ಅಸ್ಸಾಂ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಬಿಲ್ ಮಂಡನೆ: ಉತ್ತರಾಖಂಡ್, ಗುಜರಾತ್ ಬೆನ್ನಲ್ಲೇ ಹಿಮಂತ ಬಿಸ್ವ ಶರ್ಮಾ ಸರ್ಕಾರದಿಂದ ಮಸೂದೆ ಮಂಡನೆಗೆ ಯತ್ನ

ಉತ್ತರಾಖಂಡ್ ಮತ್ತು ಗುಜರಾತ್ ರಾಜ್ಯಗಳ ಹಾದಿಯಲ್ಲೇ ಇದೀಗ ಅಸ್ಸಾಂ ಸರ್ಕಾರ ಕೂಡ ತನ್ನ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (UCC) ಜಾರಿಗೆ ತರಲು ಸಂಪೂರ್ಣವಾಗಿ ಸಜ್ಜಾಗಿದೆ. ಇತ್ತೀಚೆಗೆ ನಡೆದ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ (NDA) ಮೈತ್ರಿಕೂಟವು ಭಾರಿ ಬಹುಮತದೊಂದಿಗೆ ಭರ್ಜರಿ ಜಯ ಸಾಧಿಸಿತ್ತು. ಇದರ ಬೆನ್ನಲ್ಲೇ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವ ಶರ್ಮಾ ಅವರು ಪ್ರಮಾಣವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಯುಸಿಸಿ ಅನುಷ್ಠಾನಕ್ಕೆ ಅಧಿಕೃತವಾಗಿ ರಂಗ ಸಿದ್ಧಗೊಳಿಸಿದ್ದಾರೆ.

ಅಸ್ಸಾಂ ಸಚಿವ ಸಂಪುಟವು (ಕ್ಯಾಬಿನೆಟ್) ಈ ಯುಸಿಸಿ ಬಿಲ್ಗೆ ಅನುಮೋದನೆ ನೀಡಿದ ಸುಮಾರು ಎರಡು ವಾರಗಳ ನಂತರ, ಸರ್ಕಾರವು ಸೋಮವಾರದಂದು ಅದನ್ನು ಅಧಿಕೃತವಾಗಿ ವಿಧಾನಸಭೆಯಲ್ಲಿ ಮಂಡಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಪರವಾಗಿ ಅಸ್ಸಾಂ ಸಂಸದೀಯ ವ್ಯವಹಾರಗಳ ಸಚಿವ ಅತುಲ್ ಬೋರಾ ಅವರು ‘ಏಕರೂಪ ನಾಗರಿಕ ಸಂಹಿತೆ ಅಸ್ಸಾಂ ಬಿಲ್ 2026’ (Uniform Civil Code Assam Bill 2026) ಅನ್ನು ಇಂದು ಸದನದಲ್ಲಿ ಇರಿಸಿದರು.

ಈ ಐತಿಹಾಸಿಕ ಮಸೂದೆಯ ಕುರಿತು ವಿಧಾನಸಭೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಸುದೀರ್ಘ ಚರ್ಚೆ ನಡೆಯಲಿದ್ದು, ಬಹುಶಃ ಮೇ 27 ರಂದು ಈ ಬಿಲ್ ಅಧಿಕೃತವಾಗಿ ಅಂಗೀಕಾರಗೊಳ್ಳುವ ಸಾಧ್ಯತೆಯಿದೆ.

Related Articles

ಇತ್ತೀಚಿನ ಸುದ್ದಿಗಳು