Home ದೇಶ ನಾಳೆ ಕಾರ್ಮಿಕ ಸಂಘಟನೆಗಳಿಂದ “ಭಾರತ್ ಬಂದ್” ; ಏನಿರುತ್ತೆ, ಏನಿರಲ್ಲ?

ನಾಳೆ ಕಾರ್ಮಿಕ ಸಂಘಟನೆಗಳಿಂದ “ಭಾರತ್ ಬಂದ್” ; ಏನಿರುತ್ತೆ, ಏನಿರಲ್ಲ?

0

ಸುಮಾರು 10 ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳ ನಿರ್ಧಾರದ ಹಿನ್ನೆಲೆಯಲ್ಲಿ ನಾಳೆ ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಭಾರತ ಸರ್ಕಾರದ ‘ಕಾರ್ಮಿಕ-ರೈತ ವಿರೋಧಿ’ ನೀತಿಗಳ ವಿರುದ್ಧ ಈ ಬಂದ್ ನಡೆಸಲಾಗುತ್ತಿದೆ ಎಂದು ಕಾರ್ಮಿಕ ಸಂಘಟನೆಗಳು ಹೇಳಿಕೊಂಡಿದೆ.

ಭಾರತದಾದ್ಯಂತ 10 ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳ ಒಕ್ಕೂಟ ನೀಡಿದ ಬಂದ್ ಗೆ ರಾಷ್ಟ್ರ ಮಟ್ಟದಲ್ಲಿ 25 ಕೋಟಿಗೂ ಹೆಚ್ಚು ಕಾರ್ಮಿಕರು ಒಳಗೊಳ್ಳಲಿದ್ದು ಹಲವು ಸಾರ್ವಜನಿಕ ಸೇವೆಗಳು ವ್ಯತ್ಯಯ ಉಂಟಾಗಲಿದೆ ಎಂದು ವರದಿಯಾಗಿದೆ. ಬಂದ್‌ನಿಂದ ಬ್ಯಾಂಕಿಂಗ್, ಸಾರಿಗೆ, ಅಂಚೆ, ಕಲ್ಲಿದ್ದಲು ಗಣಿಗಾರಿಕೆ, ಮತ್ತು ಸಾರ್ವಜನಿಕ ವಲಯದ ಕೈಗಾರಿಕೆಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ವ್ಯಾಪಕ ಅಡಚಣೆಯಾಗುವ ಸಾಧ್ಯತೆಯಿದೆ.

ಮುಷ್ಕರದಿಂದಾಗಿ ಬ್ಯಾಂಕ್‌ಗಳು ಮುಚ್ಚಲ್ಪಡಬಹುದು, ಚೆಕ್ ಕ್ಲಿಯರೆನ್ಸ್, ಗ್ರಾಹಕ ಸೇವೆಗಳು, ಮತ್ತು ಇತರ ಹಣಕಾಸು ಚಟುವಟಿಕೆಗಳು ಸ್ಥಗಿತಗೊಳ್ಳಬಹುದು. ಅಂಚೆ ಕಚೇರಿಗಳು, ಕಲ್ಲಿದ್ದಲು ಗಣಿಗಾರಿಕೆ ಘಟಕಗಳು, ಕಾರ್ಖಾನೆಗಳು, ಮತ್ತು ರಾಜ್ಯ ಸಾರಿಗೆ ಬಸ್‌ಗಳ ಕಾರ್ಯಾಚರಣೆಯೂ ತೊಂದರೆಗೊಳಗಾಗಬಹುದು. ಕೆಲವು ಶಾಲೆಗಳು ಮತ್ತು ಕಾಲೇಜುಗಳು ಸಹ ಮುಚ್ಚಲ್ಪಡಬಹುದು.

ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ 17 ಅಂಶಗಳ ಬೇಡಿಕೆಗಳ ಮೇಲೆ ಈ ಮುಷ್ಕರ ಆಧರಿಸಿದೆ.
ಪ್ರಮುಖ ಬೇಡಿಕೆಗಳು ಈ ಕೆಳಗಿನಂತಿದೆ:
* ನಾಲ್ಕು ಕಾರ್ಮಿಕ ಸಂಹಿತೆಗಳ ರದ್ದತಿ: ಈ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುತ್ತವೆ ಎಂದು ಆರೋಪ.
* ಕೆಲಸದ ಸಮಯ ನಿಯಂತ್ರಣ: ಕೆಲಸದ ಸಮಯ ಹೆಚ್ಚಳವನ್ನು ವಿರೋಧಿಸಲಾಗುತ್ತಿದೆ.
* ಗುತ್ತಿಗೆ ವಿರೋಧ: ಗುತ್ತಿಗೆ ಆಧಾರಿತ ನೇಮಕಾತಿಗಳು ಕಾರ್ಮಿಕರ ಭದ್ರತೆಗೆ ಧಕ್ಕೆ ತರುತ್ತಿವೆ.
* ಹೊಸ ಉದ್ಯೋಗ ಸೃಷ್ಟಿ: ಸರ್ಕಾರಿ ಮತ್ತು ಸಾರ್ವಜನಿಕ ವಲಯದಲ್ಲಿ ಶಾಶ್ವತ ಉದ್ಯೋಗ ಕೊರತೆ.
* ಕಾರ್ಪೊರೇಟ್ ವಿರೋಧ: ಕಾರ್ಪೊರೇಟ್ ಹಿತಾಸಕ್ತಿಗೆ ಆದ್ಯತೆ ನೀಡುವ ನೀತಿಗಳ ವಿರುದ್ಧ.

ರೈಲ್ವೆ, ಆರೋಗ್ಯ, ಮತ್ತು ತುರ್ತು ಸೇವೆಗಳಂತಹ ಅಗತ್ಯ ಸೇವೆಗಳಿಗೆ ಈ ಬಂದ್‌ನಿಂದ ವಿನಾಯಿತಿ ನೀಡಲಾಗಿದೆ. ಮಾರುಕಟ್ಟೆಗಳು ಮತ್ತು ಅಂಗಡಿಗಳು ಭಾಗಶಃ ಕಾರ್ಯನಿರ್ವಹಿಸಬಹುದು. ಡಿಜಿಟಲ್ ಬ್ಯಾಂಕಿಂಗ್ ಸೇವೆಗಳಾದ UPI ಮತ್ತು ನೆಟ್ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸಬಹುದು. ಆದರೆ ತಾಂತ್ರಿಕ ತೊಂದರೆಗಳ ಸಾಧ್ಯತೆಯಿದೆ. 

You cannot copy content of this page

Exit mobile version