ಏಷ್ಯಾ-ಕಪ್‌ | ಭಾರತೀಯ ಕ್ರಿಕೆಟ್‌ ಆಟಗಾರರಿಗೆ ರಾಜಕೀಯ ನಾಯಕರುಗಳ ಪ್ರಶಂಸೆ

ನವದೆಹಲಿ: ಭಾನುವಾರ ನಡೆದ ಏಷ್ಯಾ-ಕಪ್‌ ಟೂರ್ನಿಯಲ್ಲಿ  ಪಾಕಿಸ್ತಾನದ ವಿರುದ್ಧ ಭಾರತ ತಂಡವು ಜಯಗಳಿಸಿದ್ದು, ಆಟಗಾರರಿಗೆ ರಾಜಕೀಯ ನಾಯಕರುಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ದುಬೈ ಅಂತರಾಷ್ಟ್ರೀಯ ಕ್ರಿಡಾಂಗಣದಲ್ಲಿ ನಡೆದ ಏಷ್ಯಾ ಕಪ್‌ ಟಿ 20 ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡಿದ್ದು, ಭಾರತ ತಂಡವು 5 ವಿಕೇಟ್‌ ಅಂತರದಿಂದ ಜಯಗಳಿಸಿದೆ.

ಈ ಕಾರಣ ಗೆಲುವು ಸಾಧಿಸಿದ ಭಾರತೀಯ ಆಟಗಾರರಿಗೆ, ರಾಜಕೀಯ ನಾಯಕರುಗಳಾದ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಸೇರಿದಂತೆ ಕಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಆಟಗಾರರಿಗೆ ಅಭಿನಂದನೆಗಳನ್ನು ತಿಳಿಸುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಭಾರತ ತಂಡದ ಗೆಲುವಿನ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿಇಂದಿನ ಏಷ್ಯಾಕಪ್‌ ಟಿ20 ಪಂದ್ಯದಲ್ಲಿ, ಟೀಂ ಇಂಡಿಯಾ ಅದ್ಭುತ ಆಲ್ ರೌಂಡ್ ಪ್ರದರ್ಶನ ನೀಡಿದೆ. ತಂಡವು ಅಮೋಘ ಕೌಶಲ್ಯ ಮತ್ತು ಛಲ ಪ್ರದರ್ಶಿಸಿದೆ. ಜಯಭೇರಿ ಬಾರಿಸಿದ ಅವರಿಗೆ ಅಭಿನಂದನೆಗಳು ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಯಿ, ಟಿ 20 ಏಷ್ಯಾಕಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಭಾರತ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ಈ ಅದ್ಭುತ ಗೆಲುವು ನಿಜಕ್ಕೂ ಗಮನಾರ್ಹ ಮತ್ತು ಅರ್ಹವಾದ ಗೆಲುವು. ಈ ಅದ್ಭುತ ಸತ್ಕಾರಕ್ಕಾಗಿ ಧನ್ಯವಾದಗಳು. ಟೀಂ ಇಂಡಿಯಾ ಚೆನ್ನಾಗಿ ಆಡಿದೆ! ಎಂದು ಆಟಗಾರರಿಗೆ ಅಭಿನಂದನೆ ಸೂಚಿಸಿದ್ದಾರೆ.
ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತಕ್ಕೆ ಎಂತಹ ಅದ್ಭುತ ಆರಂಭ. ಇದು ಉಗುರು ಕಚ್ಚಿಕೊಂಡು ನೋಡುವಂತಹ ಪಂದ್ಯವಾಗಿತ್ತು. ಈ ಅಮೋಘ ಗೆಲುವಿಗಾಗಿ ಇಡೀ ತಂಡಕ್ಕೆ ಅಭಿನಂದನೆಗಳು. ಹೀಗೆಯೇ ಮುಂದುವರಿಯಲಿ!' ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟ್ವೀಟ್‌ ಮಾಡುವುದರ ಮೂಲಕ  ಶುಭಕೋರಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ, ಆಟಗಾರರಿಗೆ ಅಭಿನಂದನೆಗಳನ್ನು ತಿಳಿಸುವುದ‘ ಮೂಲಕ, ‘ಎಂತಹಾ ರೋಮಾಂಚನಕಾರಿ ಪಂದ್ಯ! ಟೀಂ ಇಂಡಿಯಾ ಚೆನ್ನಾಗಿ ಆಡಿದೆ. ಅತ್ಯಂತ ಸಂತೋಷ ಹಾಗೂ ಹೆಮ್ಮೆಯ ಭಾವನೆಯೊಂದಿಗೆ ದೇಶವನ್ನು ಪ್ರೇರೇಪಿಸಿದ್ದು ಮತ್ತು ಒಗ್ಗೂಡಿಸಿದ್ದು ಕ್ರೀಡೆಯ ಸೌಂದರ್ಯ’ ಎಂದು ಟ್ವೀಟ್ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು