Thursday, May 1, 2025

ಸತ್ಯ | ನ್ಯಾಯ |ಧರ್ಮ

ಇಡೀ ಪ್ರಪಂಚಕ್ಕೆ ಮಾದರಿಯಾದವರು ಬಸವಣ್ಣ : ಸಂಸದ ಶ್ರೇಯಸ್ ಪಟೇಲ್


ಹಾಸನ : ಇಡೀ ಪ್ರಪಂಚಕ್ಕೆ ಮಾದರಿಯಾದವರು ಬಸವಣ್ಣನವರು ಹಾಗಾಗಿ ಎಲ್ಲರೂ ಇವರನ್ನ ಪೂಜಿಸುತ್ತಾರೆ ಇದು ನಮ್ಮ ರಾಜ್ಯದ ಹೆಮ್ಮೆಯಾಗಿದೆ. ಇವರ ಸಾಧನೆ, ತತ್ವಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಸಂಸದರಾದ ಶ್ರೇಯಸ್ ಪಟೇಲ್ ಅವರು ತಿಳಿಸಿದ್ದಾರೆ. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕಂತಿ ಇಲಾಖೆಯ ಸಹಯೋಗದಲ್ಲಿ ಬುಧವಾರದಂದು ಆಯೋಜಿಸಿದ್ದ ಭಗವಾನ್ ಶ್ರೀ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರ ವಚನಗಳು ಎಲ್ಲರಿಗೂ ಮಾದರಿಯಾಗಿವೆ ಎಂದ ಅವರು ಸ್ವಾಮೀಜಿ ಅವರು ಹೇಳಿದಂತೆ ಶಾಲೆಯ ಪಠ್ಯಪುಸ್ತಕಗಳಲ್ಲಿ ವಚನಗಳನ್ನು ಪ್ರಕಟಿಸುವ ಕುರಿತು ಸರ್ಕಾರದ ಗಮನಕ್ಕೂ ತರುತ್ತೇನೆ ಎಂದರು. ಸರ್ಕಾರ ಆಚರಿಸುವ ಜಯಂತಿಗಳಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಗಮನಕ್ಕೆ ತಿಳಿಸಲು ಹೇಳಿದರಲ್ಲದೆ, ದಾಸ ಶ್ರೇಷ್ಠರ ಜಯಂತಿಗಳನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ಅವರ ತತ್ವಾದರ್ಶಕಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದು ಹೇಳಿದರು.


12ನೇ ಶತಮಾನದಲ್ಲೇ ಸಂಸತ್ತು ರೂಪಿತಗೊಂಡಿತ್ತು. ವೃತ್ತಿ ಧರ್ಮ, ಕಾಯಕ ಧರ್ಮವನ್ನು ಅಂದೆ ಜಾರಿಗೆ ತಂದಿದ್ದವರು ಬಸವಣ್ಣನವರಾಗಿದ್ದಾರೆ. ಅಂದಿನ ಕಾಲದಲ್ಲೇ ಬಸವಣ್ಣನವರು ಹೆಣ್ಣು ಭ್ರೂಣ ಹಕ್ಕಿಯನ್ನು ವಿರೋಧಿಸಿದವರಾಗಿದ್ದಾರೆ. ನಾವುಗಳು ಇಂದು ಯುವ ಜನಾಂಗಕ್ಕೆ ಸರಿಯಾದ ದಾರಿಯಲ್ಲಿ ನಡೆಯುವಂತೆ ತಿಳಿ ಹೇಳಿ ಜಾಗೃತರಾಗಿ ನಡೆಯುವಂತೆ ಮಾಡಬೇಕು, ಭಕ್ತಿಯ ಜೊತೆಗೆ, ಸಂಸ್ಕಾರವನ್ನು ಕಲಿಸಿಕೊಡಬೇಕು ಎಂದರು. ನಾವು ನಮ್ಮ ನಮ್ಮ ವ್ಯಾಪ್ತಿಯಲ್ಲಿ ಹೇಗೆ ಕೆಲಸವನ್ನು ಮಾಡುತ್ತೇವೆ ಎಂಬುದರಿAದ ದೇಶವನ್ನು ಕಟ್ಟಬಹುದು. ಹಾಗಾಗಿ ಸ್ವಾರ್ಥ ರಹಿತವಾಗಿ ಕೆಲಸ ಮಾಡಬೇಕು, ನಮ್ಮ ಮಾತು ಕೃತಿ ಒಂದೇ ಆಗಿರಬೇಕು, ಸತ್ಯವನ್ನ ನುಡಿಯಬೇಕು, ಪ್ರಾಮಾಣಿಕವಾಗಿರಬೇಕು, ನಮ್ಮತನವನ್ನು ನಾವು ಬಿಟ್ಟುಕೊಡಬಾರದು, ನಮ್ಮ ಸಂಸ್ಕöÈತಿಯನ್ನು ನಾವು ಮರೆಯಬಾರದು, ನಮ್ಮ ನೆಲ ಶ್ರೇಷ್ಠ, ಪವಿತ್ರ ನೆಲವಾಗಿದೆ. ಪ್ರತಿಯೊಬ್ಬರಲ್ಲಿಯೂ ಭಗವಂತನಿದ್ದಾನೆ ಅವನನ್ನು ನೋಡುವ ಪ್ರಯತ್ನ ನಾವುಗಳು ಮಾಡಬೇಕು. ನಮ್ಮನ್ನು ನಾವು ಚೈತನ್ಯಗೊಳಿಸಿಕೊಳ್ಳಬೇಕು. ಕಠಿಣ ಪರಿಶ್ರಮವಿದ್ದರೆ ಯಶಸ್ಸಿಗೆ ಬೇರೆಯ ದಾರಿಯ ಅವಶ್ಯಕತೆ ಇರುವುದಿಲ್ಲ ಹಾಗಾಗಿ ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡಿ ಎಂದು ಹೇಳಿದ್ದಾರೆ.


ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಸತ್ಯಭಾಮ ಅವರು ಕರ್ನಾಟಕ ರಾಜ್ಯದ ಗುರುತು ಬಸವಣ್ಣನವರಾಗಿದ್ದಾರೆ. ಅವರು ಅಲೆಗಳ ವಿರುದ್ಧವಾಗಿ ಈಜಿದವರು. ಭಕ್ತಿ ಯೋಗ, ಜ್ಞಾನ ಯೋಗ, ಕರ್ಮ ಯೋಗ ಈ ಮೂರನ್ನು ಅಳವಡಿಸಿಕೊಂಡಿರುವ ಮಹಾನ್ ಜ್ಞಾನಿ, ತತ್ವ ಯೋಗಿ ಕಾಯಕ ಯೋಗಿ, ಭಕ್ತಿ ಭಂಡಾರಿ ಎಂದರು.
ಬಸವಣ್ಣನವರ ತತ್ವಗಳನ್ನು, ಅವರು ನಡೆದು ಬಂದ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು. ಯಾರು ಸ್ವಾರ್ಥ ರಹಿತವಾಗಿ ಕೆಲಸಗಳನ್ನು ಮಾಡುತ್ತಾರೋ ಅವರೆಲ್ಲರೂ ಮಹಾತ್ಮರೆ ಎಂದ ಅವರು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಬಸವಣ್ಣನವರ ವಚನಗಳು, ಅನುಭವ ಮಂಟಪದ ವಿಚಾರಧಾರೆಗಳನ್ನು ಅನುಸರಿಸಬೇಕು. ಕಾಯಕ ಮಾಡುವುದರಿಂದ ನಮ್ಮ ಆರೋಗ್ಯವು ಸಹ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ಹಾಸನದ ಬಸವ ಕೇಂದ್ರದ ವತಿಯಿಂದ ಸಿದ್ಧಪಡಿಸಿದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ ಪರಿಸರ ಮತ್ತು ಸಾಹಿತ್ಯಕ್ಕೆ ಮುಖ್ಯ ಮಂತ್ರಿ ಅವರಿಂದ ಚಿನ್ನದ ಪ್ರಶಸ್ತಿ ಪುರಸ್ತರಾದ ಮತ್ತು ಏಕಲವ್ಯ ಪ್ರಶಸ್ತಿ ವಿಜೇತರಾದ ಕಾಂತರಾಜು ಅವರನ್ನು ಸನ್ಮಾನಿಸಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಹೆಚ್.ಪಿ ತಾರಾನಾಥ್, ಶ್ರೀ ವೀರಶೈವ ಲಿಂಗಾಯತ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಐಸಾಮಿಗೌಡ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎನ್. ಪರಮೇಶ್, ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಮಮತಾ ಪಾಟೀಲ್, ತಹಶೀಲ್ದಾರ್ ಗೀತಾ ಹಾಗೂ ಸಮುದಾಯದ ಇತರರು ಮುಖಂಡರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page