ಅಗ್ನಿಶಾಮಕ ದಳದ ಪ್ರಕಾರ ಎರಡು ಪೇಂಟ್ ಮತ್ತು ರಾಸಾಯನಿಕ ಗೋದಾಮುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಗುರುವಾರ ಸಂಜೆ ದೆಹಲಿಯ ಅಲಿಪುರ್ ಪ್ರದೇಶದಲ್ಲಿನ ಪೇಂಟ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಭೀಕರ ಬೆಂಕಿ ಆಕಸ್ಮಿಕದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ.
ಮೊದಲು ಬೆಂಕಿಯು ಸ್ಫೋಟದಿಂದ ಸಂಭವಿಸಿದೆ ಎಂದು ಪೊಲೀಸರು ಹೇಳಿದರು, ಬಹುಶಃ ಕಾರ್ಖಾನೆಯಲ್ಲಿ ಇರಿಸಲಾದ ರಾಸಾಯನಿಕಗಳಿಂದ ಈ ಬೆಂಕಿ ಉಂಟಾಗಿರಬಹುದು.
“ಮೃತರನ್ನು ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ಮತ್ತು ನಾಲ್ವರು ಗಾಯಾಳುಗಳನ್ನು ರಾಜಾ ಹರೀಶ್ ಚಂದ್ರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೃತರನ್ನು ಇನ್ನೂ ಗುರುತಿಸಲಾಗಿಲ್ಲ” ಎಂದು ಅಗ್ನಿಶಾಮಕ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ದೆಹಲಿ ಅಗ್ನಿಶಾಮಕ ಸೇವೆಯ (DFS) ಅಧಿಕಾರಿಯೊಬ್ಬರಿಗೆ ಸಂಜೆ 5.25 ಕ್ಕೆ ಬೆಂಕಿ ಅಪಘಾತದ ಕುರಿತು ಕರೆ ಬಂದಿತು ಮತ್ತು 22 ಟೆಂಡರ್‌ಗಳನ್ನು ಬೆಂಕಿ ಆರಿಸಲು ಕಳುಹಿಸಲಾಯಿತು.
ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ನಂದಿಸಲಾಗಿದ್ದು, ಕೂಲಿಂಗ್ ಆಫ್ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದರು. ಪೊಲೀಸರ ಪ್ರಕಾರ, ಬೆಂಕಿಯ ಮೊದಲು ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಈ ಕುರಿತು ತನಿಖೆ ನಡೆಸಲು ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.