Monday, June 23, 2025

ಸತ್ಯ | ನ್ಯಾಯ |ಧರ್ಮ

ಭಾರತ, ಬ್ರಿಟನ್‌ ನಡುವಿನ ಸಂಬಂಧ ಬಲಗೊಳಿಸಲು ಉತ್ಸುಕನಾಗಿದ್ದೇನೆ : ರಿಶಿ ಸುನಕ್‌

ಹೊಸದಿಲ್ಲಿ: ಬ್ರಿಟನ್‌ ನೂತನ ಪ್ರಧಾನಿ ರಿಶಿ ಸುನಕ್‌ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ರಿಶಿ ಸುನಕ್‌ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಬ್ರಿಟನ್‌ ನೂತನ ಪ್ರಧಾನಿ ರಿಶಿ ಸುನಕ್‌ ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದ್ದು, ಅಭಿನಂದನೆ ಸಲ್ಲಿಸಿದ್ದಾರೆ. ನಂತರ ದೇಶಗಳ ನಡುವಿನ ಭದ್ರತೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಚರ್ಚಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಬ್ರಿಟನ್‌ ಪ್ರಧಾನಿ ರಿಶಿ ಸುನಕ್‌, ʼಬ್ರಿಟನ್‌ ಮತ್ತು ಭಾರತವು ಮುಂದಿನ ದಿನಗಳಲ್ಲಿ ನಮ್ಮ ಭದ್ರತೆ, ರಕ್ಷಣೆ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಹೆಚ್ಚಿಸಲು ನಮ್ಮ ಬ್ರಿಟನ್‌ ಮತ್ತು ಭಾರತದ ಪ್ರಜಾಪ್ರಭುತ್ವಗಳ ಸಂಬಂಧವನ್ನು ಬಲಗೊಳಿಸಲು ನಾನು ಉತ್ಸುಕನಾಗಿದ್ದೇನೆʼ ಎಂದು ಹೇಳಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page