Saturday, May 3, 2025

ಸತ್ಯ | ನ್ಯಾಯ |ಧರ್ಮ

ಮೇ.5 ರಂದು ದತ್ತಾಂಶ ಸಂಗ್ರಹಿಸುವ ಕುರಿತು ಜಾಗೃತಿ ಜಾಥಾ ಟಿ.ಆರ್. ವಿಜಯಕುಮಾರ್

ಹಾಸನ : ಪರಿಶಿಷ್ಠ ಜಾತಿಗಳಲ್ಲಿ ಒಳಮೀಸಲಾತಿಗಾಗಿ ರಚನೆಯಾಗಿರುವ ನಾಗಮೋಹನ್ ದಾಸ್ ಏಕ ಸದಸ್ಯ ಪೀಠ ಆಯೋಗ ದತ್ತಾಂಶಗಳನ್ನ ಸಂಗ್ರಹಿಸುತ್ತಿರುವ ಹಿನ್ನಲೆಯಲ್ಲಿ ಮೇ.5 ರಂದು ನಗರದ ಮಹಾವೀರ ವೃತ್ತದಲ್ಲಿ ಜಾಗೃತಿ ಜಾಥ ಅಭಿಯಾನಕ್ಕೆ ದಸಂಸ ಹಿರಿಯ ಮುಖಂಡ ಹೆಚ್.ಕೆ. ಸಂದೇಶ್, ಎಂ. ಸೋಮಶೇಖರ್ ಹಾಗೂ ಸಿಪಿಐಎಂನ ಧರ್ಮೇಶ್ ಚಾಲನೆ ಕೊಡುವುದಾಗಿ ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಒಳಮೀಸಲು ಜಾರಿಗೂ ಮುನ್ನ ಇದೇ ತಿಂಗಳ 5 ರಿಂದ ಪರಿಶಿಷ್ಟ 101 ಜಾತಿಗಳ ಗಣತಿ ಆರಂಭವಾಗುತ್ತಿದ್ದು, ಆಯಾ ಜಾತಿಗಳ ಜನರು ಮೂಲ ಜಾತಿಯ ಹೆಸರನ್ನೇ ನಮೂದಿಸಬೇಕು. ಮೊದಲನೇ ಹಂತದಲ್ಲಿ ಮೇ 5 ರಿಂದ 17ರ ವರೆಗೆ ದತ್ತಾಂಶ ಸಂಗ್ರಹ ಕಾರ್ಯಕ್ರಮ ನಡೆಯಲಿದೆ. ಮೇ 19 ರಿಂದ 21ರ ವರೆಗೆ ಮತಗಟ್ಟೆ ಅಭಿಯಾನ ನಡೆಯಲಿದೆ. ಮೇ. 19 ರಿಂದ 23 ರ ವರೆಗೆ ಆನ್‌ಲೈನ್ ಮೂಲಕ ಜಾತಿ ನಮೂದಿಸಲು ಅವಕಾಶವಿದೆ ಎಂದರು. ಈ ಸಂದರ್ಭದಲ್ಲಿ ಯಾರೂ ಕೂಡ ದೂರ ಉಳಿಯದೆ ತಮ್ಮ ತಮ್ಮ ಮೂಲ ಜಾತಿ ನಮೂದಿಸಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ನಮ್ಮ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಲು ಮೇ. 5 ರಿಂದಲೇ ಮಹಾವೀರ ವೃತ್ತದಿಂದಲೇ ಜಾಗೃತಿ ಜಾಥಾ ಅಭಿಯಾನಕ್ಕೆ ಹಿರಿಯ ದಸಂಸ ಮುಖಂಡರಾದ ಹೆಚ್.ಕೆ.ಸಂದೇಶ್, ಸೋಮಶೇಖರ್ ಮತ್ತು ಸಿಪಿಐಎಂ ಜಿಲ್ಲಾಧ್ಯಕ್ಷ ಧರ್ಮೇಶ್ ಮೊದಲಾದವರು ಚಾಲನೆ ನೀಡಲಿದ್ದಾರೆ. ಈ ಜಾಥಾವು ಜಿಲ್ಲೆಯ ಪ್ರತಿಯೊಂದು ಹಳ್ಳಿ, ತಾಲೂಕುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಿದೆ ಎಂದು ಹೇಳಿದರು. ಜುಲೈ 8ನೇ ಭಾನುವಾರದಂದು ನಗರದ ಕಲಾಭವನದಲ್ಲಿ ಮಾದಿಗ ದಂಡೋರ ಎಂ.ಆರ್.ಹೆಚ್.ಎಸ್. ವತಿಯಿಂದ ಜಿಲ್ಲಾ ಸಮಾವೇಶ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಒಳ ಮೀಸಲಾತಿ ವರ್ಗೀಕರಣ ರಾಷ್ಟಿçÃಯ ಹೋರಾಟಗಾರ ಮಂದಕೃಷ್ಣ ಮಾದಿಗ ಆಗಮಿಸಲಿದ್ದು, ಈ ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಕೋರಿದರು.
ಪತ್ರಿಕಾಗೋಷ್ಟಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಸಮುದಾಯದ ಮುಖಂಡರಾದ ಚಂದ್ರಶೇಖರ್, ಸತೀಶ್, ಮಹದೇವ್, ರಮೇಶ್, ರವೀಶ್, ತಿರುಪತಿಹಳ್ಳಿ ದೇವರಾಜು, ನಿವೃತ್ತ ಎಇಇ ದೇವರಾಜು ಮೊದಲಾದವರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page