Home ಬೆಂಗಳೂರು ಪೌರಕಾರ್ಮಿಕರ ಮೇಲೆ ಹಿಂಸಾಚಾರ, ಜಾತಿ ಮತ್ತು ಲಿಂಗಾಧಾರಿತ ದೌರ್ಜನ್ಯ ಎಸಗಿರುವುದರ ವಿರುದ್ಧ ತುರ್ತು ಕ್ರಮಕ್ಕಾಗಿ ಬಿಬಿಎಂಪಿ...

ಪೌರಕಾರ್ಮಿಕರ ಮೇಲೆ ಹಿಂಸಾಚಾರ, ಜಾತಿ ಮತ್ತು ಲಿಂಗಾಧಾರಿತ ದೌರ್ಜನ್ಯ ಎಸಗಿರುವುದರ ವಿರುದ್ಧ ತುರ್ತು ಕ್ರಮಕ್ಕಾಗಿ ಬಿಬಿಎಂಪಿ ಪೌರಕಾರ್ಮಿಕರ ಸಂಘ ಆಗ್ರಹ

0

ಬೆಂಗಳೂರು: ಸೆಪ್ಟೆಂಬರ್ 11, 2024ರಂದು ಬಿಬಿಎಂಪಿ ವಾರ್ಡ್ ಸಂಖ್ಯೆ 72ರಲ್ಲಿ ಕೆಲಸ ಮಾಡುತ್ತಿದ್ದ ಆರು ಜನ ಮಹಿಳಾ ಪೌರಕಾಮಿಕರ ಮೇಲೆ ಭೀಕರವಾಗಿ ಹಲ್ಲೆ ಮಾಡಿ, ಜಾತಿ ನಿಂದನೆ ಎಸಗಲಾಗಿದೆ. ಸ್ಥಳೀಯ ನಿವಾಸಿಯಾದ ಚಂದ್ರು ಮತ್ತು ಅವರ ತಾಯಿಯವರು ಪೌರಕಾರ್ಮಿಕರ ಜಾತಿಯನ್ನು ಆಧರಿಸಿ ನಿಂದನೆಗೆ ಒಳಪಡಿಸಿದರು ಹಾಗೂ ಈ ದೌರ್ಜನ್ಯದ ಘಟನೆಯನ್ನು ಫೋನಿನಲ್ಲಿ ರೆಕಾರ್ಡ್ ಮಾಡುತ್ತಿದ್ದ ಮತ್ತೊಬ್ಬರು ಪೌರಕಾರ್ಮಿಕರ ಮೇಲೆ ದೈಹಿಕ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಫೋನನ್ನು ಒಡೆದುಹಾಕಿ, ಇತರೆ ಪೌರಕಾರ್ಮಿಕರನ್ನೂ ಹೊಡೆದು ಅವರುಗಳಿಗೆ ಗಾಯಗಳಾಗಿವೆ.

SC/ST ದೌರ್ಜನ್ಯ ತಡೆ ಕಾಯ್ದೆಯಡಿ FIR ದಾಖಲಿಸಿದ್ದರೂ ಸಹ ಆರೋಪಿಗಳನ್ನು ಇದುವರೆಗೂ ಬಂಧಿಸಿರುವುದಿಲ್ಲ. ಹಿಂಸಾಚಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಬಿಬಿಎಂಪಿ ಪೌರಕಾರ್ಮಿಕರ ಸಂಘವು ಖಂಡಿಸಿದೆ.

ಆರೋಪಿಗಳನ್ನು ಬಂಧಿಸದಿರುವ ಪೋಲೀಸರ ವಿಫಲತೆಯನ್ನು ಇಂದಿನ ಪತ್ರಿಕಾ ಗೋಷ್ಠಿಯಲ್ಲಿ ಬಿಬಿಎಂಪಿ ಪೌರಕಾರ್ಮಿಕರ ಸಂಘವು ತಿಳಿಸಿತು ಮತ್ತು ಇಂತಹ ಅಸುರಕ್ಷಿತ ವಾತಾವರಣದಲ್ಲಿಯೇ ಈ ಕಾರ್ಮಿಕರು ಕೆಲಸ ಮಾಡುತ್ತಿರುವ ಕುರಿತು ವಿವರಣೆಯನ್ನು ನೀಡಿತು.

ತುರ್ತಾಗಿ ನ್ಯಾಯ ಒದಗಿಸಲು ಮತ್ತು ವ್ಯವಸ್ಥೆಯಲ್ಲಿ ಬದಲಾವಣೆಗಳಿಗಾಗಿ ಒತ್ತಾಯಿಸಲು ನಾಳೆ, ಅಂದರೆ ದಿನಾಂಕ 18.09.2024ರಂದು, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮುಂಜಾನೆ 11ರಿಂದ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಸಂಘ ತಿಳಿಸಿದೆ.

You cannot copy content of this page

Exit mobile version