Saturday, April 27, 2024

ಸತ್ಯ | ನ್ಯಾಯ |ಧರ್ಮ

ಕನ್ನಡ ಧ್ವಜ ಹಾರಿಸಿದ ಯುವಕನ ಮೇಲೆ ಹಲ್ಲೆ : ಕರವೇ ಪ್ರತಿಭಟನೆ

ಬೆಳಗಾವಿ: ಅಂತರ್‌ ಕಾಲೇಜು ಉತ್ಸವದಲ್ಲಿ ಕನ್ನಡ ಧ್ವಜವನ್ನು ಹಾರಿಸಿದ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದು, ಈ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ಕನ್ನಡ ಪರ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿದೆ.

ಬೆಳಗಾವಿಯ ಗೋಗ್ಟೆ ಕಾಲೇಜ್‌ ಆಫ್‌ ಕಾಮರ್ಸ್‌ʼನ ಶ್ರೇಯಸ್‌ ಎಂಬ ವಿದ್ಯಾರ್ಥಿ ಕರ್ನಾಟಕದ ಕನ್ನಡ ಧ್ವಜವನ್ನು ಹಾರಿಸಿದ್ದು, ನಂತರ ಅಲ್ಲಿನ ಇತರೆ ವಿದ್ಯಾರ್ಥಿಗಳು ಆತನನ್ನು ಇದ್ದಕ್ಕಿದ್ದ ಹಾಗೆ ಥಳಿಸಿ ಹಲ್ಲೆ ಮಾಡಿರುವ ವಿಡಿಯೋ ವೈರಲ್‌ ಆಗುತ್ತಿದ್ದು, ಈ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಮತ್ತು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಈ ಕುರಿತು ಮಾತನಾಡಿದ ಕರವೇ ಸದಸ್ಯ ದೀಪಕ್‌ ಗುಡಗಾ ಅವರು, ʼಕನ್ನಡ ಧ್ವಜವನ್ನು ಹಾರಿಸಿದಕ್ಕಾಗಿ ಬೇರೆ ಭಾಷಾ ವಿದ್ಯಾರ್ಥಿ ಗುಂಪುಗಳು ಶ್ರೇಯಸ್‌ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದಲ್ಲದೆ, ಬೆಳಗಾವಿಯ ಅನೇಕ ಕಾಲೇಜುಗಳಲ್ಲಿ ಮರಾಠಿ ಮಾತನಾಡುವ ಜನರ ಪ್ರಾಬಲ್ಯ ಹೊಂದಿದ್ದು, ಈ ಹಿಂದೆಯೂ ಕನ್ನಡ ಸಂಸ್ಕೃತಿ ಮತ್ತು ಕನ್ನಡಿಗರನ್ನು ಅವಮಾನಿಸಿರುವ ಘಟನೆಗಳು ವರದಿಯಾಗಿವೆʼ ಎಂದು ಹೇಳಿದ್ದಾರೆ. ಈ ರೀತಿ ಯುವಕನನ್ನು ಥಳಿಸಿದ ದುಷ್ಕರ್ಮಿಗಳಿಗೆ ಶಿಕ್ಷೆ ಆಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಗುಲಾಗ್‌ ಹೇಳಿದ್ದಾರೆ.

ಈ ಕುರಿತು ಕನ್ನಡ ಪರ ಸಂಘಟನೆಗಳು ದೂರು ದಾಖಲಿಸಲು ಪೊಲೀಸ್‌ ಠಾಣೆಗೆ ಹೊರಟಾಗ, ಘಟನೆಯ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸ್‌ ಇಲಾಖೆಯ ಮೂಲಗಳು ತಿಳಿಸುತ್ತಿದ್ದು, ಈ ಕುರಿತು ಮಾತನಾಡಿರುವ ಪೊಲೀಸ್‌ ಅಧಿಕಾರಿಯೊಬ್ಬರು, ʼಇದು ಉತ್ಸವದ ಸಮಯದಲ್ಲಿ ಸಂಗೀತದೊಂದಿಗೆ ಮುಳುಗಿರುವಾಗ ಕಾಲ್ತುಳಿತದ ಕಾರಣದಿಂದ ಉಂಟಾಗಿರುವ ಘರ್ಷಣೆ ಇರುಬಹುದು. ವಿದ್ಯಾರ್ಥಿಯ ಮೇಲೆ ಯಾತಕ್ಕಾಗಿ ಹಲ್ಲೆ ನಡೆಸಿದ್ದಾರೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ನಾವು ತನಿಖೆ ಶುರು ಮಾಡಿದ ನಂತರ ಸ್ಪಷ್ಟತೆ ಸಿಗುತ್ತದೆʼ ಎಂದು ತಿಳಿಸಿದ್ದಾರೆ.

ದಾಳಿಕೋರರಲ್ಲಿ ಒಬ್ಬರು ಕನ್ನಡಿಗ ಎಂಬ ವರದಿಗಳು ಬರುತ್ತಿವೆ ಮತ್ತು ಈ ಘಟನೆಗೆ ಸಂಬಂಧಪಟ್ಟಂತೆ ಯಾವುದೇ  ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಸ್ಪಷ್ಟ ವರದಿಯೊಂದಿಗೆ ಬರುವವರೆಗೆ ನಾವು ಕಾಯಬೇಕಾಗಿದೆ” ಎಂದು ಬೆಳಗಾವಿ ಮೂಲದ ಸಾಮಾಜಿಕ ಕಾರ್ಯಕರ್ತ ಅಶೋಕ್ ಚಂದರಗಿಯವರು ಹೇಳಿದ್ದಾರೆ.

ಬೆಳಗಾವಿಯಲ್ಲಿ ಗೋಗ್ಟೆ ಕಾಲೇಜ್ ಆಫ್ ಕಾಮರ್ಸ್ ಸೇರಿದಂತೆ ಹಲವಾರು ಸಂಸ್ಥೆಗಳನ್ನು ನಡೆಸುತ್ತಿರುವ ಕರ್ನಾಟಕ ಲಾ ಸೊಸೈಟಿಯ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲು ಗುರುವಾರ ಸಂಜೆ ಕಾಲೇಜು ಸದಸ್ಯರೊಂದಿಗೆ ಸಭೆ ನಡೆಸುವ ನಿರೀಕ್ಷೆಯಿದೆ.

Related Articles

ಇತ್ತೀಚಿನ ಸುದ್ದಿಗಳು