ಬೆಂಗಳೂರಿನ ಭಾರೀ ಮಳೆಯಿಂದ ಕಟ್ಟಡ ಕುಸಿತ: ಇಬ್ಬರ ಸಾವು

ಬೆಂಗಳೂರು : ಬೆಂಗಳೂರಿನಲ್ಲಿ ನೆನ್ನೆ ರಾತ್ರಿ ಸುರಿದ ಜೋರು ಮಳೆಯಿಂದಾಗಿ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದು, ಮೂರು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ವೈಟ್‌ಫೀಲ್ಡ್‌ ಬಳಿಯ ಹೂಡಿಯಲ್ಲಿ ನಡೆದಿದೆ.

ಸೋಮವಾರದಂದು ಸುರಿದ ಭಾರೀ ಮಳೆಯಿಂದಾಗಿ ಬಿಎಲ್‌ಆರ್‌ ಕಂಪನಿಗೆ ಸೇರಿದ ಹಳೆಯ ಕಟ್ಟಡವೊಂದು ಸಂಪೂರ್ಣ ಕುಸಿದಿದೆ. ಈ ವೇಳೆ ಕಟ್ಟಡದ ಕೆಳಗಿನ ಕೊಠಡಿಯಲ್ಲಿ ಮಲಗಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಕುರಿತು ಮಹಾದೇವಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಕಟ್ಟಡದಲ್ಲಿದ್ದ ಮೂವರನ್ನು ರಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ಪಟ್ಟ ಇಬ್ಬರನ್ನು ಬಿಹಾರ ಮೂಲದ ಜೈನುದ್ದೀನ್‌, ಹರಮಾನ್‌ ಎಂದು ಗುರುತಿಸಲಾಗಿದೆ.

ಇದನ್ನೂ ನೋಡಿ : 14 ದಲಿತ ಮಹಿಳಾ ಕಾರ್ಮಿಕರನ್ನು ಕೂಡಿಟ್ಟು ಹಿಂಸೆ ಕೊಟ್ಟ ಎಸ್ಟೇಟ್ ಮಾಲೀಕ

Related Articles

ಇತ್ತೀಚಿನ ಸುದ್ದಿಗಳು