Home ರಾಜಕೀಯ ಇಸ್ಲಾಂ ಇರುವವರೆಗೆ ಜಗತ್ತಿನಲ್ಲಿ ಶಾಂತಿ ಇರುವುದಿಲ್ಲ: ಸಂಸದ ಅನಂತಕುಮಾರ್ ಹೆಗಡೆ

ಇಸ್ಲಾಂ ಇರುವವರೆಗೆ ಜಗತ್ತಿನಲ್ಲಿ ಶಾಂತಿ ಇರುವುದಿಲ್ಲ: ಸಂಸದ ಅನಂತಕುಮಾರ್ ಹೆಗಡೆ

0

ಬೆಂಗಳೂರು: ಉತ್ತರ ಕನ್ನಡ ಬಿಜೆಪಿ ಲೋಕಸಭಾ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ತಮ್ಮ ವಿರುದ್ಧ ಪ್ರಕರಣ ದಾಖಲಿಸಲಿ ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

Uttara Kannada BJP Lok Sabha MP Anant Kumar Hegde: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಹೆಗಡೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಲ್ಲಿರಿಸಲು ಬಿಜೆಪಿಯನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

“ನಾವು ನಮ್ಮ ಧರ್ಮ ಮತ್ತು ದೇಶವನ್ನು ಉಳಿಸಬೇಕಾದರೆ, ಮೋದಿ ಅಧಿಕಾರದಲ್ಲಿರಬೇಕು. ಕಾಂಗ್ರೆಸ್‌ಗೆ ಅದು ಸಾಧ್ಯವಿಲ್ಲ. ಬಿಜೆಪಿ ಮತ್ತು ಸಂಘಪರಿವಾರ ಅಧಿಕಾರದಲ್ಲಿದ್ದರೆ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ. ನಾವು ಅಧಿಕಾರದಲ್ಲಿ ಇಲ್ಲದಿದ್ದರೆ ಶಾಂತಿ ಇರುವುದಿಲ್ಲ. ಇಸ್ಲಾಂ ಇರುವವರೆಗೆ ಜಗತ್ತಿನಲ್ಲಿ ಶಾಂತಿ ಇರುವುದಿಲ್ಲ. ನೀವು ನನ್ನ ವಿರುದ್ಧ ಕೇಸು ದಾಖಲಿಸಬಹುದು, ನನಗೆ ಭಯವಿಲ್ಲ. ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದಕ್ಕೆ ನನ್ನ ಮೇಲೆ ಕೇಸ್ ಹಾಕಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಯಾವುದೇ ಪ್ರಕರಣಗಳಿಲ್ಲದ ಕಾರಣ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸಿದ್ದೇನೆ ಎಂದು ಹೆಗ್ಡೆ ಹೇಳಿದರು.

ಕಳೆದ ಎರಡು ತಿಂಗಳಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಹೆಗ್ಗಡೆಯವರು ಮಾಡಿದ ಆವೇಶಭರಿತ ಭಾಷಣಗಳು ಹಲವು ವಿವಾದಗಳಿಗೆ ಕಾರಣವಾಗಿತ್ತು.

ಭಟ್ಕಳ ಮಸೀದಿ ಧ್ವಂಸ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಹೆಗ್ಡೆ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಸಿಎಂ ಸಿದ್ದರಾಮಯ್ಯನವರನ್ನೂ ಕೀಳು ಮಟ್ಟದಲ್ಲಿ ನಿಂದಿಸಿದ್ದರು.

ಕಳೆದ ಮೂರು ವರ್ಷಗಳಿಂದ ನಿಷ್ಕ್ರಿಯರಾಗಿದ್ದ ಹೆಗ್ಗಡೆಯವರು ಮುಂಬರುವ ಲೋಕಸಭೆ ಚುನಾವಣೆಗೆ ಆಸಕ್ತಿ ತೋರಿದ್ದು, ಕ್ಷೇತ್ರದಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ.

ಮಾಜಿ ಕೇಂದ್ರ ಸಚಿವರು ಪಕ್ಷ ಚಟುವಟಿಕೆಗಳು ಮತ್ತು ರಾಜಕೀಯದಿಂದ ದೂರ ಉಳಿದಿದ್ದರು. ಈ ಹಿಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದ ಅವರು, ನಂತರ ಮನಸ್ಸು ಬದಲಿಸಿ ಪ್ರಚಾರ ಆರಂಭಿಸಿದ್ದರು.

You cannot copy content of this page

Exit mobile version