1,435-ಕೋಟಿಯ ಪ್ಯಾನ್ 2.0 ಯೋಜನೆಗೆ ಅನುಮೋದನೆ

ನವದೆಹಲಿ: ಆದಾಯ ತೆರಿಗೆ ಇಲಾಖೆಯ ‘ಪ್ಯಾನ್ 2.0’ ಯೋಜನೆಗೆ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಮಿತಿಯು ತನ್ನ ಅನುಮೋದನೆ ನೀಡಿದೆ.

ಕೇಂದ್ರ ಸರ್ಕಾರವು ಈ ಯೋಜನೆಗಾಗಿ 1,435 ಕೋಟಿ ರೂಪಾಯಿಗಳನ್ನು ವ್ಯಯಿಸಲಿದೆ ಎಂದು ಪತ್ರಿಕಾ ಮಾಹಿತಿ ಬ್ಯೂರೋ ಪ್ರಕಟಣೆಯಲ್ಲಿ ಪ್ರಕಟಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ಯಾನ್ ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್ ಇರುತ್ತದೆ ಎಂದು ಹೇಳಿದ್ದಾರೆ. ಯೋಜನೆಯು ಏನಕ್ಕಾಗಿ ಎಂಬುದರ ಕುರಿತು ನಿರ್ದಿಷ್ಟ ವಿವರಗಳು ಇಲ್ಲಿಯವರೆಗೆ ಸಾರ್ವಜನಿಕ ಡೊಮೇನ್‌ನಲ್ಲಿ ಹಾಕಲಾಗಿಲ್ಲ.

PAN ಎಂಬುದು ಶಾಶ್ವತ ಖಾತೆ ಸಂಖ್ಯೆಯಾಗಿದ್ದು, ಆದಾಯ ತೆರಿಗೆ ಇಲಾಖೆಯಿಂದ ವ್ಯಕ್ತಿಗಳಿಗೆ ನೀಡಲಾದ 10-ಅಂಕಿಯ ಗುರುತಿಸುವಿಕೆಯಾಗಿದೆ.

ನವೆಂಬರ್ 25 ರಂದು ಅನುಮೋದನೆ ನೀಡಿದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಗೆ (CCEA) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಧ್ಯಕ್ಷರು.

ಯೋಜನೆಯು ತಂತ್ರಜ್ಞಾನದ ಮೂಲಕ ತೆರಿಗೆದಾರರ ನೋಂದಣಿ ಸೇವೆಗಳ ವ್ಯವಹಾರ ಪ್ರಕ್ರಿಯೆಗಳನ್ನು ರಿ-ಇಂಜಿನಿಯರ್ ಮಾಡುತ್ತದೆ. ಪ್ರಸ್ತುತ PAN ಮತ್ತು TAN ವ್ಯವಸ್ಥೆಗಳನ್ನು ನವೀಕರಿಸಲಾಗುತ್ತದೆ. “ಕೋರ್ ಮತ್ತು ನಾನ್-ಕೋರ್” ಸಂಬಂಧಿತ ಚಟುವಟಿಕೆಗಳ ಜೊತೆಗೆ PAN ಮೌಲ್ಯೀಕರಣ ಸೇವೆಯನ್ನು ಒಂದೇ ಅಡಿಯಲ್ಲಿ ತರಲಾಗುತ್ತದೆ.

ನಿರ್ದಿಷ್ಟಪಡಿಸಿದ ಸರ್ಕಾರಿ ಏಜೆನ್ಸಿಗಳ ಎಲ್ಲಾ ಡಿಜಿಟಲ್ ವ್ಯವಸ್ಥೆಗಳಿಗೆ PAN ಅನ್ನು ಸಾಮಾನ್ಯ ಗುರುತಿಸುವಿಕೆಯಾಗಿ ನೀಡಲು ಸರ್ಕಾರವು ಯೋಜನೆ ಹಾಕಿಕೊಂಡಿದೆ.

PAN 2.0 ಯೋಜನೆಯು ಸರ್ಕಾರದ ಪ್ರಕಾರ, “ತೆರಿಗೆದಾರರ ನೋಂದಣಿ ಸೇವೆಗಳ ತಂತ್ರಜ್ಞಾನ ಚಾಲಿತ ರೂಪಾಂತರ” ವನ್ನು ಸಕ್ರಿಯಗೊಳಿಸುತ್ತದೆ.

ಇದರಿಂದ ಈ ಕೆಳಗಿನ ಉಪಯೋಗಗಳಿವೆ ಎಂದು ಸರ್ಕಾರ ಹೇಳಿದೆ:

  1. ಸುಧಾರಿತ ಗುಣಮಟ್ಟದೊಂದಿಗೆ ಸುಲಭವಾಗಿ ಬಳಸಲು ಸಾಧ್ಯ ಮಾಡುವುದು ಮತ್ತು ವೇಗದ ಸೇವೆ ವಿತರಣೆ;
  2. ಸತ್ಯ ಮತ್ತು ಡೇಟಾ ಸ್ಥಿರತೆಯ ಏಕೈಕ ಮೂಲ;
  3. ಪರಿಸರ ಸ್ನೇಹಿ ಪ್ರಕ್ರಿಯೆಗಳು ಮತ್ತು ಕಡಿಮೆ ವೆಚ್ಚ
  4. ಮೂಲಭೂತ ಸೌಕರ್ಯಗಳ ಭದ್ರತೆ

Related Articles

ಇತ್ತೀಚಿನ ಸುದ್ದಿಗಳು