ಮಹಾರಾಷ್ಟ್ರ : ಮುಂಬರುವ ಬೃಹನ್‌ಮುಂಬೈ ಮುನಿಸಿಪಲ್ ಕಾರ್ಪೋರೇಶನ್(ಬಿಎಮ್‌ಸಿ) ಚುನಾವಣೆ ಪಕ್ಷದ ಟಿಕೆಟ್ ನೀಡುವ ನೆಪದಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಮ್ ಎನ್ ಎಸ್) ಸದಸ್ಯರಾದ ವೃಶಾಂತ್ ವಾಡ್ಕೆ ಅವರು 42 ವರ್ಷದ ಮಹಿಳೆಯ ಮೇಲೆ ಸೆಪ್ಟಂಬರ್ 2021 ರಿಂದ ಜುಲೈ 2022 ರ ನಡುವೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ.
ಮಹಿಳೆಯ ದೂರಿನ ಆಧಾರದ ಮೇಲೆ ವಿಪಿ ರಸ್ತೆಯ ಪೋಲೀಸರು ಎಫ್‌ಐಆರ್ ದಾಖಲು ಮಾಡಿದ್ದು, ಅತ್ಯಾಚಾರದ ಅರೋಪದಡಿ ವೃಶಾಂತ್ ವಾಡ್ಕೆ ಅವರನ್ನು ಬಂಧನ ಮಾಡಲಾಗಿದೆ ಎಂದು ಮುಂಬೈ ಪೋಲೀಸರು ಮಾಹಿತಿ ನೀಡಿದ್ದಾರೆ