ಭೋಪಾಲ್: ಆಘಾತಕಾರಿ ಘಟನೆಯೊಂದರಲ್ಲಿ, ‘ವೈಫ್ ಸ್ವಾಪ್’ ಆಟದ ಭಾಗವಾಗಲಿಲ್ಲ ಎಂಬ ಕಾರಣಕ್ಕೆ ಮಹಿಳೆಯ ಮೇಲೆ ಆಕೆಯ ಗಂಡನೇ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ರಾಜಸ್ಥಾನದ ಬಿಕಾನೇರ್‌ನಲ್ಲಿರುವ ಹೋಟೆಲ್ ಕೊಠಡಿಯಲ್ಲಿ ಈ ಘಟನೆ ನಡೆದಿದ್ದು, ಭೋಪಾಲ್‌ನಲ್ಲಿ ಪ್ರಕರಣ ದಾಖಲಾಗಿದೆ.
ವರದಿಗಳ ಪ್ರಕಾರ, ಮಹಿಳೆಯ ಪತಿ ಬಿಕಾನೇರ್‌ನ 5-ಸ್ಟಾರ್ ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿದ್ದು, ವೈಫ್ ಸ್ವಾಪಿಂಗ್ ಆಟದಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುತ್ತಿದ್ದ.
ವೈಫ್ ಸ್ವಾಪಿಂಗ್ ನಲ್ಲಿ ಪಾಲ್ಗೊಳ್ಳದ ಕಾರಣಕ್ಕೆ ಗಂಡ ತನ್ನನ್ನು ಹೋಟೆಲ್ ಕೋಣೆಯಲ್ಲಿ ಲಾಕ್ ಮಾಡಿ ಫೋನ್ ಕಸಿದುಕೊಂಡಿದ್ದ ಎಂದು ದೂರು ನೀಡಿರುವ ಮಹಿಳೆ, ತನ್ನ ಗಂಡ ಮದ್ಯಪಾನ, ಮಾದಕ ದ್ರವ್ಯ ಸೇವಿಸಿ, ಬೇರೆಯವರೊಂದಿಗೆ ದೈಹಿಕ ಸಂಬಂಧ ಹೊಂದಿದ್ದ, ಹುಡುಗಿಯರು ಮಾತ್ರವಲ್ಲ, ಹುಡುಗರೊಂದಿಗೂ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಎಂದು ತಿಳಿಸಿದ್ದಾರೆ.
ಎರಡು ಜೋಡಿ ದಂಪತಿಗಳು ಪರಸ್ಪರರ ಹೆಂಡತಿಯರನ್ನು ಬದಲಾಯಿಸಿಕೊಂಡು ಲೈಂಗಿಕ ಕ್ರಿಯೆ ನಡೆಸುವ ʻವೈಫ್ ಸ್ವಾಪಿಂಗ್ʼ ಆಟದ ಭಾಗವಾಗುವಂತೆ ಗಂಡ ಬಲವಂತ ಮಾಡಿದ್ದ, ನಾನು ಆಟದ ಭಾಗವಾಗಲು ನಿರಾಕರಿಸಿದಾಗ, ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ನನ್ನನ್ನು ಸಂಸ್ಕೃತಿಹೀನಳೆಂದು ಜರಿದ. ಸಿಟ್ಟಿನಲ್ಲಿ ನನ್ನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಎಂದು ದೂರುದಾರರು ಹೇಳಿದ್ದಾರೆ.
ಪೊಲೀಸರು ದೂರು ದಾಖಲಿಸಿಕೊಂಡು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.