Tuesday, May 20, 2025

ಸತ್ಯ | ನ್ಯಾಯ |ಧರ್ಮ

ಉತ್ತಮ ವೇದಿಕೆಯಾದ ಬಿ.ಎಸ್. ದೇಸಾಯಿರವರ ನೆಕ್ಸ್ ಸ್ಟೆಪ್ ಕಾರ್ಯಾಗಾರ

ಹಾಸನ : ಅನುಭವ, ಅಧ್ಯಯನ, ತಿಳವಳಿಕೆಯಿಂದ ಹೊರಹೊಮ್ಮುವ ಪರಸ್ಪರ ಅಭಿಪ್ರಾಯ, ಹೊಸ ಕಲಾಕೃತಿಗಳಿಗೆ ದಾರಿದೀಪ ಆಗಿಸಿಕೊಳ್ಳುವುದು ಹೇಗೆ ಎನ್ನುವುದಕ್ಕೆ ಹಾಸನದ ಬಿ.ಎಸ್. ದೇಸಾಯಿ ಸ್ಟುಡಿಯೋದಲ್ಲಿ ನಡೆದ ನೆಕ್ಸ್ ಸ್ಟೆಪ್ ಕಾರ್ಯಾಗಾರ ಉತ್ತಮ ವೇದಿಕೆಯಾಯಿತು. ಬೆಂಗಳೂರಿನ ಕೃಷ್ಣ ಸೆಟ್ಟಿ ಫೌಂಡೇಶನ್ ಮತ್ತು ಹಾಸನದ ಚಿತ್ಕಲಾ ಫೌಂಡೇಶನ್ ಆಶ್ರಯದಲ್ಲಿ ನಡೆದ ಕಾರ್ಯಾಗಾರದಲ್ಲಿ ರಾಜ್ಯದ ಬೇರೆ ಬೇರೆ ಪ್ರದೇಶದ ಕಲಾವಿದರು ಪಾಲ್ಗೊಂಡಿದ್ದರು. ಬದಲಾದ ಕಾಲಘಟ್ಟದಲ್ಲಿ ಕಲಾವಿದರು ಹೇಗೆ ತಮ್ಮೊಳಗಿನ ಆಲೋಚನಾ ಲಹರಿ, ಕಲಾಕೃತಿಗಳ ರಚನೆಯ ಸಂದರ್ಭದಲ್ಲಿ ಮಾಧ್ಯಮಗಳನ್ನು ಹೇಗೆ ದುಡಿಸಿಕೊಳ್ಳಬಹು, ವ್ಯಕ್ತಿತ್ವ ವಿಕಸನಕ್ಕೆ ಏನೆಲ್ಲಾ ಮಾರ್ಗಗಳಿವೆ, ಈ ಸಂದರ್ಭದ ಅನಿವಾರ್ಯತೆಗಳು ಏನೇನು ಎನ್ನುವುದರ ಕುರಿತಾದ ಚರ್ಚೆಗಳು ನಡೆದವು. ಡಿಜಿಟಲ್ ಯುಗದಲ್ಲಿ ಕಲೆ-ಕಲಾವಿದರು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದಾನೆ ಎನ್ನುವುದರ ಕುರಿತು ಸಾಕ್ಷ್ಯ ಚಿತ್ರಗಳ ಸಮೇತ ವಿವರಿಸಲಾಯಿತು. ಪ್ರತಿಯೊಬ್ಬ ಕಲಾವಿದರೂ ತಮ್ಮ ಈವರೆಗಿನ ಕಲಾ ಪಯಣದ ಅನುಭವಗಳನ್ನು ಹಂಚಿಕೊಂಡರು. ತಾವು ರಚಿಸಿರುವ ಕಲಾಕೃತಿಗಳನ್ನು ಪ್ರದರ್ಶಿಸಿ ರಚನಾ ಕ್ರಮದ ಕುರಿತು ವಿವರಿಸಿದರು. ಕಲಾಕೃತಿಗಳಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿರುವ ಹೊಸತನಗಳ ಬಗ್ಗೆಯೂ ಉಳಿದ ಕಲಾವಿದರು ಪರಸ್ಪರ ಸಲಹೆಗಳನ್ನು ನೀಡಿ ಚರ್ಚಿಸಿದರು.
