Monday, June 17, 2024

ಸತ್ಯ | ನ್ಯಾಯ |ಧರ್ಮ

ಬೆಟರ್‌ ಬೆಂಗಳೂರು ಬಗ್ಗೆ ಹೇಳಿದ ಡಿಕೆಶಿ : ಸಿಡಿದೆದ್ದ ಬಿಜೆಪಿ

ಬೆಂಗಳೂರು : “ಬೆಟರ್‌ ಬೆಂಗಳೂರು ಕ್ರಿಯಾ ಯೋಜನೆ ಸಮಿತಿ” ರಚಿಸುವ ಯೋಜನೆಯಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಪಕ್ಟವು ಬೆಂಗಳೂರಿನಲ್ಲಿ ಐತಿಹಾಸಿಕ ಬದಲಾವಣೆ ತರುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಟ್ವೀಟ್‌ ಮಾಡಿದ್ದು, ಈ ಕುರಿತು ಬಿಜೆಪಿ ಪ್ರಶ್ನೆಗಳ ಸುರಿಮಳೆ ಸುರಿಸಿದೆ.

“2023ರಿಂದ 2028ರೊಳಗೆ ಕಾಂಗ್ರೆಸ್ ಪಕ್ಷವು ಬೆಂಗಳೂರಿನಲ್ಲಿ ಐತಿಹಾಸಿಕ ಬದಲಾವಣೆ ತರಲಿದ್ದು, ಬದುಕಲು, ದುಡಿಯಲು ಯೋಗ್ಯವಾದ ವಿಶ್ವದ ಅಗ್ರಗಣ್ಯ ನಗರವನ್ನಾಗಿಸಲಿದೆ. ಇದು ಸಾಧ್ಯವಾಗಲು ಮೊದಲು ಬೆಂಗಳೂರು ಟ್ರಾಫಿಕ್ ಸಮಸ್ಯೆಯನ್ನು ಸರಿಪಡಿಸಬೇಕು, ಹವಾಮಾನ ಬದಲಾವಣೆ ಎದುರಿಸಲು ಸಿದ್ಧಗೊಳಿಸಬೇಕು” ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್‌ ಹಂಚಿಕೊಂಡಿದ್ದರು.

ಇದರಿಂದ ಸಿಡಿದೆದ್ದ ರಾಜ್ಯ ಬಿಜೆಪಿ ಸರ್ಕಾರ 2023 ರಿಂದ 2028 ರೊಳಗೆ ಕಾಂಗ್ರೆಸ್‌ ಪಕ್ಷ ಬೆಂಗಳೂರಿನಲ್ಲಿ ಐತಿಹಾಸಿಕ ಬದಲಾವಣೆ ತರಲಿದೆ ಎಂದು ಘೋಷಣೆ ಮಾಡಿದ್ದೀರಿ. ಆದರೆ 2013 ರಿಂದ 2018ರ ವರೆಗೆ ನೀವು ಅಧಿಕಾರಿದಲ್ಲಿದ್ದಾಗೆ ಮಾಡಿದ್ದಾದ್ರು ಏನು? ಎಂದು ಡಿಕೆಶಿ ಅವರಿಗೆ ಪ್ರಶ್ನೆ ಮಾಡಿದೆ.

ʼನಿಮಗೆ ಅಧಿಕಾರವಿಲ್ಲದಾಗ “ಬೆಟರ್‌ ಬೆಂಗಳೂರು ಕ್ರಿಯಾ ಯೋಜನೆ ಸಮಿತಿ” ರಚಿಸುವ ನೀವು ಅಧಿಕಾರದಲ್ಲಿರುವಾಗ ಗಾರ್ಡನ್‌ ಸಿಟಿ ಖ್ಯಾತಿಯ ಬೆಂಗಳೂರನ್ನು ಗಾರ್ಬೇಜ್‌ ಸಿಟಿ ಮಾಡಿದ್ದೇಕೆ? ಎಂದು ಬಿಜೆಪಿ ಕಿಡಿಕಾರಿದೆ.

Related Articles

ಇತ್ತೀಚಿನ ಸುದ್ದಿಗಳು