ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ: ಇಬ್ಬರು ಜವಾನರಿಗೆ ಗಾಯ

ನಾಗಲ್ಯಾಂಡ್:‌ ಇಂದು ಮುಂಜಾನೆ ನಾಗಾಲ್ಯಾಂಡ್‌ನ ಸೋಮ ಜಿಲ್ಲೆಯಲ್ಲಿ ಶಂಕಿತ ಎನ್‌ಎಸ್‌ಸಿಎನ್-ಕೆವೈಎ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಅಸ್ಸಾಂ ರೈಫಲ್ಸ್ ಜವಾನರು ಗಾಯಗೊಂಡಿದ್ದಾರೆ.

ಗಾಯಗೊಂಡ ಯೋಧರನ್ನು ಜೋರ್ಹತ್ ಏರ್ ಫೋರ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ಉಗ್ರಗಾಮಿಗಳ ಸಾವುನೋವು ಸಹ ಶಂಕಿತವಾಗಿದೆ, ಹಾಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಭಾರತದ ಹಳೆಯ ಸೇನಾ ಶಾಖೆ ಅಸ್ಸಾಂ ರೈಫಲ್ಸ್ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು