Home ದೆಹಲಿ ಕತಾರ್‌ನ ಮಾಜಿ ಅಮೀರ್ ನಿಧನ: ಇಂದು ಭಾರತದಲ್ಲಿ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ ಮೋದಿ ಸರ್ಕಾರ

ಕತಾರ್‌ನ ಮಾಜಿ ಅಮೀರ್ ನಿಧನ: ಇಂದು ಭಾರತದಲ್ಲಿ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ ಮೋದಿ ಸರ್ಕಾರ

0

ನವದೆಹಲಿ: ಕತಾರ್‌ನ ಮಾಜಿ ಅಮೀರ್ ಹಾಗೂ ಹಾಲಿ ಅಮೀರ್ ಅವರ ತಂದೆಯಾದ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ಅವರ ನಿಧನದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಜುಲೈ 13ರ ಇಂದು ದೇಶಾದ್ಯಂತ ಒಂದು ದಿನದ ಅಧಿಕೃತ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯ ಪ್ರಕಾರ, ಶೋಕಾಚರಣೆಯ ದಿನದಂದು ದೇಶದಾದ್ಯಂತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ (Half-Mast) ಹಾರಿಸಲಾಗುತ್ತದೆ. ಅಲ್ಲದೆ, ಯಾವುದೇ ಅಧಿಕೃತ ಸರ್ಕಾರಿ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಮಾಜಿ ಅಮೀರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ (X)ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ಅವರು ಕತಾರ್‌ನ ಅಭಿವೃದ್ಧಿ ಮತ್ತು ಸಮೃದ್ಧಿಗೆ ಮಹತ್ವದ ಕೊಡುಗೆ ನೀಡಿದ ದೂರದರ್ಶಿ ನಾಯಕರು ಹಾಗೂ ಭಾರತದ ನಿಜವಾದ ಸ್ನೇಹಿತರಾಗಿದ್ದರು ಎಂದು ಬಣ್ಣಿಸಿದ್ದಾರೆ.

ಪ್ರಧಾನಿ ಮೋದಿ ಅವರು, “ಕತಾರ್‌ನ ಮಾಜಿ ಅಮೀರ್ ಅವರ ನಿಧನದ ಸುದ್ದಿ ಅತ್ಯಂತ ದುಃಖ ತಂದಿದೆ. ಕತಾರ್‌ನ ಪ್ರಗತಿಗೆ ಅವರು ನೀಡಿದ ನಾಯಕತ್ವವನ್ನು ಸದಾ ಸ್ಮರಿಸಲಾಗುತ್ತದೆ. 2024ರ ಫೆಬ್ರವರಿಯಲ್ಲಿ ಕತಾರ್‌ಗೆ ಭೇಟಿ ನೀಡಿದ ವೇಳೆ ಅವರನ್ನು ಭೇಟಿಯಾಗುವ ಅವಕಾಶ ನನಗೆ ದೊರೆತಿತ್ತು. ಭಾರತದ ಹಿತೈಷಿಯಾಗಿದ್ದ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ” ಎಂದು ಸಂತಾಪ ಸೂಚಿಸಿದ್ದಾರೆ.

ಇದೇ ವೇಳೆ, ಭಾರತ ಸರ್ಕಾರದ ಪರವಾಗಿ ಕತಾರ್ ರಾಜಮನೆತನಕ್ಕೆ ಅಧಿಕೃತ ಸಂತಾಪ ಸೂಚಿಸಲು ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶೀಘ್ರದಲ್ಲೇ ಕತಾರ್‌ಗೆ ಭೇಟಿ ನೀಡಲಿದ್ದಾರೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

You cannot copy content of this page

Exit mobile version