ದೆಹಲಿ: ಖಾಸಗಿ ವಾಹನಗಳಲ್ಲಿ ಎಲ್‌ಇಡಿ ಹೆಡ್‌ಲೈಟ್‌ಗಳ ಬಳಕೆ, ಕೆಂಪು ಮತ್ತು ನೀಲಿ ಬಣ್ಣದ ಬೀಕನ್‌ಗಳ (Beacon) ಖಾಸಗಿ ಉಪಯೋಗ ಹಾಗೂ ತುರ್ತು ವಾಹನಗಳ ಎಚ್ಚರಿಕೆಯ ಶಬ್ದ (ಸೌಂಡ್) ಬಳಸುವುದನ್ನು ನಿಷೇಧಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಕಾನೂನುಬಾಹಿರವಾಗಿ ಅಳವಡಿಸಲಾದ ಎಲ್‌ಇಡಿ ಲೈಟ್‌ಗಳು ರಸ್ತೆ ಅಪಘಾತಗಳನ್ನು ಹೆಚ್ಚಿಸುತ್ತಿವೆ. ಜೊತೆಗೆ, ತುರ್ತು ವಾಹನಗಳಿಗಾಗಿ ಮೀಸಲಾದ ಕೆಂಪು-ನೀಲಿ ಬೀಕನ್‌ಗಳನ್ನು ಖಾಸಗಿ ವಾಹನಗಳಲ್ಲಿ ಬಳಸುತ್ತಿರುವುದು ಜನರಿಗೆ ತಪ್ಪು ಸಂದೇಶ ನೀಡುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಾಲಯವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ತುರ್ತು ವಾಹನಗಳ ಎಚ್ಚರಿಕೆಯ ಶಬ್ದವನ್ನು ಸಹ ಖಾಸಗಿ ವಾಹನಗಳ ಮಾಲೀಕರು ಬಳಸುತ್ತಿದ್ದಾರೆ. ಇದರಿಂದ ಸಂಚಾರದ ವೇಳೆ ಅಪಘಾತ ಮತ್ತು ಪಾದಚಾರಿಗಳಿಗೆ ಗೊಂದಲ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಈ ಎಲ್ಲ ಅನಧಿಕೃತ ಸಾಧನಗಳ ಬಳಕೆಯನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ನ್ಯಾಯಾಲಯವು ಎಲ್ಲಾ ರಾಜ್ಯಗಳಿಗೆ ಆದೇಶ ನೀಡಿದೆ.