Home ದೇಶ ಮಹಾರಾಷ್ಟ್ರದ ಲಡ್ಕಿ ಬಹಿನ್ ಯೋಜನೆಯಲ್ಲಿ ಅಕ್ರಮ: ರೂ. 3,541 ಕೋಟಿ ದುರ್ಬಳಕೆಯನ್ನು ಪತ್ತೆ ಹಚ್ಚಿದ ಸಿಎಜಿ

ಮಹಾರಾಷ್ಟ್ರದ ಲಡ್ಕಿ ಬಹಿನ್ ಯೋಜನೆಯಲ್ಲಿ ಅಕ್ರಮ: ರೂ. 3,541 ಕೋಟಿ ದುರ್ಬಳಕೆಯನ್ನು ಪತ್ತೆ ಹಚ್ಚಿದ ಸಿಎಜಿ

0

ಮುಂಬೈ: ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ ಸರ್ಕಾರ ಅತ್ಯಂತ ಪ್ರತಿಷ್ಠಿತವಾಗಿ ಜಾರಿಗೆ ತಂದಿರುವ ‘ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನೆ’ಯಲ್ಲಿ ರೂ. 3,541 ಕೋಟಿ ಅಕ್ರಮ ನಡೆದಿರುವುದನ್ನು ಸಿಎಜಿ (ಕಂಟ್ರೋಲರ್ ಅಂಡ್ ಆಡಿಟರ್ ಜನರಲ್) ಪತ್ತೆ ಹಚ್ಚಿದೆ.

ನಿಗದಿಪಡಿಸಿದ ಹಣಕ್ಕಿಂತ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಲಾಗಿದ್ದು, ಅದಕ್ಕೆ ಸರಿಯಾದ ಲೆಕ್ಕ ಪತ್ರಗಳನ್ನು ಒದಗಿಸುವಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿಫಲವಾಗಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.

ಸಿಎಜಿ ವರದಿಯ ಪ್ರಕಾರ, 2024-25ರಲ್ಲಿ ಮಹಾರಾಷ್ಟ್ರ ಸರ್ಕಾರವು ಈ ಯೋಜನೆಗಾಗಿ ಮೀಸಲಿಟ್ಟಿದ್ದ ರೂ. 15,586 ಕೋಟಿ ಹಣವನ್ನು ತಕ್ಷಣವೇ ಬಳಸದೆ ವರ್ಚುವಲ್ ಪರ್ಸನಲ್ ಡೆಪಾಸಿಟ್ ಖಾತೆಗಳಿಗೆ ವರ್ಗಾಯಿಸಿದೆ. ಇದು ಅನುದಾನ ಹಂಚಿಕೆಯ ನಿಯಮಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಈ ಯೋಜನೆಯಡಿ 21 ರಿಂದ 65 ವರ್ಷದೊಳಗಿನ ಮಹಿಳೆಯರಿಗೆ ಪ್ರತಿ ತಿಂಗಳು ರೂ. 1,500 ಹಣವನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

ಇದರ ವಾಸ್ತವ ವೆಚ್ಚ ರೂ. 33,237 ಕೋಟಿ ಎಂದು ತೋರಿಸಲಾಗಿದೆ. ಆದರೆ ಹೆಚ್ಚುವರಿಯಾಗಿ ವೆಚ್ಚ ಮಾಡಲಾದ ರೂ. 3,541 ಕೋಟಿಗೆ ಸರಿಯಾದ ದಾಖಲೆ ಅಥವಾ ಆಧಾರಗಳನ್ನು ಒದಗಿಸಿಲ್ಲ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ.

You cannot copy content of this page

Exit mobile version