ಶಿವಮೊಗ್ಗ, ಸೆಪ್ಟಂಬರ್ 21, (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ- ವಿಜಯಪುರ ಇಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಅಕ್ಕಮಹಾದೇವಿ ಸಂಶೋಧನೆ, ಕೌಶಲ್ಯ ಅಭಿವೃದ್ಧಿ ಮತ್ತು ವಿಸ್ತರಣಾ ಕೇಂದ್ರ-ಉಡುತಡಿಯಲ್ಲಿ ಸ್ನಾತಕೋತ್ತರ ಪದವಿಗಳ ಪ್ರಥಮ ವರ್ಷಕ್ಕೆ ಅರ್ಹ ವಿದ್ಯಾರ್ಥಿನಿಯರಿಂದ ಕರ್ನಾಟಕ ಸರ್ಕಾರದ ಯು.ಯು.ಸಿ.ಎಂ.ಎಸ್. ತಂತ್ರಾಂಶದ ಮೂಲಕ ನಿಗದಿತ ನಮೂನೆಯಲ್ಲಿ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಆಸಕ್ತರು http://uucms.karnataka.gov.in/login/index ಮೂಲಕ ಅಕ್ಟೋಬರ್ 20ರೊಳಗಾಗಿ ಸಲ್ಲಿಸಿ, ಸಲ್ಲಿಸಿರುವ ಅರ್ಜಿಯ ಪ್ರತಿಯನ್ನು ಸ್ನಾತಕೋತ್ತರ ಕೇಂದ್ರ –ಉಡುತಡಿ ಕಚೇರಿಗೆ ಅಕ್ಟೋಬರ್ 21ರೊಳಗಾಗಿ ಸಲ್ಲಿಸುವಂತೆ ವಿವಿಯ ಪ್ರಾಧ್ಯಾಪಕ ಮತ್ತು ವಿಶೇಷಾಧಿಕಾರಿ ಡಾ. ಪ್ರಶಾಂತ್ ಎಸ್.ಜೆ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಅರ್ಜಿ ಸಲ್ಲಿಸಿದ ವಿದ್ಯಾರ್ಥಿನಿಯರು ಪ್ರವೇಶ ಪಡೆಯಲು ಕೌನ್ಸಿಲಿಂಗ್‌ಗೆ ಹಾಜರಾಗಿ ಮೆರಿಟ್ ಆಧಾರದಲ್ಲಿ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದ್ದು, ಕೌನ್ಸಿಲಿಂಗ್ ದಿನಾಂಕವನ್ನು ನಂತರ ವಿವಿಯ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮೊ.ನಂ.: 9986297957/8050465623/ 9902993981/ 7349139105 ಅಥವಾ ವೆಬ್‌ಸೈಟ್ https://www.kswu.ac.in ಗಳನ್ನು ಸಂಪರ್ಕಿಸುವುದು.