ಮುಂಬೈ: ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ)ಯು ಗುರುವಾರ ಭಾರತೀಯ ಒಲಂಪಿಕ್ ಸಂಸ್ಥೆ(ಐಒಎ)ಗೆ ತನ್ನ ಆಡಳಿತದ ಕಾಳಜಿಗಳನ್ನು ಪರಿಹರಿಸಿ ಡಿಸೆಂಬರ್‌ನೊಳಗೆ ಚುನಾವಣೆಗಳನ್ನು ನಡೆಸಲಿಲ್ಲದಿದ್ದರೆ ವಿಶ್ವ ಕ್ರೀಡಾ ಸಂಸ್ಥೆಯು ಭಾರತವನ್ನು ನಿಷೇಧಿಸುತ್ತದೆ ಎಂದು ಅಂತಿಮ ಎಚ್ಚರಿಕೆ ನೀಡಿದೆ.
ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯು ತನ್ನ ಚುನಾವಣೆಗಳನ್ನು ನಡೆಸಲು ಡಿಸೆಂಬರ್ 2022 ರವರೆಗೆ ಭಾರತಕ್ಕೆ ಕಾಲಾವಕಾಶವನ್ನು ನೀಡಿದೆ. ಇಲ್ಲದಿದ್ದರೆ ವಿಶ್ವ ಸಂಸ್ಥೆಯ ಕಾರ್ಯಕಾರಿ ಮಂಡಳಿಯು ಸಭೆ ಸೇರಿದಾಗ ತಕ್ಷಣದ ಅಮಾನತು ಎದುರಿಸಬೇಕಾಗುತ್ತದೆ ಎಂದು ತಿಳಿಸಿದೆ.
ಮುಂದಿನ ವರ್ಷ ಮುಂಬೈನಲ್ಲಿ ನಡೆಯಲಿರುವ ಐಒಸಿ ಅಧಿವೇಶನವನ್ನು ಅದರ ಮೂಲ ದಿನಾಂಕದಿಂದ ಸೆಪ್ಟೆಂಬರ್-ಅಕ್ಟೋಬರ್‌ಗೆ ಮುಂದೂಡಲು ಕಾರ್ಯಕಾರಿ ಮಂಡಳಿ(ಇಬಿ)ನಿರ್ಧರಿಸಿದೆ.