ಭಾರತ ಸರ್ಕಾರ ನವದೆಹಲಿ ಕೇಂದ್ರ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಕಲಾವಿದರಾದ, ಚಿ.ಸು. ಕೃಷ್ಣ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಗಾರ ನಡೆಯಿತು. ಹಿರಿಯ ಕಲಾವಿದರಾದ ವಿ. ಹರಿರಾಮ್ ಚೆನ್ನೆ ವೇಣುಗೋಪಾಲ ಎಚ್.ಎಸ್. ಬೆಂಗಳೂರು ಪ್ರಭು ಹರಸೂರು ಗುಲ್ಬರ್ಗ. ಕಿಶೋರ್ ಕುಮಾರ್ ತುಮಕೂರು ಕೆ.ಜಿ.ಲಿಂಗದೇವರು ಬೆಂಗಳೂರು ಬಿ.ಎಸ್.ದೇಸಾಯಿ ಹಾಸನ. ಕರಿಯಪ್ಪ ಹಂಚಿನಮನಿ ಹಾವೇರಿ. ಕೋಟೆಗದ್ದೆ ರವಿ ಶಿವಮೊಗ್ಗ, ಗಣಪತಿ ಅಗ್ನಿಹೋತ್ರಿ ಕಾರವಾರ, ಆನಂದ ಬೇಕವಾಡ್ ಪೂನಾ, ಹರೀಶ್ ಮಾಳಪ್ಪನವರ್ ಬ್ಯಾಡಗಿ, ಗಣೇಶ್ ದೊಡ್ಡಮನಿ ಬೆಳಗಾವಿ ಇವರೆಲ್ಲರೂ ಪಾಲ್ಗೊಂಡಿದ್ದರು. ಇಂತಹ ಕಾರ್ಯಾಗಾರಗಳು ಆಗಾಗ ನಡೆಯಬೇಕು. ಕಲಾವಿದರು ಪರಸ್ಪರ ಚರ್ಚಿಸುವ ಮನೋಭಾವ ಬೆಳೆಸಿಕೊಂಡಾಗ ಕಲಾಕೃತಿಗಳಲ್ಲಿ ಇನ್ನಷ್ಟು ಪ್ರಭುದ್ಧತೆ ಸಾಧಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು. ಇದೆ ವೇಳೆ ರಾಷ್ಟಿಯ ಕಲಾವಿದರು ಚಿ.ಸು. ಕೃಷ್ಣಶೆಟ್ಟಿ ದೆಹಲಿ, ಹರಿರಾಮ್ ಚೆನ್ನೆöÊ, ಬಿ.ಎಸ್. ದೇಸಾಯಿ ಹಾಸನ, ಲಿಂಗದೇವರು ಬೆಂಗಳೂರು, ಕಿಶೋರ್ ಕುಮಾರ್ ತುಮಕೂರು, ವೇಣುಗೋಪಾಲ್ ಬೆಂಗಳೂರು, ಹರೀಶ್ ಮಾಳಪ್ಪನವರ್ ಬ್ಯಾಡಗಿ, ಪ್ರಭು ಹರಸೂರು ಗುಲ್ಬರ್ಗ, ಕರಿಯಪ್ಪ ಹಂಚಿನಮನಿ ಹಾವೇರಿ, ಗಣೇಶ್ ದೊಡ್ಡಮನಿ ಬೆಳಗಾವಿ, ಗಣಪತಿ ಅಗ್ನಿಹೋತ್ರಿ ಉತ್ತರ ಕನ್ನಡ, ಆನಂದ್ ಬೆಕವಾಡ ಪೂನಾ, ಕೋಟೆಗದ್ದೆ ರವಿ ಶಿವಮೊಗ್ಗ ಇತರರು ಪಾಲ್ಗೊಂಡಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page