ದರ್ಶನ್ ನಾಯಕನಾಗಿ, ತರುಣ್ ಸುಧೀರ್ ನಿರ್ದೇಶಕರಾಗಿರುವ ‘ಕಾಟೇರ’ ಸಿನಿಮಾ ಬಿಡುಗಡೆ ಮುನ್ನವೇ ಸಾಕಷ್ಟು ಸುದ್ದಿ ಮಾಡಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಈ ನಡುವೆ ಕಾಟೇರ ಸಿನಿಮಾ ಬಿಡುಗಡೆಗೆ ಸಂಬಂಧಿಸಿದಂತೆ ಹೊಸ ಮಾಹಿತಿ ಹೊರಬಿದ್ದಿದೆ.
ದರ್ಶನ್ ಸಿನಿಮಾ ಅಂದ್ರೇನೇ ಮಾಸ್ ಪ್ರೇಕ್ಷಕರಿಗೆ ಹಬ್ಬದೂಟ. ಅಂತದ್ರಲ್ಲಿ ಸಿನೆಮಾದ ಆಕ್ಷನ್, ಹಾಡು, ಸನ್ನಿವೇಶ, ಡೈಲಾಗ್ ಗಳು ಅಷ್ಟೆ ಮಾಸ್ ಆಗಿ ಇದ್ದರೇನೇ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ ಬೀಳೋಕೆ ಸಾಧ್ಯ. ಹೀಗಿರುವಾಗ ಸಿನೆಮಾದಲ್ಲಿ ಬರುವ ಡೈಲಾಗ್ ಕಾರಣಕ್ಕೆ ಈಗ ಸಿನೆಮಾ ಬಿಡುಗಡೆ ಬಗ್ಗೆ ಅನುಮಾನ ಹುಟ್ಟಿದೆ.
ಕಾಟೇರ ಸಿನೆಮಾದಲ್ಲಿ ಬರುವ ಒಂದು ಇಡೀ ಡೈಲಾಗ್ ಈಗ ಸಿನಿಮಾ ಬಿಡುಗಡೆಗೆ ನಿಜಕ್ಕೂ ಅಡ್ಡಗೋಡೆಯಾಗಿ ಪರಿಣಮಿಸಿದೆ. ಅದರಲ್ಲಿ “ಇವರೆಲ್ಲಾ ಹಾವು ಇದ್ದಂಗೆ. ವಿಷ ಇಲ್ಲಾಂದ್ರೆ ಹಿಡಿಬೇಕು. ವಿಷ ಇದ್ರೆ ಹೊಡಿಬೇಕು” ಎಂಬ ಕಾಟೇರ ಸಿನಿಮಾದ ಈ ಒಂದು ಡೈಲಾಗ್ ಕುರಿತು ವನ್ಯ ಜೀವಿ ಸಂರಕ್ಷಣಾ ಒಕ್ಕೂಟವು ಕಿಡಿಕಾರಿದೆ.
ವನ್ಯ ಜೀವಿಗಳ ಉಳಿವಿಗೆ ಈ ರೀತಿಯ ಡೈಲಾಗ್ ಗಳು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಈ ಡೈಲಾಗ್ ಬಗ್ಗೆ ತಮಗೆ ಆಕ್ಷೇಪ ಇದೆ ಎಂದು ವನ್ಯ ಜೀವಿ ಸಂರಕ್ಷಣಾ ಒಕ್ಕೂಟ ಹೇಳಿದೆ. ಸಧ್ಯ ಇದಕ್ಕೆ ಸಿನಿಮಾ ನಿರ್ದೇಶಕರು ಏನು ಪ್ರತಿಕ್ರಿಯೆ ನೀಡುತ್ತಾರೋ ಎಂಬ ಬಗ್ಗೆ ಕುತೂಹಲ ಹುಟ್ಟಿಸಿದೆ.