Friday, June 14, 2024

ಸತ್ಯ | ನ್ಯಾಯ |ಧರ್ಮ

ಟಿಪ್ಪು ಸುಲ್ತಾನನ್ನು ಯಾರು ಯಾರು ಏಕೆ ನೆನೆಯಬೇಕು?

ಆಧುನಿಕ ಪ್ರಜಾಪ್ರಭುತ್ವವಾದಿ ಟಿಪ್ಪು ಸುಲ್ತಾನನನ್ನು ಅಖಂಡ ಕನ್ನಡಿಗರು ಬೇರೆ ಬೇರೆ ಕಾರಣಕ್ಕೆ ನೆನೆಯ ಬೇಕಾಗಿದೆ. ಯಾರು ಯಾರು ಏಕೆ ನೆನೆಯಬೇಕೆಂದು ಸಣ್ಣದೊಂದು ಪಟ್ಟಿಯನ್ನು ಸಂಶೋಧಕ ಅರುಣ್ ಜೋಳದಕೂಡ್ಲಿಗಿಯವರು ಮಾಡಿದ್ದಾರೆ. ಗಮನಿಸಿ.

ಟಿಪ್ಪುವನ್ನು ಮಹಿಳೆಯರೇಕೆ ನೆನೆಯಬೇಕು?

  1. ಸಾಮಾಜಿಕ‌ ಪಿಡುಗನ್ನು ನಿಶೇಧಿಸಿದ.
  2. ಮನೆಗೆಲಸಕ್ಕೆ ಗುಲಾಮ ಮಹಿಳೆಯರನ್ನು ನೇಮಿಸಿ ಕೊಳ್ಳುವುದನ್ನು ನಿಶೇಧಿಸಿದ.
  3. ಮಲಬಾರ್ ಪ್ರಾಂತದಲ್ಲಿದ್ದ ಬಹುಪತ್ನಿತ್ವ ಪದ್ಧತಿಯನ್ನು‌ ನಿಶೇಧಿಸಿದ.
  4. ಮಲಬಾರಿನ ಬುಡಕಟ್ಟು ಮಹಿಳೆಯರು ಸೊಂಟದ ಮೇಲೆ ಉಡುಪು ಧರಿಸುವಂತಿರದ ಅಮಾನವೀಯ ಕ್ರೌರ್ಯವನ್ನು ನಿಶೇಧಿಸಿ ಉಡುಪು ಧರಿಸುವಂತೆ ನಿಯಮ ಜಾರಿಗೊಳಿಸಿದ.
  5. ಮದುವೆಯ ದುಂದು ವೆಚ್ಚವನ್ನು ನಿಯಂತ್ರಿಸಿ ಸರಳ ಮದುವೆಗಳನ್ನು ಬೆಂಬಲಿಸಿದ.                                 

ಟಿಪ್ಪುವನ್ನು ರೈತರೇಕೆ ನೆನೆಯಬೇಕು?

