Thursday, June 19, 2025

ಸತ್ಯ | ನ್ಯಾಯ |ಧರ್ಮ

ಬಿಲ್ಕಿಸ್‌ ಬಾನೋ ಅಪರಾಧಿಗಳ ಬಿಡುಗಡೆ: ನಿಮಗೆ ನಾಚಿಕೆಯಾಗುತ್ತಿಲ್ಲವೇ? ಪ್ರಧಾನಿಗೆ ರಾಹುಲ್‌ ವಾಗ್ದಾಳಿ

ನವದೆಹಲಿ: ಕ್ರಿಮಿನಲ್‌ಗಳಿಗೆ ಬಿಜೆಪಿಯ ಬೆಂಬಲವು ಮಹಿಳೆಯರ ಬಗ್ಗೆ ಪಕ್ಷದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ ಮತ್ತು ಇಂತಹ ರಾಜಕೀಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಚಿಕೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶದ ಉನ್ನಾವೋ ಮತ್ತು ಹತ್ರಾಸ್, ಜಮ್ಮು ಮತ್ತು ಕಾಶ್ಮೀರದ ಕಥುವಾ ಮತ್ತು ಈಗ ಗುಜರಾತ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ಉದಾಹರಣೆಗಳನ್ನು ಅವರು ಉಲ್ಲೇಖಿಸಿದ್ದು, ಅಲ್ಲಿನ ಸರ್ಕಾರವು ಈ ವಾರ 2002 ರ ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಅತ್ಯಾಚಾರ ಮತ್ತು ಹತ್ಯೆಯ ಅಪರಾಧಿಗಳನ್ನು ಬಿಡುಗಡೆ ಮಾಡಿದೆ ಎಂದು ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್‌ ಮಾಡಿರುವ ರಾಹುಲ್‌, ಉನ್ನಾವೋ-ಬಿಜೆಪಿ ಶಾಸಕರನ್ನು ರಕ್ಷಿಸಲು ಕೆಲಸ ಮಾಡಿದೆ. ಕಥುವಾ-ಅತ್ಯಾಚಾರಿಗಳ ಪರವಾಗಿ ರ್ಯಾಲಿ. ಹತ್ರಾಸ್-ಅತ್ಯಾಚಾರಿಗಳ ಪರವಾಗಿ ಸರ್ಕಾರ. ಗುಜರಾತ್-ಅತ್ಯಾಚಾರಿಗಳ ಬಿಡುಗಡೆ ಮತ್ತು ಗೌರವ ಹಾಗೂ ಅಪರಾಧಿಗಳಿಗೆ ಬೆಂಬಲ ಮಹಿಳೆಯರ ಬಗ್ಗೆ ಬಿಜೆಪಿಯ ಕ್ಷುಲ್ಲಕ ಮನಸ್ಥಿತಿಯನ್ನು ತೋರಿಸುತ್ತದೆ. ಇಂತಹ ರಾಜಕಾರಣಕ್ಕೆ ನಾಚಿಕೆಯಾಗುವುದಿಲ್ಲವೇ’ ಎಂದು ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page