ಮಾಜಿ ಸೈನಿಕ ಮತ್ತು ಬೇಗುಸರಾಯ್ ನಿವಾಸಿ ಶಂಭು ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ನ್ಯಾಯಾಲಯವು ವಾರಂಟ್ ಹೊರಡಿಸಿದೆ.
ಬಿಹಾರದ ಬೇಗುಸರಾಯ್‌ನ ನ್ಯಾಯಾಲಯವು ವೆಬ್ ಸರಣಿ ‘XXX’ (ಸೀಸನ್ -2) ನಲ್ಲಿ ಸೈನಿಕರನ್ನು ಅವಮಾನಿಸಿದ ಮತ್ತು ಅವರ ಕುಟುಂಬ ಸದಸ್ಯರ ಭಾವನೆಗಳನ್ನು ನೋಯಿಸಿದ ಆರೋಪದ ಮೇಲೆ ಚಲನಚಿತ್ರ ನಿರ್ಮಾಪಕಿ ಮತ್ತು ನಿರ್ದೇಶಕಿ ಏಕ್ತಾ ಕಪೂರ್ ಮತ್ತು ಅವರ ತಾಯಿ ಶೋಭಾ ಕಪೂರ್ ವಿರುದ್ಧ ಬುಧವಾರ ಆರೆಸ್ಟ್ ವಾರಂಟ್ ಹೊರಡಿಸಿದೆ.
ಶಂಭು ಕುಮಾರ್ ಅವರು 2020ರಲ್ಲಿ ಸಲ್ಲಿಸಿದ್ದ ತಮ್ಮ ದೂರಿನಲ್ಲಿ ಸರಣಿ ‘XXX’ (ಸೀಸನ್-2) ಸೈನಿಕನ ಹೆಂಡತಿಗೆ ಸಂಬಂಧಿಸಿದ ಹಲವಾರು ಆಕ್ಷೇಪಾರ್ಹ ದೃಶ್ಯಗಳನ್ನು ಒಳಗೊಂಡಿತ್ತು ಎಂದು ದೂರಿದ್ದರು.
ನ್ಯಾಯಾಲಯವು ಅವರಿಗೆ (ಕಪೂರ್ ತಾಯಿ ಮಗಳು) ಸಮನ್ಸ್ ಜಾರಿ ಮಾಡಿತ್ತು ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಆದಾಗ್ಯೂ,ಕಪೂರ್ ಕುಟುಂಬವು, ಆಕ್ಷೇಪಣೆಯ ನಂತರ ಸರಣಿಯ ಕೆಲವು ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಆದರೆ ಅವರು ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ, ನಂತರ ಅವರ ವಿರುದ್ಧ ವಾರಂಟ್ ಹೊರಡಿಸಲಾಯಿತು ಎಂದು ಶಂಭುಕುಮಾರ್ ಅವರ ವಕೀಲರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಏಕ್ತಾ ಕಪೂರ್ ಆಕ್ಷೇಪಣೆಯ ದೃಶ್ಯ ತೆಗೆದು ಹಾಕಿದ ನಂತರವೂ ತನ್ನ ಕುರಿತು ಅಸಭ್ಯ ಬರವಣಿಗೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗುತ್ತಿದೆ ಮತ್ತು ತನಗೆ ರೇಪ್ ಬೆದರಿಕೆ ಕೂಡ ಹಾಕಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