Home ರಾಜ್ಯ 15ಸಾವಿರ ರೂ.ಗೌರವಧನ ನೀಡಲು ಆಗ್ರಹಿಸಿ ಬೀದಿಗಿಳಿದ ಆಶಾ ಕಾರ್ಯಕರ್ತೆಯರು

15ಸಾವಿರ ರೂ.ಗೌರವಧನ ನೀಡಲು ಆಗ್ರಹಿಸಿ ಬೀದಿಗಿಳಿದ ಆಶಾ ಕಾರ್ಯಕರ್ತೆಯರು

0

ಬೆಂಗಳೂರು: ಗೌರವಧನವನ್ನು ತಿಂಗಳಿಗೆ 15 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಬೇಕು ಹಾಗೂ ಗೌರವಧನ ವಿತರಣೆಯಲ್ಲಿನ ಮೋಸ ತಡೆಯಲು ಆರ್‌ಸಿಎಚ್ ಪೋರ್ಟಲ್ ಅನು ಡೀಲಿಂಕ್ ಮಾಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳಿಗೆ ಆಗ್ರಹಿಸಿ, ಮಂಗಳವಾರ ಸಾವಿರಾರು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ನಗರದ ಫ್ರೀಡಂ ಪಾರ್ಕ್ನೆಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಮಂಗಳವಾರ ಎಐಯುಟಿಯುಸಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡಿ, ‘ರಾಜ್ಯದ ಎಲ್ಲ ಜನರಿಗೆ ಗ್ಯಾರಂಟಿ ನೀಡುವ ಸರಕಾರಕ್ಕೆ ಕೇವಲ 42ಸಾವಿರ ಜನರಿಗೆ ಗ್ಯಾರಂಟಿ ನೀಡುವುದು ಅಸಾಧ್ಯವಾಗಿದೆಯಲ್ಲ ಎಂದು ವ್ಯಂಗ್ಯವಾಡಿದರು.
ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮುಖಂಡರನ್ನು ಸರಕಾರ ಹಲವು ಬಾರಿ ಸಭೆ ಕರೆದರೂ ಯಾವುದೇ ಪ್ರಯೋಜನವಾಗಿಲ್ಲ. ಡಿಜಿಟಲ್ ಇಂಡಿಯಾ ಎಂದು ಹೇಳಲಾಗುತ್ತದೆ. ಆದರೆ ಆಶಾ ಕಾರ್ಯಕರ್ತೆಯರಿಗೆ ಕೊಟ್ಟಿರುವ ಮೊಬೈಲ್ಫೋ ನ್ಗೆಜ ಸರಿಯಾದ ನೆಟ್ವರ್ಕ್‌ ಸಹ ಇಲ್ಲ. ಆರ್ ಸಿಎಚ್ ಪೋರ್ಟಲ್ನಿಂ ದ ಆಗುತ್ತಿರುವ ಹಲವಾರು ರೀತಿಯಲ್ಲಿ ಮೋಸವಾಗುತ್ತಿದೆ ಎಂದು ಆರೋಪಿಸಿದರು.
ಸಾಮಾಜಿಕ ಕಾರ್ಯಕರ್ತೆ ಹಾಗೂ ಲೇಖಕಿ ರೂಪಾ ಹಾಸನ ಮಾತನಾಡಿ, ‘ಹಲವು ವರ್ಷದಿಂತ ಆಶಾ ಕಾರ್ಯಕರ್ತೆಯರು ಕಡಿಮೆ ವೇತನದೊಂದಿಗೆ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆಯಲ್ಲಿ ಇಂದು ಸಾಕಷ್ಟು ಒಳ್ಳೆಯ ಬದಲಾವಣೆಗಳಾಗಿವೆ. ಆಶಾ ಕಾರ್ಯಕರ್ತೆಯರಿಗೆ ಸರಕಾರ ನೀಡುತ್ತಿರುವ ಹಣದಿಂದ ಗೌರವಧನಕ್ಕೆ ಅವಮಾನವಾದಂತೆ ಕಾಣುತ್ತಿದೆ. ಹೀಗಾಗಿ ಕೂಡಲೇ ಅವರ ಗೌರವಧನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.
ಹಿಂದೆ ಜಮೀನ್ದಾರರು ಶ್ರೀಮಂತರು ಬಡವರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುವ ಜೀತ ಪದ್ಧತಿಯಿತ್ತು. ಅದೇ ರೀತಿ ಸರಕಾರವು ಆಶಾ ಕಾರ್ಯಕರ್ತೆಯರನ್ನು ಜೀತಗಾರರನ್ನಾಗಿಸಿಕೊಂಡು ದುಡಿಸಿಕೊಳ್ಳುತ್ತಿದೆ. ಕಣ್ಣು, ಕಿವಿಗಳಿಲ್ಲದ ಸರಕಾರಕ್ಕೆ ಆಶಾ ಕಾರ್ಯಕರ್ತೆಯರ ಕೂಗು ಕೇಳಿಸುವುದಿಲ್ಲ. ಸಂಕಷ್ಠಕ್ಕೆ ಸಿಲುಕಿದ ಕೆಳವರ್ಗದ ಮಹಿಳೆಯರು ಆಶಾಗಳು. ಕಾರ್ಯಕರ್ತೆಯರ ಪೇಮೆಂಟ್ ಪ್ರಕ್ರಿಯೆಯಿಂದ ಆರ್ ಸಿಎಚ್ ಪೋರ್ಟಲ್ ಅನ್ನು ಕೂಡಲೇ ಡೀಲಿಂಕ್ ಮಾಡಬೇಕಿದೆ ಎಂದು ಒತ್ತಾಯಿಸಿದರು.

ಎಸ್ಯು ಸಿಐಸಿ ಕಾರ್ಯದರ್ಶಿ ಕೆ.ಉಮಾ, ಮೆಡಿಕಲ್ ಸರ್ವೀಸ್ ಸೆಂಟರ್ ನ ಉಪಾಧ್ಯಕ್ಷೆ ಡಾ.ಸುಧಾ ಕಾಮತ್, ಸಂಘದ ಕಾರ್ಯದರ್ಶಿ ಸೋಮಶೇಖರ್ ಯಾದಗಿರಿ, ಎಐಎಂಎಸ್ಎ ಸ್ ಅಧ್ಯಕ್ಷೆ ಎಂ.ಎನ್. ಮಂಜುಳಾ, ಹೋರಾಟಗಾರರ ಉಗ್ರನರಸಿಂಹೇಗೌಡ, ಪ್ರಮೀಳಾ, ಕೆ.ವಿ.ಭಟ್ ಸೇರಿದಂತೆ ಸೇರಿದಂತೆ ಸಾವಿರಾರು ಪ್ರತಿಭಟನಾಕಾರರು ಭಾಗವಹಿಸಿದ್ದರು.

You cannot copy content of this page

Exit mobile version