  1. ರೈತರ ಜೀವ ಹಿಂಡುತ್ತಿದ್ದ ಸ್ಥಳೀಯ ಪಾಳೆಯಗಾರರನ್ನು ಮಟ್ಟಹಾಕಿನು.
  2. ಮಧ್ಯವರ್ತಿ ದಲ್ಲಾಳಿಗಳನ್ನು ನಿಯಂತ್ರಿಸಿ ರೈತ ಮತ್ತು ಸರಕಾರದ ನೇರ ಸಂಪರ್ಕಕ್ಕೆ ಕ್ರಮ ಕೈಗೊಂಡನು.
  3. ಜಮೀನ್ದಾರಿ ಪದ್ಧತಿಯನ್ನು ನಿಯಂತ್ರಿಸಿ, ತಕಾವಿ ಕಿರುಸಾಲ ಯೋಜನೆಯನ್ನು ಜಾರಿಗೆ ತಂದನು.
  4. ರೈತರಿಗಾಗಿ ಸಹಕಾರಿ ಬ್ಯಾಂಕ್ ಸ್ಥಾಪಿಸಿದನು.
  5. ತೆರಿಗೆಯಲ್ಲಿ ದೊಡ್ಡ ಸುಧಾರಣೆ ತರಲಾಯಿತು. ಹೊಲ ಬೆಳೆ ಎಲ್ಲವನ್ನು ಸರ್ವೆಮಾಡಿ ನ್ಯಾಯಯುತ ತೆರಿಗೆ ವಿಧಿಸತೊಡಗಿದ.
  6. ಬಂಗಾಳದಿಂದ ರೇಶ್ಮೆಹುಳು ತರಿಸಿ ರೇಶ್ಮೆ ಕೃಷಿ ಯನ್ನು ಆರಂಭಿಸಿದ.
  7. ನೀರಾವರಿಗಾಗಿ 39,000 ಕೆರೆಕಟ್ಟೆಗಳನ್ನು ಕಟ್ಟಿಸಿದ, 16,000 ಬಾವಿಗಳನ್ನು ತೋಡಿಸಿದ. 24 ಕಡೆ ನದಿ ಆಣೆಕಟ್ಟೆಗಳನ್ನು ಕಟ್ಟಿಸಿ ನೀರಾವರಿ ಕೃಷಿಯನ್ನು ಅಭಿವೃದ್ಧಿಗೊಳಿಸಿದ. 1803-04 ರ ಹೊತ್ತಲ್ಲಿ 30 ಲಕ್ಷ ಎಕರೆ ಜಮೀನಿನಲ್ಲಿ 8 ಲಕ್ಷ ಎಕರೆ ಜಮೀನು ಅಂದರೆ ಶೇ 35 ರಷ್ಟು ನೀರಾವರಿಯಾಯಿತು.
  8. 1798 ರಲ್ಲಿ KRS ಇರುವ ಜಾಗದಲ್ಲಿ ಕಾವೇರಿ ನದಿಗೆ ಬೃಹತ್ ಆಣೆಕಟ್ಟು ಕಟ್ಟಿಸುವ ಅಡಿಗಲ್ಲು ಹಾಕಿಸಿದ.
  9. ಕಬೀರ್ ಕಾಸರ್ ಗುರುತಿಸುವಂತೆ, ರೈತನ ಜಾತಿ, ಮತ, ಪಂಥ, ಧರ್ಮ ಏನೇ ಇದ್ದರೂ ಉಳುವವನೆ ಭೂಒಡೆಯ ಎಂಬ ಕ್ರಾಂತಿಕಾರಿ ಯೋಜನೆಯನ್ನು ತಂದನು.
  10. ಜೀತ ಪದ್ಧತಿ ಮುಕ್ತಗೊಳಿಸಿ ದಿನಕೂಲಿ ಪದ್ಧತಿಯನ್ನು‌ ಜಾರಿಗೊಳಿಸಿದನು.
  11. ರೈತರ ಆರೋಗ್ಯ  ಹಿತದೃಷ್ಟಿಯಿಂದ ಗಾಂಜಾ ಮತ್ತು ಮದ್ಯಪಾನ ನಿಶೇಧ ಜಾರಿಗೆ ತರುತ್ತಾನೆ.             

ಟಿಪ್ಪುವನ್ನು ಈ ನಾಡಿನ ದಲಿತರೇಕೆ ನೆನೆಯಬೇಕು?

  1. ತನ್ನ ರಾಜ್ಯದಲ್ಲಿ ಅಸ್ಷೃಶ್ಯತೆಯ ಆಚರಣೆಯನ್ನು ನಿಶೇಧ ಮಾಡುತ್ತಾನೆ.
  2. 2.ಟಿಪ್ಪು ಕಟ್ಟಿಸಿದ ಕೆರೆ ಬಾವಿಗಳಿಗೆ ದಲಿತರನ್ನು ನೀರಗಂಟಿ ಗಳನ್ನಾಗಿ ನೇಮಿಸುತ್ತಾರೆ.
  3. 3.ನಂಜನಗೂಡಿನಲ್ಲಿ 500 ಬ್ರಾಹ್ಮಣರಿಗಿದ್ದ 14,000 ಎಕರೆ ಜಮೀನನ್ನು ಹೊಲವಿಲ್ಲದ 700 ದಲಿತ ಶೂದ್ರರಿಗೆ ಹಂಚುತ್ತಾನೆ.
  4. ಜೀತಪದ್ಧತಿಗೆ ಬಲಿಯಾಗಿದ್ದ ಬಹುಸಂಖ್ಯಾತ ದಲಿತರನ್ನು ಜೀತಪದ್ಧತಿ‌ ನಿಶೇಧ ಕಾಯ್ದೆ ಬಿಡುಗಡೆಗೊಳಿಸುತ್ತದೆ.
  5. 6.’ಉಳುವವನೆ ಭೂ ಒಡೆಯ’ ಕಾನೂನಿನಡಿ  ಉಳುವ ಭೂಮಿಗೆ ಒಡೆಯರಾದವರಲ್ಲಿ ದಲಿತರ ಪಾಲು ದೊಡ್ಡದಿದೆ.   

ಟಿಪ್ಪುವನ್ನು ಹಿಂದುಗಳೇಕೆ‌ ನೆನೆಯಬೇಕು?

