಿ ಅಲ್ಲʼ ಎಂದು ಹೇಳಿದೆ.

ಅರ್ಜಿ ಕುರಿತು ವಿಚಾರಣೆ ನಿರಾಕರಿಸಿದ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ಜವ್ದಾಜಿ ಧನತೇಜ ಮತ್ತಿತರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೆ. ನಟರಾಜನ್‌ ಅವರಿದ್ದ ಪೀಠವು ಪೊಲೀಸರು ವಿನಾಕಾರಣ ವಶಪಡಿಸಿಕೊಂಡಿದ್ದ ವಾಹನಗಳನ್ನು ಶ್ಯೂರಿಟಿ ಪಡೆದು ವಾಹನಗಳನ್ನು ಬಿಡುಗಡೆ ಮಾಡಬೇಕೆಂದು ಹೈಕೋರ್ಟ್‌ ಆದೇಶ ನೀಡಿದೆ.

ವಾಹನಗಳನ್ನು ವಿನಾಕರಣ ಪೊಲೀಸ್‌ ಠಾಣೆಯ ಮುಂದೆ ನಿಲ್ಲಿಸಿಕೊಳ್ಳುವುದರಿಂದ ವಾಹನಗಳು ನಿಧಾನವಾಗಿ ಹಾಳಾಗುತ್ತವೆ. ದಿನ ಕಳೆದಂತೆ ಅವುಗಳನ್ನು ಗುರುತಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಅದನ್ನು ನ್ಯಾಯಾಲಯಕ್ಕೆ ತರಲಿಕ್ಕೂ ಆಗದ ಸ್ಥಿತಿ ತಲುಪುತ್ತವೆ. ಆದ್ಧರಿಂದ ವಾಹನಗಳನ್ನು ಅವುಗಳ ಮಾಲಿಕರಿಗೆ ಬಾಂಡ್‌ ಪಡೆದು, ಅಗತ್ಯ ಷರತ್ತುಗಳನ್ನು ವಿಧಿಸುವ ಮೂಲಕ ಹಿಂದಿರುಗಿಸಬೇಕು ಎಂದು ಹೈಕೋರ್ಟ್‌ ಸೂಚಿಸಿದೆ.

ಬಾಂಡ್‌ ಪಡೆದು ಬಿಡುಗಡೆ ಮಾಡುವ ಮೊದಲು ವಾಹನಗಳನ್ನು ಐದು ವಿವಿಧ ಕೋನಗಳಲ್ಲಿ ಫೋಟೋಗಳನ್ನು ತೆಗೆದು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅಲ್ಲದೇ ಹೋಂಡಾ ಸಿಟಿ ಕಾರಿಗೆ 3 ಲಕ್ಷ, ಹೋಂಡಾ ಡಿಯೋ ಬೈಕ್‌ಗೆ 30 ಸಾವಿರ ಹಾಗೂ ಆಟೋ ರಿಕ್ಷಾಗೆ 75 ಸಾವಿರ ರೂಪಾಯಿ ಮೊತ್ತದ ಬಾಂಡ್‌ ಪಡೆದು ವಾಹನಗಳನ್ನು ಅವುಗಳನ್ನು ಮಾಲೀಕರಿಗೆ ಬಿಡುಗಡೆ ಮಾಡುವಂತೆ ಹೈಕೋರ್ಟ್‌ ನಿರ್ದೇಶಿಸಿದೆ.

You cannot copy content of this page

Exit mobile version