ನವದೆಹಲಿ: ಗೂಗಲ್ ಡೂಡಲ್ ʼಭಾರತದ ಹವಾಮಾನ ಮಹಿಳೆʼ ಅನ್ನಾ ಮಣಿ ಅವರ 104 ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.
ಗೂಗಲ್ ಭಾರತೀಯ ಭೌತಶಾಸ್ತ್ರಜ್ಞೆ ಮತ್ತು ಹವಾಮಾನಶಾಸ್ತ್ರಜ್ಞೆ ಅನ್ನಾ ಮಣಿ ಅವರ ಚಿತ್ರವನ್ನು ವಿಶೇಷವಾಗಿ ಬಣ್ಣಬಣ್ಣದಲ್ಲಿ ಚಿತ್ರಿಸಿ ಗೌರವವನ್ನು ಸಲ್ಲಿಸಿದೆ.
ಅನ್ನಾ ಮಣಿ ಅವರು ಆಗಸ್ಟ್ 23, 1918 ರಂದು ಕೇರಳದ ಪೀರುಮೆಟ್‌ನಲ್ಲಿ ಜನಿಸಿದರು. ಅವರು 1939 ರಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಬಿಎಸ್ಸಿ ಗೌರವ ಪದವಿಯೊಂದಿಗೆ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವಿ ಪಡೆದರು ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಸಿ.ವಿ.ರಾಮನ್ ಅವರ ಅಡಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧನೆ ಮಾಡಿದರು.