  1. ಬಹುಸಂಖ್ಯಾತ ಹಿಂದುಗಳಿರುವ ತನ್ನ ರಾಜ್ಯದಲ್ಲಿ ಆತ ಮುಸ್ಲಿಮರಿಗಿಂತ ಹಿಂದುಗಳಿಗೆ ಹೆಚ್ಚು ಕೆಲಸ ಮಾಡಿದ್ದಾನೆ.
  2. ಟಿಪ್ಪುವಿನ ರಾಜ್ಯನೀತಿಯ ಮುಖ್ಯ ಅಂಶ ಜಾತ್ಯತೀತತೆ
  3. 1916 ರಲ್ಲಿ ಆರ್.ನರಸಿಂಹಾಚಾರ್ಯರು ಟಿಪ್ಪು ಶೃಂಗೇರಿಗೆ ಬರೆದ ಪತ್ರಗಳನ್ನು ಪತ್ತೆಹಚ್ಚಿದ್ದಾರೆ. ಈ ಪತ್ರಗಳನ್ನು ಓದಿದರೆ ಟಿಪ್ಪುವಿನ ಧರ್ಮಾತೀತ ಗುಣ ತಿಳಿಯುತ್ತದೆ. ಮರಾಠರ ಪರುಶುರಾಮ ಭಾವು ಶೃಂಗರಿಯ ಮಠವನ್ನು ದಾಳಿ ಮಾಡಿದಾಗ ಶಾರದಾ ಮಠವನ್ನು ಮತ್ತೆ ಜೀರ್ಣೋದ್ಧಾರ ಮಾಡಿದವನು ಟಿಪ್ಪು.
  4. ನಂಜನಗೂಡಿನ ಕಳಲೆಯ ಲಕ್ಷ್ಮಿಕಾಂತ ದೇವಸ್ಥಾನಕ್ಕೆ ನಾಲ್ಕು ಬೆಳ್ಳಿಬಟ್ಟಲು, ಮೇಲುಕೋಟೆ ಚೆಲುವ ನಾರಾಯಣ ದೇವಸ್ಥಾನಕ್ಕೆ ಆನೆ, ಬೆಳ್ಳಿ ಪಾತ್ರೆಗಳನ್ನು ಕೊಟ್ಟಿದ್ದಾನೆ. ನಂಜನಗೂಡಿನ ಶ್ರೀಕಂಠೇಶ್ವರ ದೇಗುಲಕ್ಕೆ ಅಪೂರ್ವ ಪಚ್ಚೆಲಿಂಗ ಕೊಡಿಸಿದ್ದಾನೆ. ಈ ಪಟ್ಟಿ ದೊಡ್ಡದಿದೆ. ಒಟ್ಟು 154 ದೇವಾಲಯಗಳಿಗೆ ದತ್ತಿ ಕಾಣಿಕೆ ನೀಡಿದ್ದಾನೆ.
  5. ಆಡಳಿತದ ಪ್ರಮುಖ ಹುದ್ದೆಗಳಲ್ಲಿ ಹಿಂದೂಗಳನ್ನು ನೇಮಿಸಿದ್ದ.
  6. ದಿವಾನ್ ಪೂರ್ಣಯ್ಯ-ಕಂದಾಯ, ಹಣಕಾಸು ಸಚಿವ
  7. ಕೃಷ್ಣಾರಾವ್- ಕೋಶಾಧಿಕಾರಿ.
  8. ಶ್ಯಾಮ್ ಅಯ್ಯಂಗಾರ್-ಅಂಚೆ ಸಚಿವರು.
  9. ಹರಿಸಿಂಗ್- ಅಶ್ವದಳದ ಮುಖ್ಯಸ್ಥ
  10. ಶಿವಾಜಿ ಎಂಬ ಮರಾಠಿ ಸೈನಿಕ 3,000 ಅಶ್ವದಳದ ಮುಖ್ಯಸ್ಥನಾಗಿದ್ದ.
  11. ನರಸಿಂಗ ರಾವ್, ಶ್ರೀನಿವಾಸರಾವ್, ಅಪ್ಪಾಜಿರಾವ್ ಟಿಪ್ಪುಗೆ ಮುತ್ಸದ್ದಿ ಸಲಹೆಗಾರರಾಗಿದ್ದರು.

ಹೀಗೆ ಪಟ್ಟಿ ಬೆಳೆಯುತ್ತದೆ.

ಅರುಣ್ ಜೋಳದಕೂಡ್ಲಿಗಿ

Related Articles

ಇತ್ತೀಚಿನ ಸುದ್ದಿಗಳು