Home ಬ್ರೇಕಿಂಗ್ ಸುದ್ದಿ ನೇರ ನಗದು ಬದಲಾಗಿ ಹೆಚ್ಚುವರಿ 5 ಕೆಜಿ ಅಕ್ಕಿ ವಿತರಣೆ – ಜಿಲ್ಲಾಧಿಕಾರಿ ಸತ್ಯಭಾಮ

ನೇರ ನಗದು ಬದಲಾಗಿ ಹೆಚ್ಚುವರಿ 5 ಕೆಜಿ ಅಕ್ಕಿ ವಿತರಣೆ – ಜಿಲ್ಲಾಧಿಕಾರಿ ಸತ್ಯಭಾಮ

ಹಾಸನ : ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಏಪ್ರಿಲ್-2025 ರ ಮಾಹೆಗೆ ಹಾಸನ ಜಿಲ್ಲೆಯ ಪ್ರತಿ ಅಂತ್ಯೋದಯ (ಎ.ಎ.ವೈ) ಪಡಿತರ ಚೀಟಿಗೆ 35 ಕೆ.ಜಿ ಸಾರವರ್ಧಿತ ಅಕ್ಕಿ ಮತ್ತು ಪಿ.ಹೆಚ್.ಹೆಚ್ (ಬಿ.ಪಿ.ಎಲ್) ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗೆ 05 ಕೆ.ಜಿ ಸಾರವರ್ಧಿತ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ. ಹಾಗೂ ಏಪ್ರಿಲ್-2025 ರಮಾಹೆಗೆ ರಾಜ್ಯದ ಅಂತ್ಯೋದಯ ಮತ್ತು ಆದ್ಯತಾ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ನೇರ ನಗದು ವರ್ಗಾವಣೆ ಬದಲಾಗಿ ಹೆಚ್ಚುವರಿ 05 ಕೆಜಿ ಓ.ಎಮ್.ಎಸ್.ಎಸ್.ಡಿ ಅಕ್ಕಿಯನ್ನು ನೀಡಲಾಗುತ್ತದೆ.


ಪ್ರಸ್ತುತ ಏಪ್ರಿಲ್-2025 ರ ಮಾಹೆಗೆ ಆದ್ಯತೇತರ ಪಡಿತರ ಚೀಟಿ (ಎ.ಪಿ.ಎಲ್) ಗೆ ಯಾವುದೇ ಆಹಾರ ಧಾನ್ಯ ಹಂಚಿಕೆಯಾಗಿರುವುದಿಲ್ಲವೆAದು ಪಡಿತರ ಚೀಟಿದಾರರಿಗೆ ಈ ಮೂಲಕ ತಿಳಿಯಪಡಿಸಿದೆ.ಒಂದು ರಾಷ್ಟ್ರ ಒಂದು ಪಡಿತರ ಚೀಟಿ (ಅಂತರ್ ರಾಜ್ಯ/ ಅಂತರ್ ಜಿಲ್ಲೆ) ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ರಾಜ್ಯದ ಪಡಿತರ ಚೀಟಿದಾರರು ಯಾವುದೇ ವರ್ಗದ ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಯಾವುದೇ ನ್ಯಾಯಬೆಲೆ ಅಂಗಡಿದಾರರು ಕಡಿಮೆ ಪ್ರಮಾಣದ ಪಡಿತರವನ್ನು ವಿತರಣೆ ಮಾಡಿದ್ದಲ್ಲಿ, ಹಣ ಕೇಳಿದ್ದಲ್ಲಿ ಮತ್ತು ಇತರೆ ದೂರುಗಳಿಗೆ ನಿಶುಲ್ಕ ದೂರವಾಣಿ ಸಂಖ್ಯೆ 1967 ಹಾಗೂ 1800-425-9339 ಮತ್ತು 14445 ಕ್ಕೆ ಹಾಗೂ ಆಯಾ ತಾಲ್ಲೂಕಿನಲ್ಲಿರುವ ತಹಶೀಲ್ದಾರರ ಕಚೇರಿಗೆ ಅಥವಾ ಜಿಲ್ಲೆಯ ಜಂಟಿ ನಿದೇರ್ಶಕರ ಕಚೇರಿಗೆ ದೂರನ್ನು ಸಲ್ಲಿಸಬಹುದಾಗಿದೆ.ಸದರಿ ಯೋಜನೆಯಡಿ ವಿತರಿಸಲಾದ ಆಹಾರ ಧಾನ್ಯಗಳನ್ನು ಹಣಕ್ಕಾಗಿ ಪಡಿತರ ಚೀಟಿದಾರರು ಮಾರಾಟ ಮಾಡುವುದಾಗಲಿ ಅಥವಾ ಸಂಗ್ರಹಣೆ ಮಾಡುವುದು ಕಂಡುಬAದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ವಿತರಿಸಲಾದ ಆಹಾರ ಧಾನ್ಯಗಳಿಗೆ ಮುಕ್ತ ಮಾರುಕಟ್ಟೆ ದರಕ್ಕೆ ದಂಡ ವಿಧಿಸಲಾಗುವುದು ಮತ್ತು ಸದರಿ ಪಡಿತರ ಚೀಟಿಯನ್ನು ಆರು ತಿಂಗಳ ಅವಧಿಗೆ ಅಮಾನತ್ತುಗೊಳಿಸಲಾವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

You cannot copy content of this page

Exit mobile version