Home ಆಟೋಟ ಭಾರತದ ಬ್ಯಾಟಿಂಗ್ ಅಬ್ಬರಕ್ಕೆ ಬೆದರಿದ ಬಾಂಗ್ಲಾ

ಭಾರತದ ಬ್ಯಾಟಿಂಗ್ ಅಬ್ಬರಕ್ಕೆ ಬೆದರಿದ ಬಾಂಗ್ಲಾ

0

ಚಿತ್ತಗಾಂಗ್: ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆಯುತ್ತಲಿರುವ ಏಕದಿನ ಕ್ರಿಕೆಟ್ ಸರಣಿಯಲ್ಲಿ ಇಂದು ಭಾರತ ತನ್ನ ಅತ್ಯದ್ಭುತ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನದಿಂದ ಬಾಂಗ್ಲಾದೇಶವನ್ನು ಬೃಹತ್ ಮೊತ್ತದ ಅಂತರದಿಂದ ಮಣಿಸಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಬಾಂಗ್ಲಾ ದೇಶಕ್ಕೆ‌ ಇಶಾನ್ ಕಿಶನ್ ಮತ್ತು ವಿರಾಟ್ ಕೊಹ್ಲಿ ಅವರ ವಿರಾಟ ಸ್ವರೂಪದ ಜೊತೆಯಾಟಕ್ಕೆ ತಡೆ ಹಾಕಲು ಸಾಧ್ಯವೇ ಆಗಲಿಲ್ಲ.

ಇಂದಿನ ಪಂದ್ಯ ಇಶಾನ್ ಕಿಶನ್ ಅವರ ಜೀವನದಲ್ಲಿ ಮರೆಯಲಾಗದ ದಿನವಾಗಿ ಉಳಿಯಲು ಚಿತ್ತಗಾಂಗ್ ಸಾಕ್ಷಿಯಾಯಿತು. 136 ಎಸೆತಗಳಲ್ಲಿ ಬರೋಬ್ಬರಿ 210 ರನ್ ಸಿಡಿಸಿ ಏಕದಿನ ಪಂದ್ಯದಲ್ಲಿ ಇನ್ನೂರು ರನ್ ಸಿಡಿಸಿದವರ ಗುಂಪಿಗೆ ಸೇರಿದರು. ಇದು ಇಶಾನ್‌ ಕಿಶನ್ ಅವರ ಚೊಚ್ಚಲ ದ್ವಿಶತಕವಾಗಿದೆ.

ಇಶಾನ್ ಜೊತೆಯಾಗಿ ನಿಂತ ವಿರಾಟ್ ಕೊಹ್ಲಿ 93 ಎಸೆತಗಳಲ್ಲಿ 113 ರನ್ ಸಿಡಿಸಿದರು. ಇದರೊಟ್ಟಿಗೆ ಅವರು ಏಕದಿನ ಕ್ರಿಕೆಟ್ ನಲ್ಲಿ ಒಟ್ಟು 44 ಸೆಂಚುರಿ ಬಾರಿಸಿದಂತಾಯಿತು.

ಒಟ್ಟಾರೆ ಇಶಾನ್ ಮತ್ತು ಕೊಹ್ಲಿ ಇಬ್ಬರೂ ತಮ್ಮ ಅದ್ಭುತ ಜೊತೆಯಾಟದೊಂದಿಗೆ ಬರೋಬ್ಬರಿ 290 ರನ್ ಕಲೆ ಹಾಕಿದರು.

ಇವರಿಬ್ಬರ ನಂತರ ಬಂದಂತಹ ಯಾವ ಆಟಗಾರರೂ ಹೆಚ್ಚು ಸಮಯ ಉಳಿಯಲಿಲ್ಲ. ಒಟ್ಟಾರೆ ಭಾರತ ತಂಡ 50 ಓವರ್ ಮುಕ್ತಾಯಕ್ಕೆ 8 ವಿಕೆಟ್ ನಷ್ಟಕ್ಕೆ  ಬರೋಬ್ಬರಿ 409 ರನ್ ಕಲೆಹಾಕಿತು.

ನಂತರ ಬ್ಯಾಟ್ ಹಿಡಿದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ ಪ್ರಾರಂಭದಲ್ಲಿ ಉತ್ತಮ ರೀತಿಯಲ್ಲಿಯೇ ಆರಂಭಿಸಿದರೂ ವಿಕೆಟ್ ಕಳೆದುಕೊಳ್ಳುತ್ತಾ ಹೋಯಿತು.

ನೂರರ ಗಡಿ ದಾಟುವ ತನಕ 4 ವಿಕೆಟ್ ಕಳೆದುಕೊಂಡರೆ ಕೆಲವೇ ಹೊತ್ತಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 34 ಓವರ್‌ಗಳಲ್ಲಿ 182 ರನ್ ಸೇರಿಸಿ ಗೆಲುವನ್ನು ನಿರಾಯಾಸವಾಗಿ ಭಾರತದ ಪಾಲಿಗೆ ಬಿಟ್ಟುಕೊಟ್ಟರು.

You cannot copy content of this page

Exit mobile version