Home ದೇಶ ಅವಳಿ ಮಕ್ಕಳ ತಂದೆ ತಾಯಿಯಾದ ನಟಿ ನಯನತಾರಾ ವಿಘ್ಞೇಶ್‌ : ತಮಿಳುನಾಡು ಸರ್ಕಾರದಿಂದ ವಿಚಾರಣೆಗೆ ಆದೇಶ

ಅವಳಿ ಮಕ್ಕಳ ತಂದೆ ತಾಯಿಯಾದ ನಟಿ ನಯನತಾರಾ ವಿಘ್ಞೇಶ್‌ : ತಮಿಳುನಾಡು ಸರ್ಕಾರದಿಂದ ವಿಚಾರಣೆಗೆ ಆದೇಶ

0

ಚೆನ್ನೈ: ನಟಿ ನಯನತಾರಾ ಮತ್ತು ವಿಘ್ಞೇಶದ ಮದುವೆಯಾದ  ಕೇವಲ ನಾಲ್ಕು ತಿಂಗಳಿಗೆ ಅವಳಿ ಮಕ್ಕಳ ತಂದೆ-ತಾಯಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ವ್ಯಕ್ತಪಡಿಸಿದ್ದರು. ಆದರೆ ಇದೇ  ವಿಚಾರವಾಗಿ ತಮಿಳುನಾಡು ಸರ್ಕಾರ ವಿಚಾರಣೆ ಮಾಡುವಂತೆ ತಿಳಿಸಿದೆ.

ದಕ್ಷಿಣ ಭಾರತದ ಪ್ರಸಿದ್ದ ನಟಿ ನಯನತಾರಾ ಮತ್ತು ವಿಘ್ಞೇಶ್‌ ಇದೇ ವರ್ಷದ ಜೂನ್‌ 9ರಂದು ದಾಂಪತ್ರ ಜೀವನಕ್ಕೆ ಕಾಲಿಟ್ಟಿದ್ದರು. ಅ.9 ರಂದು ಮದುವೆಯಾದ ಕೇವಲ ನಾಲ್ಕೇ ತಿಂಗಳಿಗೆ ಅವಳಿ ಮಕ್ಕಳ ಪೋಷಕರಾಗಿರುವ ವಿಚಾರವನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದರು. ನಯನತಾರಾ ಮತ್ತು ವಿಘ್ಞೇಶ್‌ ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆದು ಪೋಷಕರಾಗಿದ್ದಾರೆ ಎಂದು ಎಲ್ಲೆಡೆ ವರದಿಯಾಗಿವೆ.  

ಈ ಕಾರಣ ಭಾರತದಲ್ಲಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುವುದಕ್ಕೆ ಕೆಲವು ನಿರ್ಬಂಧಗಳಿದ್ದು, ಕಾನೂನಿನ ಎಲ್ಲಾ ನಿಯಮಗಳನ್ನು ಪಾಲಿಸಿ ಈ ಜೋಡಿ ಮಗುವನ್ನು ಪಡೆದಿದ್ದಾರಾ ಎಂದು ಪ್ರಶ್ನೆಗಳು ಹುಟ್ಟಿಕೊಂಡಿರುವುದರಿಂದ ತಮಿಳುನಾಡು ಸರ್ಕಾರ ಈ ಬಗ್ಗೆ ವಿಚಾರಣೆ ನಡೆಸುವುದಾಗಿ ಆದೇಶ ನೀಡಿದೆ.

ಈ ಕುರಿತು ಮಾತನಾಡಿದ ತಮಿಳುನಾಡಿನ ಆರೋಗ್ಯ ಸಚಿವ ಮಾ.ಸುಬ್ರಮಣ್ಯನ್‌ “ನಯನತಾರಾ ಮತ್ತು ವಿಘ್ಞೇಶ್‌ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಿರುವ ವಿಚಾರವಾಗಿ ತನಿಖೆ ನಡೆಸುವಂತೆ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ವಿಚಾರಣೆಗೆಂದು ವೈದ್ಯಕೀಯ ಸೇವೆಗಳ ನಿರ್ದೇಶನಾಲಯಕ್ಕೆ ಹೇಳುತ್ತೇನೆ” ಎಂದು ತಿಳಿಸಿದರು.

ಇದನ್ನೂ ನೋಡಿ : ಹಸು ರಾಷ್ಟ್ರೀಯ ಪ್ರಾಣಿಯಾಗಲಿ ಎಂದವನಿಗೆ ಸುಪ್ರೀಂಕೋರ್ಟ್‌ ಕಪಾಲ ಮೋಕ್ಷ!

You cannot copy content of this page

Exit mobile version