ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶವು ರಾಷ್ಟ್ರೀಯ ಮಟ್ಟದಲ್ಲಿ ಬೀರಿರುವ ಪರಿಣಾಮ ಒಂದು ರೀತಿಯದ್ದಾದರೆ, ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮಹತ್ತರ ಮತ್ತು ತಾತ್ಕಾಲಿಕ ಪರಿಣಾಮ ಬೀರಿದೆ ಎಂಬುದು ಸ್ಪಷ್ಟವಾಗಿದೆ. ಇತ್ತ ನವೆಂಬರ್ ಕ್ರಾಂತಿಯ ಕನಸು ಕಾಣುತ್ತಿದ್ದವರಿಗೆ ಬಹುತೇಕ ಬಿಹಾರ ಚುನಾವಣೆ ತಣ್ಣೀರೆರಚಿದೆ.
ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದಿಂದಾಗಿ ಕರ್ನಾಟಕದಲ್ಲಿ ನಡೆಯಬೇಕಾಗಿದ್ದ ಮುಖ್ಯಮಂತ್ರಿ ಬದಲಾವಣೆಯ ನವೆಂಬರ್ ಕ್ರಾಂತಿಗೆ ತಾತ್ಕಾಲಿಕ ತಡೆ ಸಿಕ್ಕಂತಾಗಿದೆ. ನಿರೀಕ್ಷೆಯಂತೆ ಕಾಂಗ್ರೆಸ್ ನವರ ಮಂತ್ರಿಮಂಡಲ ಪುನಾರಚನೆ ಪ್ರಕ್ರಿಯೆಗೂ ಸಹ ತಾತ್ಕಾಲಿಕ ತಡೆಯಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ಪದವಿಯಲ್ಲೇ ಮುಂದುವರಿಸುವ ಬಗ್ಗೆ ಹೈಕಮಾಂಡ್ ಹೆಚ್ಚು ಚಿಂತನೆ ನಡೆಸಿದೆ ಎಂದು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಬಿಹಾರದಲ್ಲಿ ಕಾಂಗ್ರೆಸ್ ಪಕ್ಷದ ಭಾರಿ ಸೋಲು ಹೈಕಮಾಂಡ್ ಶಕ್ತಿಗೆ ದೊಡ್ಡ ಹಿನ್ನಡೆ ತಂದಿದೆ ಎಂದು ಪಕ್ಷದ ನಾಯಕರೂ ಒಪ್ಪಿಕೊಂಡಿದ್ದಾರೆ. ಈ ಸೋಲು ಎಷ್ಟು ಗಂಭೀರವಾಗಿದೆ ಎಂಬುದನ್ನು ನಾವು ಕರ್ನಾಟಕ ಕಾಂಗ್ರೆಸ್ ಪಕ್ಷದ ಹಿರಿಯರು ಅಥವಾ ಕಾರ್ಯಕರ್ತರ ನಡುವಿನ ವ್ಯಾಕುಲತೆ ಮತ್ತು ನಿರ್ಣಯದ ವಿಮರ್ಶೆಯಲ್ಲಿ ಕಾಣಬಹುದಾಗಿದೆ.
ಬಿಹಾರ ಚುನಾವಣಾ ಫಲಿತಾಂಶ ಶಿವಕುಮಾರ್ ನೇತೃತ್ವದ ತಂಡದ ಅಧಿಕಾರ ಹಸ್ತಾಂತರದ ನಿರೀಕ್ಷೆಗೆ ತಾತ್ಕಾಲಿಕವಾಗಿ ತಣ್ಣೀರೆರಚಿದೆ. ಮಂತ್ರಿಮಂಡಲ ಪುನಾರಚನೆ ಮಾಡುವ ಭರವಸೆಯೂ ಹೈಕಮಾಂಡ್‌ನಲ್ಲಿ ಈ ಒಂದು ಹೀನಾಯ ಸೋಲು ಸಧ್ಯಕ್ಕಂತೂ ಮುಖ್ಯಮಂತ್ರಿ ಬದಲಾವಣೆ ಮತ್ತು ಸಂಪುಟ ಪುನಾರಚನೆ ಕಷ್ಟ ಎನ್ನುವಂತಾಗಿದೆ.
ಹೈಕಮಾಂಡ್‌ನ ಕ್ರಮ ಮತ್ತು ಪಕ್ಷದ ನಿರ್ಧಾರ
ಪಕ್ಷದ ಹಿರಿಯ ವರಿಷ್ಠರು ಕರ್ನಾಟಕ ರಾಜ್ಯದಲ್ಲಿ ತ್ವರಿತ ಬದಲಾವಣೆಗೆ ಕೈ ಹಾಕುವ ಸಾಧ್ಯತೆ ಇಲ್ಲದೇ ತಾತ್ಕಾಲಿಕ ಮೌನದ ಹಾದಿ ವಹಿಸಬಹುದೆಂಬ ಸಾಧ್ಯತೆಯನ್ನು ಎತ್ತಿ ಹಿಡಿದಿದೆ.
ಈ ಎಲ್ಲಾ ರಾಜಕೀಯ ಬೆಳವಣಿಗೆಗಳು ಮುಂದೆ ರಾಜ್ಯದ ಕಾಂಗ್ರೆಸ್ ವೈಯಕ್ತಿಕ ಹಾಗೂ ಆರೋಗ್ಯಕರ ಆತ್ಮಾನ್ವೇಷಣೆಗೆ ಕಾರಣವಾಗಬಹುದು. ಈ ಮೂಲಕ ಬಹುತೇಕ ಹತ್ತಿರ ಬಂದಿದ್ದ ಕರ್ನಾಟಕ ಕಾಂಗ್ರೆಸ್ ನಾಯಕತ್ವ ಬದಲಾವಣೆ – ಮಂತ್ರಿಮಂಡಲ ಪುನಾರಚನೆಗೆ ತಾತ್ಕಾಲಿಕಕವಾಗಿ ಬ್ರೇಕ್ ಆಗಿರುವುದು ಸ್ಪಷ್ಟವಾಗಿದೆ.
