Thursday, June 20, 2024

ಸತ್ಯ | ನ್ಯಾಯ |ಧರ್ಮ

ಅತ್ಯಾಚಾರ ಆರೋಪ : MNS ಸದಸ್ಯ ವೃಶಾಂತ್‌ ವಾಡ್ಕೆ ಬಂಧನ

ಮಹಾರಾಷ್ಟ್ರ : ಮುಂಬರುವ ಬೃಹನ್‌ಮುಂಬೈ ಮುನಿಸಿಪಲ್‌ ಕಾರ್ಪೋರೇಶನ್(ಬಿಎಮ್‌ಸಿ) ಚುನಾವಣೆ ಪಕ್ಷದ ಟಿಕೆಟ್‌ ನೀಡುವ ನೆಪದಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಮ್‌ ಎನ್‌ ಎಸ್) ಸದಸ್ಯರಾದ ವೃಶಾಂತ್‌ ವಾಡ್ಕೆ ಅವರು 42 ವರ್ಷದ ಮಹಿಳೆಯ ಮೇಲೆ ಸೆಪ್ಟಂಬರ್‌ 2021 ರಿಂದ ಜುಲೈ 2022 ರ ನಡುವೆ  ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ.

ಮಹಿಳೆಯ ದೂರಿನ ಆಧಾರದ ಮೇಲೆ ವಿಪಿ ರಸ್ತೆಯ ಪೋಲೀಸರು ಎಫ್‌ಐಆರ್‌ ದಾಖಲು ಮಾಡಿದ್ದು, ಅತ್ಯಾಚಾರದ ಅರೋಪದಡಿ ವೃಶಾಂತ್‌ ವಾಡ್ಕೆ ಅವರನ್ನು  ಬಂಧನ ಮಾಡಲಾಗಿದೆ ಎಂದು ಮುಂಬೈ ಪೋಲೀಸರು ಮಾಹಿತಿ ನೀಡಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು