ಬೆಂಗಳೂರು: ಮಹಿಳೆಯೊಬ್ಬರು ಪ್ರಿಯಕರನಿಂದ ಮೋಸ ಹೋಗಿರುವುದಾಗಿ ಆರೋಪಿಸಿ ಕೈಯಲ್ಲಿ ಚಾಕು ಹಿಡಿದುಕೊಂಡು ಆತನ ಮನೆಯ ಟೆರೇಸ್ ಮೇಲೆ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿರುವ ಘಟನೆ ಹೆಗ್ಗನಹಳ್ಳಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಅಪರಿಚಿತ ಮಹಿಳೆ ಕಳೆದ 4-5 ವರ್ಷಗಳಿಂದ ಸ್ಥಳೀಯ ಬಿಜೆಪಿ ಮುಖಂಡ ಸುಂದರೇಶ್ ಜೊತೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಸೋಮವಾರ ಆಕೆ ತನ್ನ ಮನೆಯ ಟೆರೇಸ್ ಹತ್ತಿದಾಗ ಸುಂದರೇಶ್ ಮನೆಯಲ್ಲಿ ಇರಲಿಲ್ಲ. ಆತನನ್ನು ಮನೆಗೆ ಕರೆಸಿ ಎಂದು ಟೆರೇಸ್ ಮೇಲೆ ಹೋದ ಮಹಿಳೆ ಒತ್ತಾಯಿಸಿದ್ದಾಳೆ.
ಸುಂದರೇಶ್ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಮೋಸ ಮಾಡಿದ್ದಾನೆ ಎಂದು ಮಹಿಳೆ ಹೇಳಿದ್ದಾಳೆ. ಸ್ಥಳಕ್ಕಾಗಮಿಸಿದ ರಾಜಗೋಪಾಲನಗರ ಪೊಲೀಸರು ಮಹಿಳೆಯನ್ನು ಮನವೊಲಿಸಿ ಸುಂದರೇಶ್ ಅವರ ಮನೆಯ ಟೆರೇಸ್‌ನಿಂದ ಕೆಳಗಿಳಿಸಿ ಠಾಣೆಗೆ ಕರೆದೊಯ್ದರು.