Friday, April 26, 2024

ಸತ್ಯ | ನ್ಯಾಯ |ಧರ್ಮ

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿ ಸ್ವಸಹಾಯ ಗುಂಪುಗಳಿಗೆ ನೆರವು

ಕೊಪ್ಪಳ: ಕೇಂದ್ರ ಸರ್ಕಾರವು ಜಾರಿ ಮಾಡಿರುವ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿ, 30.5 ಕೋಟಿ ರೂ.ಗಳ ಅನುದಾನ ವಿತರಿಸುವ ಮೂಲಕ ರಾಜ್ಯ ಸರ್ಕಾರವು ಸ್ವಸಹಾಯ ಗುಂಪುಗಳಿಗೆ ನೆರವಾಗಲು ಮುಂದಾಗಿದೆ.

ಅತಿ ಸಣ್ಣ ಉದ್ದಿಮೆ ಹಾಗೂ ಸ್ವ-ಉದ್ಯೋಗವನ್ನು ಉತ್ತೇಜಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆ ಜಾರಿ ಮಾಡಿದೆ. ಇದರಡಿ ಕೊಪ್ಪಳ ಜಿಲ್ಲೆಯ 3941 ಸ್ವಸಹಾಯ ಗುಂಪುಗಳಿಗೆ 30.5 ಕೋಟಿ ರೂ.ಗಳ ಅನುದಾನ ವಿತರಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಮುಂದಾಗಿದೆ.

ಒಟ್ಟು 852 ಸ್ವಸಹಾಯ ಗುಂಪುಗಳಿಗೆ 1.27 ಕೋಟಿ ರೂ. ರಿವಾಲ್ವಿಂಗ್‌ ಫಂಡ್‌ ಅನುದಾನ ಮತ್ತು 3,089 ಸ್ವ ಸಹಾಯ ಗುಂಪುಗಳಿಗೆ 29,3 ಕೋಟಿ ರೂ. ಸಮುದಾಯ ಬಂಡವಾಳ ನಿಧಿಯನ್ನೂ ರಾಜ್ಯ ಸರ್ಕಾರ ನೀಡಲಿದೆ.

ಆದರೆ ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ ಕಾರಣದಿಂದಾಗಿ ರಾಜ್ಯದ ಹಲವಾರು ಸಣ್ಣ ಉದ್ಯಮಿದಾರರು, ಗೃಹ ಕೈಗಾರಿಕೆ ಮತ್ತು ಸ್ವಂತ ಉದ್ಯೋಗವನ್ನು ಅವಲಂಬಿಸಿದ್ದಂತಹ ಜನ ಸಾಮಾನ್ಯರ ಬದುಕಲ್ಲಿ ಈ ಯೋಜನೆ ಎಷ್ಟರಮಟ್ಟಿಗೆ ಆಶಾಕಿರಣವನ್ನು ತುಂಬುವುದೋ ಕಾದು ನೋಡಬೇಕಾಗಿದೆ.

Related Articles

ಇತ್ತೀಚಿನ ಸುದ್ದಿಗಳು