ನವದೆಹಲಿ: ತಮ್ಮ ಸಂಸ್ಥೆ ನೀಡಿದ ಚುನಾವಣೆ ಸಮೀಕ್ಷೆ ಭಾರಿ ಅಂತರದಿಂದ ಸುಳ್ಳಾದುದಕ್ಕೆ ಆಕ್ಸಿಸ್ ಮೈ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಗುಪ್ತಾ ಇಂಡಿಯಾ ಟುಡೇ ಟಿ ವಿ ಲೈವ್ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಘಟನೆ ನಡೆದಿದೆ.
ಇಂಡಿಯಾ ಟುಡೆಯ ಚುನಾವಣಾ ಫಲಿತಾಂಶಗಳ ಲೈವ್ ಕವರೇಜ್‌ನಲ್ಲಿ ಕಾಣಿಸಿಕೊಂಡ ಗುಪ್ತಾ, ಅವರು 2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ತಮ್ಮ ಲೆಕ್ಕಾಚಾರ ಮೀರುತ್ತಿದ್ದಂತೆ, ಕಣ್ಣೀರಿಡತೊಡಗಿದರು. ಟಿವಿ ನೀರೂಪಕರು ಎದ್ದು ಬಂದು ಅವರನ್ನು ಯು ಡಿಡ್ ಯುವರ್ ಬೆಸ್ಟ್ ಎನ್ನುತ್ತಾ ಸಮಧಾನ ಮಾಡಿದ ಘಟನೆ ನಡೆಯಿತು.
ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ, ಎನ್‌ಡಿಎ 361-401 ಸ್ಥಾನಗಳನ್ನು ಹಾಗೂ INDIA ಒಕ್ಕೂಟವು 131-166 ಸ್ಥಾನಗಳನ್ನು ಗೆಲ್ಲಲಿವೆ. ಇತರ ಪಕ್ಷಗಳು 8 ರಿಂದ 20 ಸ್ಥಾನಗಳನ್ನು ಗೆಲ್ಲಲಿವೆ ಎಂದು ಹೇಳಲಾಗಿತ್ತು. ಆದರೆ, ಅದು ಈಗ ಬಾರಿ ಅಂತರದಿಂದ ಸುಳ್ಳಾಗಿದೆ. ಎಂದು ಸಮೀಕ್ಷೆ ಹೇಳಿತ್ತು.
ಶನಿವಾರದ ಅಂತಿಮ ಸುತ್ತಿನ ಮತದಾನದ ನಂತರ ಬಿಡುಗಡೆಯಾದ ಬಹುಪಾಲು ಎಕ್ಸಿಟ್ ಪೋಲ್‌ಗಳು ಬಿಜೆಪಿ ಮತ್ತು ಎನ್‌ಡಿಎ ಮುನ್ನಡೆ ಸಾಧಿಸಲಿವೆ ಎಂದು ತೋರಿಸಿದ್ದವು.
ಇಂದು ಮತ ಎಣಿಕೆಯ ಬಳಿಕ INDIA ಒಕ್ಕೂಟ ಹೆಚ್ಚು ಸ್ಥಾನ ಗಳಿಸುತ್ತಿದ್ದಂತೆ ಚುನಾವಣಾ ಸಮೀಕ್ಷೆಗಳು ಸುಳ್ಳಾದವು. ಸಮೀಕ್ಷೆಗಳ ಸತ್ಯಾಸತ್ಯತೆಯ ಕುರಿತು ಪ್ರಶ್ನೆಗಳು ಏಳುತ್ತಿದ್ದಂತೆ ಆಕ್ಸಿಸ್ ಮೈ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಗುಪ್ತಾ ಲೈವ್ ಕಾರ್ಯಕ್ರಮದಲ್ಲೇ ಕಣ್ಣೀರು ಹಾಕಿದ್ದು, ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ.