ಅಯೋಧ್ಯೆ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ ಕಳ್ಳತನದ ಘಟನೆ ಸ್ಥಳೀಯ ವ್ಯಾಪಾರಿಗಳು ಮತ್ತು ಹೋಟೆಲ್‌ಗಳ ಮೇಲೆ ತೀವ್ರ ಪರಿಣಾಮ ಬೀರಿದೆ.
ಕಳ್ಳತನದ ಘಟನೆಗೂ ಮುಂಚಿನ ದಿನಗಳಿಗೆ ಹೋಲಿಸಿದರೆ ಭಕ್ತರ ಸಂಖ್ಯೆ ಶೇಕಡಾ 25 ರಷ್ಟು ಕಡಿಮೆಯಾಗಿದೆ ಎಂದು ರಾಮಪಥದಲ್ಲಿ ಗಂಧ ಮತ್ತು ಹೂವಿನ ಹಾರಗಳನ್ನು ಮಾರಾಟ ಮಾಡುವ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ. ಹಿಂದೆ ದಿನಕ್ಕೆ 4-5 ಸಾವಿರ ರೂಪಾಯಿ ಸಂಪಾದಿಸುತ್ತಿದ್ದ ಪ್ರಸಾದದ ವ್ಯಾಪಾರಿ ಈಗ ಸಾವಿರ ರೂಪಾಯಿ ಗಳಿಸಲು ಕಷ್ಟಪಡುತ್ತಿದ್ದಾನೆ. ವಾಹನ ನಿರ್ವಹಣೆಯ ವೆಚ್ಚವನ್ನು ಭರಿಸಲು ಸಹ ಸಾಧ್ಯವಾಗುತ್ತಿಲ್ಲ ಎಂದು ಅಜಯ್ ಎಂಬ ಈ-ರಿಕ್ಷಾ ಚಾಲಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಉಪಾಹಾರದ ಸಮಯದಲ್ಲಿ ಜನಪ್ರಿಯ ಹೋಟೆಲೊಂದರ ಎಲ್ಲಾ ಮೇಜುಗಳು ಖಾಲಿ ಬಿದ್ದಿದ್ದವು. ಕಳೆದ 10 ದಿನಗಳಿಂದ ವ್ಯಾಪಾರ ತೀರಾ ಕಡಿಮೆಯಾಗಿದೆ ಎಂದು ಹೋಟೆಲ್ ಮ್ಯಾನೇಜರ್ ಒಬ್ಬರು ತಿಳಿಸಿದ್ದಾರೆ. ಮತ್ತೊಂದೆಡೆ, ಮಧ್ಯಮ ಶ್ರೇಣಿಯ ಹೋಟೆಲ್‌ಗಳಲ್ಲಿ ರೂಮ್ ಬುಕಿಂಗ್ ಶೇಕಡಾ 25 ಕ್ಕೆ ಕುಸಿದಿದೆ. ಪ್ರಸ್ತುತ ಅಯೋಧ್ಯೆಯ ಸುತ್ತಮುತ್ತ 100 ಹೊಸ ಹೋಟೆಲ್‌ಗಳು ನಿರ್ಮಾಣ ಹಂತದಲ್ಲಿವೆ.
ಧಾರ್ಮಿಕ ಪ್ರವಾಸೋದ್ಯಮವು ಶೀಘ್ರವಾಗಿ ಚೇತರಿಸಿಕೊಳ್ಳದಿದ್ದರೆ ಹೂಡಿಕೆಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ದೇಣಿಗೆ ಕಳ್ಳತನದ ಘಟನೆಯಿಂದಲೇ ತಮ್ಮ ವ್ಯಾಪಾರ ಗಣನೀಯವಾಗಿ ಕುಸಿದಿದೆ ಎಂದು ಹೆಚ್ಚಿನ ಹೋಟೆಲ್ ಮಾಲೀಕರು ಮತ್ತು ಸಣ್ಣ ವ್ಯಾಪಾರಿಗಳು ನಂಬಿದ್ದಾರೆ.
ಕಳ್ಳತನದ ಬಗ್ಗೆ ಸಾಧುಗಳಲ್ಲಿ ಭಿನ್ನಾಭಿಪ್ರಾಯ ದೇಣಿಗೆ ಕಳ್ಳತನದ ಬಗ್ಗೆ ಸ್ಥಳೀಯ ಸಾಧುಗಳು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶ್ರೀ ಹನುಮತ್ ನಿವಾಸ್‌ನ ಮಿಥಿಲೇಶನಂದಿನಿ ಶರಣ್ ಅವರು, ಈ ಘಟನೆಯು ವ್ಯವಸ್ಥೆಯ ವೈಫಲ್ಯವಲ್ಲ, ಆಡಳಿತದ ವೈಫಲ್ಯ ಎಂದು ಕರೆದಿದ್ದಾರೆ. ಮಹಂತ್ ಕಮಲ್ ನಯನ್ ದಾಸ್ ಮಾತನಾಡಿ, ಇದು ಕೇವಲ ಕೆಲವು ಕೆಳಹಂತದ ಉದ್ಯೋಗಿಗಳ ತಪ್ಪು ಎಂದು ಬಣ್ಣಿಸಿದ್ದಾರೆ.
ಶಂಕರಾಚಾರ್ಯರು ಮತ್ತು ಮಠಾಧೀಶರಿಗೆ ಟ್ರಸ್ಟ್‌ನಲ್ಲಿ ಸ್ಥಾನ ನೀಡಬೇಕು ಎಂದು ಮಹಂತ್ ವಿವೇಕ್ ಅಚಾರಿ ಆಗ್ರಹಿಸಿದ್ದಾರೆ. ಹೊಸ ಟ್ರಸ್ಟ್ ರಚಿಸಬೇಕು ಎಂದೂ ಒಬ್ಬರು ಒತ್ತಾಯಿಸಿದ್ದಾರೆ.
ಯುಪಿ ಚುನಾವಣೆ ಮೇಲೆ ಪರಿಣಾಮ! ಇನ್ನೊಂದು ಒಂಬತ್ತು ತಿಂಗಳಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ. ಇಂತಹ ಸಂದರ್ಭದಲ್ಲಿ ದೇಣಿಗೆ ಕಳ್ಳತನದ ವಿವಾದವು ವಿರೋಧ ಪಕ್ಷಗಳಿಗೆ ಪ್ರಮುಖ ರಾಜಕೀಯ ಅಸ್ತ್ರವಾಗಿ ಪರಿಣಮಿಸಿದೆ. ಇದರಿಂದಾಗಿ ರಾಮಮಂದಿರವನ್ನು ತಮ್ಮ ಸದ್ಧಾಂತಿಕ ಸಂಕೇತವಾಗಿ ಹೊಂದಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಷ್ಟ ನಿಯಂತ್ರಣ ಪ್ರಚಾರಕ್ಕೆ ಇಳಿದಿವೆ.
ಈ ಘಟನೆಯ ಕುರಿತು ಸಿಟ್ (SIT) ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಟ್ರಸ್ಟ್‌ನಲ್ಲಿ ಪ್ರಮುಖ ಸುಧಾರಣೆಗಳನ್ನು ತರಲಾಗುವುದು ಎಂದು ಜನರಿಗೆ ಮನವರಿಕೆ ಮಾಡಿಕೊಡುತ್ತಿವೆ. ಈ ಹಿನ್ನೆಲೆಯಲ್ಲಿ, ಈ ಸಮಸ್ಯೆ ತಿಳಿಯಾಗುವ ಮುನ್ನವೇ ಚುನಾವಣೆ ನಡೆಸಿದರೆ ರಾಜಕೀಯ ನಷ್ಟ ಉಂಟಾಗಬಹುದು ಎಂಬ ಭೀತಿಯಿಂದ ಚುನಾವಣೆಯನ್ನು ಅವಧಿಗಿಂತ ಮುನ್ನ ನಡೆಸಲು ಬಿಜೆಪಿ ಒಲವು ತೋರುತ್ತಿಲ್ಲ ಎನ್ನಲಾಗಿದೆ.
ದೇಶಾದ್ಯಂತ ಸಹಿ ಸಂಗ್ರಹ ರಾಮಮಂದಿರ ದೇಣಿಗೆ ಅಕ್ರಮಗಳ ಕುರಿತು ಕೇಜ್ರಿವಾಲ್ ಆಕ್ರೋಶ ಅಯೋಧ್ಯೆ ರಾಮಮಂದಿರದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಾರ್ಟಿ (AAP) ದೇಶಾದ್ಯಂತ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದೆ. ಆರೋಪ ಎದುರಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಆಗ್ರಹಿಸಿದ್ದಾರೆ.
ಭಾನುವಾರ ಪಕ್ಷದ ವತಿಯಿಂದ ಸುಂದರಕಾಂಡ ಪಾರಾಯಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕೇಜ್ರಿವಾಲ್, ರಾಮಮಂದಿರದಲ್ಲಿ ನಡೆದಿರುವ ‘ಚಂದಾ-ಚೋರಿ’ಗೆ (ದೇಣಿಗೆ ಕಳ್ಳತನ) ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುತ್ತಿರುವುದಾಗಿ ತಿಳಿಸಿದರು ಮತ್ತು ದೇಶಾದ್ಯಂತ ನಡೆಯುವ ಈ ಅಭಿಯಾನದಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಮನವಿ ಮಾಡಿದರು.
