Home ಅಪರಾಧ ಮೂರ್ಛೆ ಬರುವ ಚಾಕ್‌ಲೇಟಿಂದ ಕಳ್ಳತನ ಮಾಡುತ್ತಿದ್ದ ಅಂತರ್‌ರಾಜ್ಯ ಕಳ್ಳನ ಬಂಧನ

ಮೂರ್ಛೆ ಬರುವ ಚಾಕ್‌ಲೇಟಿಂದ ಕಳ್ಳತನ ಮಾಡುತ್ತಿದ್ದ ಅಂತರ್‌ರಾಜ್ಯ ಕಳ್ಳನ ಬಂಧನ

0

ಧಾರವಾಡ: ಬಿಹಾರ ಮೂಲದ ಅಂತರರಾಜ್ಯ ಕಳ್ಳನೊಬ್ಬನು ಮೂರ್ಛೆ ಬರುವ ಚಾಕ್‌ಲೆಟ್ ಕೊಟ್ಟು ಯುವಕನ ಕೊರಳಲ್ಲಿದ್ದ ಚಿನ್ನದ ಸರ ಹಾಗೂ ಮೊಬೈಲ್ ಫೋನ್ ದೋಚಿದ್ದ ಘಟನೆ ಇತ್ತೀಚೆಗಷ್ಟೇ ನಡೆದಿದ್ದು, ಇದೀಗ ಕಳ್ಳನನ್ನು ಸೆರೆ ಹಿಡಿಯುವಲ್ಲಿ ಧಾರವಾಡದ ಶಹರಾ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಮಲ್ಲಿಕಾರ್ಜುನ ವಿಜಾಪುರ ಎಂಬ ಯುವಕನನ್ನು ಕಳೆದ ನವೆಂಬರ್ 11ರಂದು ಧಾರವಾಡದ ಶ್ರೀನಿವಾಸ ಚಿತ್ರಮಂದಿರದಲ್ಲಿ ಪರಿಚಯ ಮಾಡಿಕೊಂಡ ಷಮಶೇರ್, ಮಲ್ಲಿಕಾರ್ಜುನನೊಂದಿಗೆ ಟಗರು ಪಲ್ಯ ಚಿತ್ರ ವೀಕ್ಷಣೆ ಮಾಡಲು ಹೋಗಿದ್ದಾನ. ಸಿನೆಮಾ ನೋಡುವ ಸಂದರ್ಭದಲ್ಲಿ ಮಲ್ಲಿಕಾರ್ಜುನನಿಗೆ ಯಾಮಾರಿಸುತ್ತಾ ಮಾತನಾಡುತ್ತಲೇ ಅವನಿಗೆ ಮೂರ್ಛೆ ಬರುವ ಚಾಕ್‌ಲೆಟ್ ಕೊಟ್ಟು ಉಣಿಸಿದ್ದಾನೆ. ಆನಂತರ ಮಲ್ಲಿಕಾರ್ಜುನ ಪ್ರಜ್ಞೆ ತಪ್ಪಿದ್ದು, ಆತನ ಕೊರಳಲ್ಲಿದ್ದ 75 ಸಾವಿರ ರೂಪಾಯಿ ಮೌಲ್ಯದ 15 ಗ್ರಾಂ ಚಿನ್ನದ ಸರ ಹಾಗೂ 15 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ದೋಚಿ ಅಲ್ಲಿಂದ ದೌಡಾಯಿಸಿದ್ದ. ಈ ಘಟನೆಯ ಕುರಿತು ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಧಾರವಾಡದ ಶಹರಾ ಪೊಲೀಸರು ಬಿಹಾರ ಮೂಲದ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಬಂಧಿತನಾದ ವ್ಯಕ್ತಿಯು, ಬಿಹಾರ ರಾಜ್ಯದ ಸಹರ್ಸ ಜಿಲ್ಲೆಯ ಮಹಿಷಿ ತಾಲೂಕಿನ ಬಿಲಾಯಿ ಗ್ರಾಮ ಸಾಟೋಲಾ ಗಲ್ಲಿಯ ಮಹ್ಮದ್ ಷಮಶೇರ್ ಶಹಾ ಆಗಿದ್ದು, ಬಂಧಿತನಿಂದ 15 ಗ್ರಾಮ್ ಚಿನ್ನದ ಸರ ಜಪ್ತಿ ಮಾಡಿದ್ದಾರೆ.

ಧಾರವಾಡದಲ್ಲಿ ಈ ರೀತಿ ನಡೆದ ಮೊದಲ ಪ್ರಕರಣ ಇದಾಗಿದ್ದು, ಪ್ರಕರಣವನ್ನು ಬೇಧಿಸಿದ ಧಾರವಾಡ ಪೊಲೀಸ್ ತಂಡಕ್ಕೆ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರು ಬಹುಮಾನವನ್ನು ಘೋಷಣೆ ಮಾಡಿದ್ದಾರೆ.

You cannot copy content of this page

Exit mobile version