Home ಬ್ರೇಕಿಂಗ್ ಸುದ್ದಿ ಹಾಸನ ಪೆಟ್ರೋಲ್ ಬಂಕ್ ಗಳಲ್ಲಿ ಸಾರ್ವಜನಿಕರಿಗೆ ಮೂಲ ಸೌಕರ್ಯಗಳ ಕಡ್ಡಾಯ – ಜಿಲ್ಲಾಧಿಕಾರಿ ಸತ್ಯಭಾಮ

ಪೆಟ್ರೋಲ್ ಬಂಕ್ ಗಳಲ್ಲಿ ಸಾರ್ವಜನಿಕರಿಗೆ ಮೂಲ ಸೌಕರ್ಯಗಳ ಕಡ್ಡಾಯ – ಜಿಲ್ಲಾಧಿಕಾರಿ ಸತ್ಯಭಾಮ

ಹಾಸನ : ಜಿಲ್ಲೆಯ ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಈ ಕೆಳಗಿನ 9 ಉಚಿತ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಕಡ್ಡಾಯವಾಗಿ ಒದಗಿಸಬೇಕಾಗಿರುತ್ತದೆ.
ವಾಹನದ ಟೈರ್ ಗಳಿಗೆ ಉಚಿತ ಗಾಳಿಯ ಸೌಲಭ್ಯ, ಪೆಟ್ರೋಲ್ ಬಂಕ್ ಆವರಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಗ್ರಾಹಕರು ಮತ್ತು ಸಿಬ್ಬಂಧಿ ಇಬ್ಬರಿಗೂ ಶೌಚಾಲಯ ಸೌಲಭ್ಯಗಳು, ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್‌ಗಳ ಸೌಲಭ್ಯಗಳು, ಗ್ರಾಹಕರು ನಿಖರವಾದ ಇಂಧನವನ್ನು ಪಡೆಯುವಲ್ಲಿ ಪೆಟ್ರೋಲ್ ಬಂಕ್ ಸಿಬ್ಬಂಧಿ ಸಹಕರಿಸುವುದು, ಹಾಗೂ ಪೆಟ್ರೋಲ್ ಮತ್ತು ಡೀಸೆಲ್‌ನ ಗುಣಮಟ್ಟದ ಕುರಿತು ಗ್ರಾಹಕರಿಗೆ ಮಾಹಿತಿ ಒದಗಿಸುವುದು, ಪೆಟ್ರೋಲ್ ಬಂಕ್ ಆವರಣದಲ್ಲಿ ತುರ್ತು ಸಂಪರ್ಕ ಸಂಖ್ಯೆಗಳನ್ನು ಗ್ರಾಹಕರಿಗೆ ಕಾಣುವಂತೆ ಸ್ಪಷ್ಟ ಪ್ರದರ್ಶನ ಮಾಡುವುದು.
ಪೆಟ್ರೋಲ್ ಬಂಕ್ ಗಳಲ್ಲಿ ಸದರಿ ಮೂಲ ಸೌಕರ್ಯಗಳ ಕೊರತೆ ಕಂಡುಬಂದಲ್ಲಿ ಗ್ರಾಹಕರು ಈ ಕೆಳಕಂಡ ಅಧಿಕಾರಿಗಳಿಗೆ ದೂರು ನೀಡಲು ಕೋರಿದೆ. ದೂರವಾಣಿ ಮತ್ತು ವಿಳಾಸ ಸಂಬಂಧಪಟ್ಟ ಪೆಟ್ರೋಲ್/ಡೀಸೆಲ್ ಬಂಕ್ ಗಳಲ್ಲಿ ಲಭ್ಯವಿರುತ್ತದೆ, ಸೇಲ್ಸ್ ಆಫೀಸರ್ , ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ಹಾಸನ, ಸೇಲ್ಸ್ ಆಫೀಸರ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್, ಹಾಸನ, ಸೇಲ್ಸ್ ಆಫೀಸರ್, ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್, ಹಾಸನ ಇವರಿಗೆ ದೂರು ನೀಡಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

You cannot copy content of this page

Exit mobile version