Friday, April 26, 2024

ಸತ್ಯ | ನ್ಯಾಯ |ಧರ್ಮ

Paytm ಗ್ರಾಹಕರು ನಿರಾಳ… ದೊಡ್ಡ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡ ಪೇಟಿಎಂ!

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಮುಖ ಫಿನ್ಟೆಕ್ ಸಂಸ್ಥೆ Paytm ಒಡೆತನದ Paytm ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ppbl) ಮೇಲಿನ ನಿರ್ಬಂಧಗಳನ್ನು ಇನ್ನಷ್ಟು ಸಮಯಕ್ಕೆ ವಿಸ್ತರಿಸಿದೆ.

ಮಾರ್ಚ್ 15ರ ಒಳಗೆ, PPBL ಗ್ರಾಹಕರಿಗೆ ತಮ್ಮ ಖಾತೆಗಳನ್ನು ಇತರ ಬ್ಯಾಂಕ್‌ಗಳಿಗೆ ಬದಲಾಯಿಸಿಕೊಳ್ಳುವಂತೆ ರಿಸರ್ವ್‌ ಬ್ಯಾಂಕ್ ಸಲಹೆ ನೀಡಿದೆ. ಅತ್ತ, ಪೇಟಿಎಂ ಮುಖ್ಯಸ್ಥ ವಿಜಯ್ ಕುಮಾರ್ ಶರ್ಮಾ ಕೂಡಾ ಪ್ರಸ್ತುತ ಸಮಸ್ಯೆಗಳಿಂದ ಹೊರಬರಲು ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದ್ದಾರೆ.

ಇದರ ಭಾಗವಾಗಿ, Paytm ಅಧಿಕೃತವಾಗಿ ತಮ್ಮ ಕಂಪನಿಯ (Paytm) ನೋಡಲ್ ಖಾತೆಯನ್ನು Paytm ಪೇಮೆಂಟ್ಸ್ ಬ್ಯಾಂಕ್‌ನಿಂದ Axis ಬ್ಯಾಂಕ್‌ಗೆ ಬದಲಾಯಿಸಿರುವುದಾಗಿ ಘೋಷಿಸಿದೆ. ಈ ಮೂಲಕ ಆರ್‌ಬಿಐ ಗಡುವಿನ ನಂತರವೂ ಅಂದರೆ ಮಾರ್ಚ್ 15ರ ನಂತರ ಗ್ರಾಹಕರು ಎಂದಿನಂತೆ ತಮ್ಮ ಚಟುವಟಿಕೆಗಳನ್ನು ಮುಂದುವರಿಸಬಹುದು.

Paytm QR, ಸೌಂಡ್‌ಬಾಕ್ಸ್ ಮತ್ತು ಕಾರ್ಡ್ ಮೆಷಿನ್ ಸೇವೆಗಳು ಮಾರ್ಚ್ 15ರ ನಂತರ ವ್ಯಾಪಾರಿಗಳಿಗೆ ಎಂದಿನಂತೆ ಮುಂದುವರಿಯುತ್ತದೆ ಎಂದು ಕಂಪನಿ ತಿಳಿಸಿದೆ. ನೋಡಲ್ ಖಾತೆ ಎಂದರೆ ಕಾರ್ಪೊರೇಟ್ ಗ್ರಾಹಕರು ಮತ್ತು ವ್ಯಾಪಾರಿಗಳ ಎಲ್ಲಾ ರೀತಿಯ ವಹಿವಾಟುಗಳನ್ನು ಈ ಖಾತೆಯ ಮೂಲಕ ಇತ್ಯರ್ಥಗೊಳಿಸಲಾಗುತ್ತದೆ.

ಗ್ರಾಹಕರಿಗೆ RBI ಸಲಹೆ

PPBL ನೊಂದಿಗಿನ ವಹಿವಾಟಿನ ಬಗೆಗಿನ ಸಂದೇಹಗಳನ್ನು ನಿವಾರಿಸಲು ಗ್ರಾಹಕರ ಅನುಕೂಲಕ್ಕಾಗಿ ರಿಸರ್ವ್ ಬ್ಯಾಂಕ್ FAQ ಗಳನ್ನು (ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಮತ್ತು ಉತ್ತರಗಳು) ಬಿಡುಗಡೆ ಮಾಡಿದೆ. ಅದರ ಪ್ರಕಾರ..

ಮಾರ್ಚ್ 15ರ ನಂತರ ಪಿಪಿಬಿಎಲ್ ಖಾತೆಗಳಿಗೆ ಸಂಬಳ ಮತ್ತು ಪಿಂಚಣಿಗಳನ್ನು ಜಮಾ ಮಾಡಲಾಗುವುದಿಲ್ಲ. PPBL ಮೂಲಕ EMIಗಳು ಅಥವಾ OTT ಚಂದಾದಾರಿಕೆಗಳನ್ನು ಪಾವತಿಸುವವರು ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು.

PPBL ವಾಲೆಟ್ ಹೊಂದಿರುವವರು ಮಾರ್ಚ್ 15ರ ನಂತರವೂ ಅದರಲ್ಲಿನ ಬ್ಯಾಲೆನ್ಸ್ ಖಾಲಿಯಾಗುವವರೆಗೆ ಬಳಸಬಹುದು.

ಬ್ಯಾಲೆನ್ಸ್ ಇರುವವರೆಗೆ ಫಾಸ್ಟ್ಯಾಗ್‌ಗಳನ್ನು ಬಳಸಬಹುದು. ಆದರೆ ಮಾರ್ಚ್ 15ರ ನಂತರ‌ ಅಕೌಂಟ್ ಟಾಪ್ ಅಪ್ ಆಗುವುದಿಲ್ಲ. ಗಡುವಿನೊಳಗೆ ಇತರ ಬ್ಯಾಂಕ್‌ಗಳಿಂದ ಹೊಸ FASTAG ಪಡೆಯುವುದು ಉತ್ತಮ.

Paytm QR ಕೋಡ್, ಸೌಂಡ್‌ಬಾಕ್ಸ್, PPBL ಖಾತೆ ಅಥವಾ ವ್ಯಾಲೆಟ್‌ಗೆ ಲಿಂಕ್ ಮಾಡಲಾದ POS ಟರ್ಮಿನಲ್‌ಗಳ ಮೂಲಕ ಹಣವನ್ನು ಸ್ವೀಕರಿಸುವ ವ್ಯಾಪಾರಿಗಳು ಮತ್ತೊಂದು ಬ್ಯಾಂಕ್ ಖಾತೆ ಅಥವಾ ವ್ಯಾಲೆಟ್ ತೆರೆಯಬೇಕು. ಅವರ ಪೇಟಿಎಮ್ ಈಗಾಗಲೇ ಬೇರೊಂದು ಬ್ಯಾಂಕ್‌ನೊಂದಿಗೆ ಲಿಂಕ್ ಆಗಿದ್ದರೆ ಇದರ ಅಗತ್ಯವಿಲ್ಲ.

Related Articles

ಇತ್ತೀಚಿನ ಸುದ್ದಿಗಳು